Advertisement

ಅಭಿಯಾನದ ಭಿತ್ತಿಪತ್ರ ಬಿಡುಗಡೆ

04:49 PM Oct 03, 2020 | Suhan S |

ದಾವಣಗೆರೆ: ಜಿಲ್ಲಾ ವರದಿಗಾರರ ಕೂಟ, ಕ್ಯಾನ್ಸರ್‌ ಫೌಂಡೇಷನ್‌, ಹೈದರಾಬಾದ್‌ನ ಗ್ರೇಸ್‌ ಕ್ಯಾನ್ಸರ್‌ ಫೌಂಡೇಷನ್‌ ನೇತೃತ್ವದಲ್ಲಿ ಅ.10ರ ಶನಿವಾರ ಹಮ್ಮಿಕೊಂಡಿರುವ ಕ್ಯಾನ್ಸರ್‌ ನಡೆ-ಕೋವಿಡ್‌ ತಡೆ ಅಭಿಯಾನದ ಭಿತ್ತಿಪತ್ರವನ್ನು ಗಾಂಧಿ-ಶಾಸ್ತ್ರೀ ಜಯಂತಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.

Advertisement

ಕಲಾವಿದ ಆರ್‌.ಟಿ.ಅರುಣ್‌ ಕುಮಾರ್‌, ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿಯ ಜಾಗೃತಿ ಅಭಿಯಾನವನ್ನು ಪರೋಕ್ಷವಾಗಿ ಮಾಡುತ್ತಿದ್ದು ಅ.10ರ ಬೆಳಗ್ಗೆ 8 ಗಂಟೆಗೆ ಭಾಗವಹಿಸುವವರು. ತಮ್ಮ ಅನುಕೂಲಕರ ಸ್ಥಳದಲ್ಲಿ 20 ನಿಮಿಷ ವಾಕ್‌ ಮಾಡಬೇಕು. ಆ ಭಾಗವಹಿಸಿಕೆಯನ್ನು ಸೆಲ್ಫಿ ವಿಡಿಯೋ ಮುದ್ರೀಕರಿಸಿ ಅದನ್ನು 40ರಿಂದ 90 ಸೆಕೆಂಡ್‌ಗಳಲ್ಲಿ ಸಾಂದ್ರೀಕರಿಸಿ ನಮ್ಮ ಫೇಸ್‌ ಬುಕ್‌ ಪೇಜ್‌ DavanagereCancer Foundation mailto:davanagerecancerfoundation@gmail.com   ಗೆ ಇಲ್ಲವೇ ಇನ್ಸಾ$rಗ್ರಾಮ್‌ ಅಕೌಂಟ್‌ Davanagere Cancer Foundation mailto:davanagerecancerfoundation@gmail.com   ಅಥವಾ ಈ ಮೇಲ್‌ davanagerecancerfoundation@gmail.com mailto:davanagerecancerfoundation@gmail.com ವಿಳಾಸಕ್ಕೆ ಅಪ್‌ ಲೋಡ್‌ ಮಾಡಬೇಕು. ಇಲ್ಲವಾದಲ್ಲಿ 7892403271 ಮೊಬೈಲ್‌ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಬಹುದಾಗಿದೆ ