Advertisement

ಎ.1ರಿಂದ ಜಿಯೋ ಟ್ಯಾರಿಫ್ ಪ್ಲಾನ್‌; ವಾಯ್ಸ ಕಾಲ್‌, ರೋಮಿಂಗ್‌ ಫ್ರೀ

03:13 PM Feb 21, 2017 | |

ಹೊಸದಿಲ್ಲಿ : ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ರಿಲಯನ್ಸ್‌ ಜಿಯೋ ಹ್ಯಾಪಿ ಆಫ‌ರನ್ನು ಪ್ರೈಮ್‌ ಸದಸ್ಯರಿಗಾಗಿ ಒಂದು ವರ್ಷದ ಮಟ್ಟಿಗೆ ಪುನಃ ವಿಸ್ತರಿಸಿದ್ದಾರೆ. ಜಿಯೋ ಟ್ಯಾರಿಫ್ ಪ್ಲಾನ್‌ಗಳು ಇದೇ ವರ್ಷ ಎಪ್ರಿಲ್‌ 1ರಿಂದ ಜಾರಿಗೆ ಬರಲಿವೆ ಎಂದು ಹೇಳಿದ್ದಾರೆ. 

Advertisement

ಮುಕೇಶ್‌ ಅಂಬಾನಿ ಹೇಳಿರುವ ಮಾತುಗಳು ಸಂಕ್ಷಿಪ್ತವಾಗಿ ಇಂತಿವೆ : 

* ಜಿಯೋ ಆರಂಭಗೊಂಡು ಇಂದಿಗೆ ಸರಿಯಾಗಿ 170 ದಿನಗಳು ಆಗಿವೆ. ಈ ಅವಧಿಯಲ್ಲಿ 4ಜಿ ಎಲ್‌ಟಿಇ ನೆಟ್‌ವರ್ಕ್‌ನ ಜಿಯೋ ಗ್ರಾಹಕರ ಸಂಖ್ಯೆ 10 ಕೋಟಿ ದಾಟಿದೆ.  ಪ್ರತೀ ದಿನ ಪ್ರತೀ ಕ್ಷಣ ಜಿಯೋ ಜಾಲದಲ್ಲಿ 7 ಗ್ರಾಹಕರುಇದ್ದಾರೆ.

* ಜಿಯೋ ಗ್ರಾಹಕರು ಜಿಯೊ ನೆರ್ಟ್‌ವರ್ಕ್‌ನಲ್ಲಿ ಈ ತನಕ 100 ಕೋಟಿ ಜಿಬಿ ಗೂ ಅಧಿಕ ಡೇಟಾ ಬಳಸಿಕೊಂಡಿದ್ದಾರೆ – ಎಂದರೆ ಇದು ದಿನವಹಿ 3.3 ಕೋಟಿ ಜಿಬಿ ಡೇಟಾಗೆ ಹೆಚ್ಚು.

* ಭಾರತವು ಮೊಬೈಲ್‌ ಡೇಟಾ ಬಳಕೆಯಲ್ಲಿ ನಂಬರ್‌ 1 ಅಗುತ್ತಿದೆ.

Advertisement

* ಜಿಯೋ ತನ್ನ ಜಾಲದಲ್ಲಿ ದಿನವಹಿ 5.5 ಕೋಟಿ ತಾಸಿಗೂ ಅಧಿಕ ವಿಡಿಯೋ ಒಯ್ಯುತ್ತಿದೆ.

*ದಿನದಿಂದ ದಿನಕ್ಕೆ ನಾವು ನಮ್ಮ ಜಾಲದ ವೇಗವನ್ನು ಬಳಪಡಿಸುತ್ತಿದ್ದೇವೆ. 

* ಮುಂಬರುವ ದಿನಗಳಲ್ಲಿ ನಾವು ದೇಶದ ಜನಸಂಖ್ಯೆಯ ಶೇ.99ರಷ್ಟನ್ನು ನಮ್ಮ ಜಾಲಕ್ಕೆ ಒಳಪಡಿಸಿಕೊಳ್ಳಲಿದ್ದೇವೆ.

* ಎಲ್ಲ ಜಿಯೋ ಟ್ಯಾರಿಫ್ ಪ್ಲಾನ್‌ಗಳಲ್ಲಿ ಎಲ್ಲ ದೇಶೀಯ ಧ್ವನಿ ಕರೆಗಳು ಯಾವುದೇ ಜಾಲಕ್ಕೆ ಯಾವಾಗಲೂ ಉಚಿತವಾಗಿರುತ್ತವೆ.

