Advertisement

Reliance Industries Limited: ಅಂಬಾನಿ ಮಕ್ಕಳ ನೇಮಕಕ್ಕೆ ಷೇರುದಾರರ ಒಪ್ಪಿಗೆ

12:06 AM Oct 28, 2023 | Team Udayavani |

ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌)ನ ಆಡಳಿತ ಮಂಡಳಿಗೆ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಮಕ್ಕಳ ನೇಮಕಕ್ಕೆ ಷೇರುದಾರರ ಅನುಮತಿ ಸಿಕ್ಕಿದೆ. ಹೀಗಾಗಿ, ಇಶಾ, ಆಕಾಶ್‌ ಮತ್ತು ಅನಂತ್‌ ಅವರು ಕಂಪೆನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

Advertisement

ಮೂವರು ಕೂಡ ರಿಲಯನ್ಸ್‌ನ ವಿವಿಧ ವಿಭಾಗಗಳಿಗೆ ನೇಮಕವಾಗಿದ್ದಾರೆ ಮತ್ತು ಅವರಿಗೆ ಉತ್ತೇಜನ ನೀಡಲಾಗುತ್ತಿದೆ. ಇಶಾ ಅಂಬಾನಿಗೆ ಶೇ.98.21, ಆಕಾಶ್‌ ಅಂಬಾನಿಗೆ ಶೇ.98.06. ಅನಂತ್‌ ಅಂಬಾನಿಗೆ ಶೇ.92.76 ಮತಗಳು ಪ್ರಾಪ್ತವಾಗಿದ್ದವು. ಮೂವರು ಮಕ್ಕಳನ್ನು ಆರ್‌ಐಎಲ್‌ಗೆ ನೇಮಕ ಮಾಡುವುದರ ಬಗ್ಗೆ ಆಗಸ್ಟ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next