Advertisement

ವಿದ್ಯುಚ್‌ ಚಾಲಿತ ವಾಹನ: ಆರ್‌ಬಿಎಂಎಲ್‌- ಸ್ವಿಗ್ಗಿ ಒಪ್ಪಂದ

09:06 PM Aug 05, 2021 | Team Udayavani |

ನವದೆಹಲಿ: ಆಹಾರ ಪೂರೈಕಾ ಸಂಸ್ಥೆ ಸ್ವಿಗ್ಗಿ ತನ್ನ ವಿದ್ಯುತ್‌ಚಾಲಿತ ಡೆಲಿವರಿ ವಾಹನಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಿಲಯನ್ಸ್‌ ಬಿಪಿ ಮೊಬಿಲಿಟಿ ಲಿಮಿಟೆಡ್‌(ಆರ್‌ಬಿಎಂಎಲ್‌)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Advertisement

ಕಂಪನಿಯನ್ನು ಹೆಚ್ಚು ಸುಸ್ಥಿರ ಮತ್ತು ಮಾಲಿನ್ಯಮುಕ್ತಗೊಳಿಸುವ ಉದ್ದೇಶದಿಂದ ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಅದರಂತೆ, ಆರ್‌ಬಿಎಂಎಲ್‌ ಕಂಪನಿಯು ಸ್ವಿಗ್ಗಿಯ ಡೆಲಿವರಿ ಪಾಲುದಾರರಿಗೆ ವಿದ್ಯುತ್‌ಚಾಲಿತ ವಾಹನ ಬಳಕೆಗೆ ಅವಕಾಶ ಕಲ್ಪಿಸಲಿದೆ.

ಈಗಾಗಲೇ ಈ ಕುರಿತ ಪ್ರಾಯೋಗಿಕ ಯೋಜನೆ ಆರಂಭವಾಗಿದ್ದು, ಮುಂದಿನ 4 ವರ್ಷಗಳಲ್ಲಿ ಪ್ರತಿ ದಿನ 8 ಲಕ್ಷ ಕಿ.ಮೀ.ಗಳ ಡೆಲಿವರಿಯನ್ನು ವಿದ್ಯುತ್‌ಚಾಲಿತ ವಾಹನಗಳ ಮೂಲಕವೇ ನಡೆಸುವ ಗುರಿಯನ್ನು ಸ್ವಿಗ್ಗಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next