Advertisement

Uttarakhand; ಪ್ರವಾಹ ಪರಿಹಾರಕ್ಕಾಗಿ 25 ಕೋಟಿ ರೂ.ನೀಡಿದ ರಿಲಯನ್ಸ್ ಇಂಡಸ್ಟ್ರೀಸ್

07:41 PM Sep 09, 2023 | Team Udayavani |

ಡೆಹ್ರಾಡೂನ್ : ಭಾರೀ ಮಳೆ ಮತ್ತು ಭೂಕುಸಿತದಿಂದ ಭಾರಿ ಹಾನಿಗೆ ಗುರಿಯಾಗಿರುವ ಉತ್ತರಾಖಂಡಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಪ್ರವಾಹ ಪರಿಹಾರಕ್ಕಾಗಿ 25 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿದೆ.

Advertisement

“ಕಳೆದ ದಶಕದಲ್ಲಿ ಸಂತೋಷ ಮತ್ತು ದುಃಖಗಳ ಮೂಲಕ ನಾವು ಉತ್ತರಾಖಂಡದ ಜನರೊಂದಿಗೆ ಆಳವಾದ ಬಾಂಧವ್ಯವನ್ನು ಹಂಚಿಕೊಳ್ಳುತ್ತೇವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯ ಮತ್ತು ಅದರ ಜನರ ಅಸಾಧಾರಣ ಸ್ಥಿತಿಸ್ಥಾಪಕತ್ವವು ರಿಲಯನ್ಸ್‌ನಲ್ಲಿ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಉತ್ತರಾಖಂಡದೊಂದಿಗಿನ ನಮ್ಮ ಒಡನಾಟ, ಪ್ರಯಾಣವನ್ನು ಮತ್ತಷ್ಟು ಬಲಪಡಿಸಲು ನಾವು ರಾಜ್ಯದ ಯೋಗಕ್ಷೇಮಕ್ಕೆ ಅರ್ಥಪೂರ್ಣ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದೇವೆ” ಎಂದು ಆರ್‌ಐಎಲ್‌ನ ಲಾಭರಹಿತ ಸೇವಾ ಸಂಸ್ಥೆ ರಿಲಯನ್ಸ್ ಫೌಂಡೇಶನ್‌ನ ಮಂಡಳಿಯಲ್ಲಿ ಸದಸ್ಯರಾಗಿರುವ ಅನಂತ್ ಅಂಬಾನಿ ಹೇಳಿದ್ದಾರೆ.

ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ”ದೂರವಾಣಿ ಮಾತುಕತೆಯಲ್ಲಿ ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಅವರು ಉತ್ತರಾಖಂಡದ ಜನರ ಜೀವನವನ್ನು ಸುಧಾರಿಸಲು ರಾಜ್ಯ ಸರಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ರಿಲಯನ್ಸ್ ಕುಟುಂಬದ ಪರವಾಗಿ, ಈ ಅಭಿವೃದ್ಧಿ ಪಯಣವನ್ನು ಮತ್ತಷ್ಟು ಬಲಪಡಿಸಲು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ರೂ. ನೀಡಿದ್ದಾರೆ. ರಾಜ್ಯದ ಸಮಸ್ತ ಜನತೆಯ ಪರವಾಗಿ ಅನಂತ್ ಜಿ ಮತ್ತು ರಿಲಯನ್ಸ್ ಕುಟುಂಬಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಮೊತ್ತವು ಉತ್ತರಾಖಂಡದ ಜನರಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next