Advertisement

ವರದಿ ಬರುವ ಮುನ್ನವೇ ಕ್ವಾರಂಟೈನ್ ನಿಂದ ಬಿಡುಗಡೆ: ಬೆಳಗಾವಿಯ ಇಬ್ಬರಿಗೆ ಪಾಸಿಟಿವ್ ಶಂಕೆ

01:09 PM May 31, 2020 | keerthan |

ಬೆಳಗಾವಿ: ವರದಿ ಬರುವ ಮುನ್ನವೇ ಕ್ವಾರಂಟೈನ್ ನಲ್ಲಿ‌ ಇದ್ದವರನ್ನು ಬಿಡುಗಡೆ ಮಾಡಿದ ಬಳಿಕ ಈಗ ಇಬ್ಬರಿಗೆ ಕೋವಿಡ್-19 ಪಾಸಿಟಿವ್ ಬಂದಿರುವ ಅನುಮಾನ ವ್ಯಕ್ತವಾಗುತ್ತಿದ್ದು, ಅಧಿಕಾರಿಗಳ ಎಡವಟ್ಟು ಜನರ ಆತಂಕಕ್ಕೆ ಕಾರಣವಾಗಿದೆ.

Advertisement

ಮುಂಬೈನಿಂದ ಬಂದಿರುವ ವಲಸೆ ಕಾರ್ಮಿಕರನ್ನು ತಾಲೂಕಿನ ಅಗಸಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿ ಇಡಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಅಧಿಕಾರಿಗಳು ಎಲ್ಲರನ್ನೂ ವಾಪಸ್ಸು ಕಳುಹಿಸಿದ್ದಾರೆ. ಗಂಟಲು ದ್ರವದ ಮಾದರಿ ಕಳುಹಿಸಿದಾಗ ಇಬ್ಬರಿಗೆ ಸೋಂಕು ಬಂದಿರುವ ಶಂಕೆ ವ್ಯಕ್ತವಾಗುತ್ತಿದೆ.

ಕ್ವಾರಂಟೈನ್ ನಲ್ಲಿ‌ ಇದ್ದವರು ಬಿಡುಗಡೆ ಆಗುತ್ತಿದ್ದಂತೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿದ್ದರು.‌ಈ ವಿಷಯ ತಿಳಿದು ಬಿಜೆಪಿ ಕಾರ್ಯಕರ್ತರೂ ಬಂದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಬಿಡುಗಡೆಯಾದ ಬಳಿಕ ಗ್ರಾಮದಲ್ಲಿ ಅನೇಕರ ಸಂಪರ್ಕದಲ್ಲಿ ಬಂದಿದ್ದರು. ಈಗ ಗ್ರಾಮದಲ್ಲಿ ಅನೇಕರಲ್ಲಿ ಭಯ ಕಾಡುತ್ತಿದೆ.

ವರದಿ ಮುನ್ನವೇ ಇಬ್ಬರಿಗೆ ಪಾಸಿಟಿವ್ ಬಂದಿರುವ ಅನುಮಾನದಿಂದಾಗಿ ಆರೋಗ್ಯ ಇಲಾಖೆಯವರು ಮನೆಗೆ ಬಂದು ಕರೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳ ಎಡವಟ್ಟು ಮಾಡಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next