ಮುಂಬೈ: ರಿಲಯನ್ಸ್ ಫೌಂಡೇಶನ್ ಮುಖ್ಯಸ್ಥರಾಗಿರುವ ನೀತಾ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ 46ನೇ ವರ್ಚುವಲ್ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ಅವರು ಬನಾರಸಿ ಬ್ರೊಕೇಡ್ ಸೀರೆಯಲ್ಲಿ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:Haveri: ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ: ನಾಲ್ವರ ವಿರುದ್ಧ ಪ್ರಕರಣ ದಾಖಲು
ಆರ್ ಐಎಲ ನ 46ನೇ ವಾರ್ಷಿಕ ಮಹಾಸಭೆಯಲ್ಲಿ ರಿಲಯನ್ಸ್ ಕುಟುಂಬವನ್ನು ಉದ್ದೇಶಿಸಿ ಮಾತನಾಡುತ್ತ, ತಮ್ಮ ಮಹತ್ವಾಕಾಂಕ್ಷೆಯ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ( NMACC) ಮತ್ತು ರಿಲಯನ್ಸ್ ಫೌಂಡೇಶನ್ ಕಾರ್ಯಗಳ ಮಹತ್ವದ ಕುರಿತು ಪ್ರಸ್ತಾಪಿಸಿದರು.
ನುರಿತ ಡಿಸೈನರ್ ಇಕ್ಬಾಲ್ ಅಹ್ಮದ್ ಅವರಿಂದ ನೇಯ್ದ ಬನಾರಸಿ ಬ್ರೊಕೇಡ್ ಸೀರೆಯಲ್ಲಿ ನೀತಾ ಅಂಬಾನಿ ಎಲ್ಲರ ಗಮನಸೆಳೆದಿದ್ದರು. ವಿಶಿಷ್ಟ ಸೌಂದರ್ಯದ ಲ್ಯಾವೆಂಡರ್ ನೇಯ್ಗೆಯ ಈ ಸೀರೆ ವಾರಣಾಸಿಯ ಶತಮಾನಗಳಷ್ಟು ಹಳೆಯ ಕರಕುಶಲತೆಯ ಪ್ರತೀಕವಾಗಿದೆ. ಇದು ಸಂಕೀರ್ಣ ವಿನ್ಯಾಸದ ಬರ್ಫಿ ಬೂಟಿ, ಕೊನಿಯಾ ಪೈಸ್ಲೆ ಮೋಟಿಫ್ ಗಳು ಹಾಗೂ ಸಾಂಪ್ರದಾಯಿಕ ಜರಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
ಭಾರತದ ಸಾಂಪ್ರದಾಯಿಕ ಕರಕುಶಲ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ರಿಲಯನ್ಸ್ ಫೌಂಡೇಶನ್ ಸ್ವದೇಶಿ ಬೆಂಬಲಿತ ಅನೇಕ ಪ್ರಾದೇಶಿಕ ಪರಂಪರೆಯಲ್ಲಿ ಬನಾರಸಿ ನೇಯ್ಗೆಯೂ ಒಂದಾಗಿದೆ. ಈ ಮೂಲಕ ನೀತಾ ಅಂಬಾನಿ ಅವರು ಇತ್ತೀಚೆಗೆ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಗೌರವ ಸಲ್ಲಿಸಿದ್ದು, ಇದರೊಂದಿಗೆ ಮುಂದಿನ ತಲೆಮಾರಿಗೆ ಈ ಪರಂಪರೆಯನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ವರದಿ ತಿಳಿಸಿದೆ.