* ಪ್ರೋಮೋ ಆಫ‌ರ್‌ ಕೊನೆಗೊಂಡ ಬಳಿಕ ಎಪ್ರಿಲ್‌ 1ರಿಂದ ರೋಮಿಂಗ್‌ ಇರುವುದಿಲ್ಲ; ಮುಂಬರುವ ದಿನಗಳಲ್ಲಿ ತನ್ನ ಈ ಸಾಮರ್ಥ್ಯವನ್ನು ಜಿಯೋ ದುಪ್ಪಟ್ಟು ಗೊಳಿಸಲಿದೆ.

* ಜಿಯೋ ಗ್ರಾಹಕ ಪ್ರೇಮಿ ಸಂಸ್ಥೆ. ನಮ್ಮ ಹೂಡಿಕೆ ಮತ್ತು ತಂತ್ರಜ್ಞಾನವು ಪ್ರಬಲ ಡೇಟಾ ಜಾಲವನ್ನು ಸೃಷ್ಟಿಸಿದೆ; ಡೇಟಾ ಎನ್ನುವುದು ಡಿಜಿಟಲ್‌ ಲೈಫ್ಗೆ ಆಮ್ಲಜನಕ ಇರುವ ಹಾಗೆ.

* ಜಿಯೋ ಇತರೆಲ್ಲ ಆಪರೇಟರ್‌ಗಳಿಗಿಂತ ಅತ್ಯಧಿಕ ಮಾರಾಟವಾಗುತ್ತಿರುವ ಟ್ಯಾರಿಫ್; ನಾವು ಯಾವತ್ತೂ ಇತರೆಲ್ಲ ಆಪರೇಟರ್‌ಗಳಿಗಿಂತ ಶೇ.20ರಷ್ಟು ಹೆಚ್ಚು ಡೇಟಾ ನೀಡುತ್ತೇವೆ.

* ಜಿಯೋ ಪ್ರೈಮ್‌ ಸದಸ್ಯರು 2018ರ ವರೆಗೂ ಹ್ಯಾಪಿ ನ್ಯೂ ಇಯರ್‌ ಪ್ಲಾನ್‌ ಬಳಸುವುದನ್ನು ಮುಂದುವರಿಸಬಹುದಾಗಿದೆ.

* ಜಿಯೋ ದ ಮೊದಲ 10 ಕೋಟಿ ಗ್ರಾಹಕರು ಪ್ರೈಮ್‌ ಸದಸ್ಯತ್ವ ಪಡೆಯುತ್ತಾರೆ.

* ಜಿಯೋ ಪ್ರೈಮ್‌ ಮೆಂಬರ್‌ಶಿಪ್‌ ಪ್ರೋಗ್ರಾಂ : ಗ್ರಾಹಕರು ಕೇವಲ 99 ರೂ.ಗಳ ಸಾಮಾನ್ಯ ಶುಲ್ಕ ಪಾವತಿಸಿ ನಮ್ಮನ್ನು ಸೇರಿಕೊಳ್ಳಬಹುದಾಗಿದೆ.

* ಜಿಯೋ ಪ್ರೈಮ್‌ ಮೆಂಬರ್‌ಶಿಪ್‌ : ಜಿಯೋ ಪ್ರೈಮ್‌ ಸದಸ್ಯರು ಮಾತ್ರವೇ ಕೇವಲ 303 ರೂ. ಮಾಸಿಕ ದರಕ್ಕೆ 12 ತಿಂಗಳಿಗೂ ಅಧಿಕ ಅತ್ಯದ್ಭುತ ಮೌಲ್ಯವನ್ನು ಪಡೆಯುತ್ತಾರೆ. 

ವರದಿಗಳ ಪ್ರಕಾರ ರಿಲಯನ್ಸ್‌ ಜಿಯೋ ಲಾವಾ ಇಂಟರ್‌ನ್ಯಾಶನಲ್‌ ಮತ್ತು ಚೀನಿ ಮೂಲದ ಸಾಧನಗಳನ್ನು ಬಳಸಿಕೊಂಡು ವೋಲ್ಡ್‌ ಫೀಚರ್‌ಗಳಿರುವ ಫೋನ್‌ಗಳನ್ನು ಉತ್ಪಾದಿಸುತ್ತಿದೆ.

ಈ ಫೋನ್‌ ಕೇವಲ 1,000 ರೂ. ಬೆಲೆಗೆ ಗ್ರಾಹಕರಿಗೆ ಶೀಘ್ರವೇ ಸಿಗುವ ನಿರೀಕ್ಷೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next