Advertisement
ಸಾಮಾನ್ಯವಾಗಿ ಡೈನ್‌ಔಟ್ ಬಳಕೆದಾರರು ಈ ವೇದಿಕೆಯಲ್ಲಿ ಕಾಯ್ದಿರಿಸುವಿಕೆಗಳಿಗಾಗಿ ಬುಕಿಂಗ್ ಶುಲ್ಕವನ್ನು ನೀಡಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ ಅವರು ಬಿಲ್ ಮೊತ್ತದ ಮೇಲೆ ರಿಯಾಯಿತಿ ಪಡೆಯಬಹುದಾಗಿದ್ದು, ಆಹಾರ, ಪಾನೀಯ ಮತ್ತು ಬಫೆಗಳ ಮೇಲೆ 1+1 ಆಫರ್‌ಗಳನ್ನೂ ಆನಂದಿಸಬಹುದು.
Related Articles
ಒಟ್ಟು ಬಿಲ್, ಆಹಾರದ ಬಿಲ್, ಪಾನೀಯಗಳ ಬಿಲ್ ಹಾಗೂ ಬಫೆಗಳ ಮೇಲೆ 50% ರಿಯಾಯಿತಿ ಹಾಗೂ ಕೂಪನ್‌ಗಳನ್ನು ನೀಡಲಿರುವ ಈ ಹಬ್ಬವು ಆಗಸ್ಟ್ 1ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿದೆ. ಈ ಕೊಡುಗೆಗಳನ್ನು ಕೆಳಕಂಡ 17 ನಗರಗಳ 8000+ ರೆಸ್ಟೋರೆಂಟ್‌ಗಳಾದ್ಯಂತ ಪಡೆಯಬಹುದು: ದೆಹಲಿ (ದೆಹಲಿ ಎನ್‌ಸಿಆರ್), ಮುಂಬಯಿ, ಬೆಂಗಳೂರು, ಕೋಲ್ಕಾತಾ, ಪುಣೆ, ಚೆನ್ನೈ, ಹೈದರಾಬಾದ್, ಅಹಮದಾಬಾದ್, ಚಂಡೀಗಢ, ಗೋವಾ, ಜೈಪುರ, ಲಖನೌ, ಇಂದೋರ್, ಸೂರತ್, ಕೊಚ್ಚಿ, ಲುಧಿಯಾನಾ ಹಾಗೂ ನಾಗಪುರ.
Advertisement
2017ರಲ್ಲಿ ಪ್ರಾರಂಭವಾದ ಜಿಐಆರ್‌ಎಫ್, ರೆಸ್ಟೋರೆಂಟ್ ಉದ್ಯಮದ ಮೊತ್ತಮೊದಲ ಆಹಾರ ಮತ್ತು ಪಾನೀಯಗಳ ಹಬ್ಬವಾಗಿದ್ದು, ಡೈನಿಂಗ್ ಔಟ್ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಭಾರತೀಯರು ಹೊರಗೆ ಆಹಾರ ಸೇವಿಸುವ ವಿಧಾನವನ್ನು ಬದಲಿಸುವ ಉದ್ದೇಶ ಹೊಂದಿದೆ. ಈ ಹಬ್ಬವು ಬಳಕೆದಾರರು ಹಾಗೂ ಪಾಲುದಾರ ರೆಸ್ಟೋರೆಂಟ್‌ಗಳಿಬ್ಬರಿಗೂ ಉಪಯುಕ್ತವಾಗಿದೆ. ಜನಪ್ರಿಯ ರೆಸ್ಟೋರೆಂಟ್‌ಗಳಲ್ಲಿ ದೊರಕುವ ಯಾವುದೇ ಪ್ರಶ್ನೆಗಳಿಲ್ಲದ 50% ರಿಯಾಯಿತಿ, ಕ್ಯಾಶ್‌ಬ್ಯಾಕ್, ಬ್ಯಾಂಕ್ ಕೊಡುಗೆ, ಪಾಲುದಾರರ ಕೊಡುಗೆ ಮತ್ತಿತರ ಸೌಲಭ್ಯಗಳು ಈ ಹಬ್ಬದ ಸಫಲತೆಗೆ ಪ್ರಮುಖ ಕಾರಣಗಳಾಗಿವೆ.
ನಾಲ್ಕನೇ ಆವೃತ್ತಿಯಲ್ಲಿ ನಿರೀಕ್ಷಿಸಬಹುದಾದ ಸಂಗತಿಗಳು* ಒಟ್ಟು ಬಿಲ್, ಆಹಾರದ ಬಿಲ್, ಪಾನೀಯಗಳ ಬಿಲ್ ಹಾಗೂ ಬುಫೆಗಳ ಮೇಲೆ 8000+ ರೆಸ್ಟೋರೆಂಟ್‌ಗಳಿಂದ 50% ರಿಯಾಯಿತಿ
* ಭಾರತದ 17 ನಗರಗಳ ಜನಪ್ರಿಯ ರೆಸ್ಟೋರೆಂಟ್‌ಗಳು ಫೆಸ್ಟಿವಲ್‌ನಲ್ಲಿ ಭಾಗಿ ಜಿಯೋ ಬಳಕೆದಾರರಿಗೆ ಪ್ರಯೋಜನಗಳು
* ಜಿಐಆರ್‌ಎಫ್ ಸಂದರ್ಭ ಮೊದಲ ಬುಕಿಂಗ್ ಶುಲ್ಕದ ಮೇಲೆ ರೂ. 100 ರಿಯಾಯಿತಿ
* ಆಹಾರ, ಪಾನೀಯ, ಬುಫೆ ಅಥವಾ ಒಟ್ಟು ಬಿಲ್‌ನ ಮೇಲೆ ಕೂಪನ್ ಕೋಡ್ ಅನ್ವಯ
* ಮೈಜಿಯೋ ಆಪ್‌ನ ಕೂಪನ್ಸ್ ವಿಭಾಗದಲ್ಲಿ ರಿಯಾಯಿತಿ ಕೂಪನ್ ಕೋಡ್ ಲಭ್ಯ