ನವ ದೆಹಲಿ : ಕೋವಿಡ್ ನ ಎರಡನೇ ಸ್ಥಿತಿ ದಿನ ನಿತ್ಯ ಚಿಂತಾಜನಕವಾಗುತ್ತಿದೆ. ಪರಸ್ಪರ ನೇರ ಸಂಪರ್ಕ ಕಡಿತವಾಗಿ ಬಿಟ್ಟಿದೆ ಎಂದರೇ ತಪ್ಪಿಲ್ಲ. ಇಂತಹ ಸಂದರ್ಭದಲ್ಲಿ ಫೋನ್ ಸಂಪರ್ಕವೇ ಎಲ್ಲದಕ್ಕೂ ಆಧಾರವಾಗಿರುವ ಕಾಲ ಮಾನದಲ್ಲಿ ದೇಶದ ಟೆಲಿಕಾಂ ನೆಟ್ ವರ್ಕ್ ಗಳ ದೈತ್ಯ ಜಿಯೋ ಗ್ರಾಹಕ ಸ್ನೇಹಿ ಎರಡು ವಿಶೇಷ ಉಪಕ್ರಮಗಳನ್ನು ಘೋಷಿಸಿದೆ.
ಇದನ್ನೂ ಓದಿ : ಕಾಪು ಲೈಟ್ ಹೌಸ್ ನಿಂದ 15 ಕಿ. ಮೀ. ದೂರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬೋಟ್ ಸಿಬ್ಬಂದಿಗಳು
ರಿಲಯನ್ಸ್ ಫೌಂಡೇಶನ್ ಜೊತೆಗೆ ಕೈಜೋಡಿಸಿರುವ ಜಿಯೋ, ಸದ್ಯದ ಜಾಗತಿಕ ಸೋಂಕಿನಿಂದಾಗಿ ರೀಚಾರ್ಜ್ ಮಾಡಿಸಲು ಸಾಧ್ಯವಾಗದ ಜಿಯೋಫೋನ್ ಬಳಕೆದಾರರಿಗೆ ಕೋವಿಡ್ ನ ಸ್ಥಿತಿ ಸಹಜವಾಗುವ ತನಕ ಅಥವಾ ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ನಿರ್ಬಂಧಗಳು ತೆರವುಗೊಳ್ಳುವ ತನಕ ದಿನಕ್ಕೆ 10 ನಿಮಿಷಗಳಂತೆ ಪ್ರತಿ ತಿಂಗಳೂ 300 ನಿಮಿಷಗಳ ಉಚಿತ ಔಟ್ ಗೋಯಿಂಗ್ ಕರೆಗಳನ್ನು ಒದಗಿಸಲು ಮುಂದಾಗಿದೆ.
ಹೆಚ್ಚುವರಿಯಾಗಿ ಈ ಸೌಲಭ್ಯ ಮತ್ತಷ್ಟು ಸುಲಭವಾಗಿ ಕೈಗೆಟುಕುವಂತೆ ಮಾಡಲು, ಜಿಯೋಫೋನ್ ಬಳಕೆದಾರರು ರೀಚಾರ್ಜ್ ಮಾಡಿದ ಪ್ರತಿ ಜಿಯೋಫೋನ್ ಪ್ಲ್ಯಾನ್ ಗೆ ಅದೇ ಮೌಲ್ಯದ ಹೆಚ್ಚುವರಿ ರೀಚಾರ್ಜ್ ಪ್ಲ್ಯಾನ್ ನನ್ನು ಉಚಿತವಾಗಿ ಪಡೆಯಲಿದ್ದಾರೆ.
ಆದರೇ, ಈ ಕೊಡುಗೆ ವಾರ್ಷಿಕ ಅಥವಾ ಜಿಯೋಫೋನ್ ಡಿವೈಸ್ ಬಂಡಲ್ಡ್ ಪ್ಲ್ಯಾನ್ ಗಳಿಗೆ ಅನ್ವಯಿಸುವುದಿಲ್ಲ.
ಇದನ್ನೂ ಓದಿ : ಅಕ್ಕಲ್‌ಕೋಟೆಯಲ್ಲಿ ಬಸವ ವಿದ್ಯಾ ದಾಸೋಹ ಶೈಕ್ಷಣಿಕ ನೆರವಿನ ವೆಬ್‌ಸೈಟ್ ಲೋಕಾರ್ಪಣೆ