Advertisement
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ, ನಾಡೋಜ ಡಾ|ಹಂಪನಾಗರಾಜಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮಹಾಕಾವ್ಯವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮಾಹೇಶ್ವರಿ ಪ್ರಕಾಶನದ ಕೆ.ಆರ್.ಕಮಲೇಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಡಾ.ಎಂ.ವೀರಪ್ಪ ಮೊಯ್ಲಿಯವರು ಉಪಸ್ಥಿತರಿದ್ದು, ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಎ.ಮಂಜು, ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಮೇಲ್ಮನೆ ಸದಸ್ಯ ಎಂ.ಎ.ಗೋಪಾಲಸ್ವಾಮಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಾಧ್ಯಾಪಕರಾದ ಡಾ. ಜಯಕುಮಾರ ಉಪಾಧ್ಯೆ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ವಸಂತ ಭಾರದ್ವಾಜ್ ವ್ಯಾಖ್ಯಾನ ಮಾಡಲಿದ್ದಾರೆ. ಮಹಾಕಾವ್ಯದ ನೂತನ ಪಾತ್ರ ಮತ್ತು ಸನ್ನಿವೇಶಗಳನ್ನು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಪರಿಚಯಿಸಲಿದ್ದಾರೆ. ಸಂವಾದದಲ್ಲಿ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಪ್ರೊ.ಎಸ್.ಪಿ.ಪದ್ಮಪ್ರಸಾದ್, ಪ್ರೊ.ಸಿ.ನಾಗಣ್ಣ, ಪ್ರೊ. ಪ್ರಶಾಂತ್ ನಾಯಕ್ ಮೊದಲಾದವರು ಭಾಗವಹಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಆ ದಿನ ಸಂಜೆ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯದ ಆಯ್ದಭಾಗವನ್ನು ಸಮೂಹ ಗಾಯನ ದಲ್ಲಿ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.
Related Articles
ಶ್ರವಣಬೆಳಗೊಳದಲ್ಲಿ ಸಲ್ಲೇಖನ ವ್ರತ ಕೈಗೊಂಡ ಒಂದು ಸಾವಿರ ವರ್ಷಗಳ ನಂತರ ಬಾಹುಬಲಿಯು ಶಿಲಾರೂಪದಲ್ಲಿ ಅವಿರ್ಭವಿಸಿರುವ ರೋಚಕ ಘಟನೆ ಕಾವ್ಯದ ವಸ್ತುವಾಗಿದೆ. 21ನೇ ಶತಮಾನದ ತಲ್ಲಣ, ಭಯೋತ್ಪಾದನೆ, ಹಿಂಸೆ,
ಶೀತಲಯುದಟಛಿ, ಶೋಷಣೆ,ದುರಾಕ್ರಮಣ, ದುರಾಸೆಗಳೆಲ್ಲಾ ಸಾತ್ವಿಕ ಆಕ್ರೋಶ ಕಾವ್ಯರೂಪದಲ್ಲಿ ಹೊರಬಂದಿದೆ. ದೆಹಲಿಯ ಲಾಲ್ ಬಹದ್ದೂರ್ ಸಂಸ್ಕೃತ ವಿದ್ಯಾಪೀಠದ ಪ್ರಾಕೃತ ವಿಭಾಗದ ಮುಖ್ಯಸ್ಥರಾದ ಡಾ.ಜಯಕುಮರ್ ಉಪಾಧ್ಯೆ ಮುನ್ನುಡಿ ಬರೆದಿದ್ದಾರೆ. ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಕಾವ್ಯಾವಲೋಕನ ಮಾಡಿದ್ದಾರೆ.
Advertisement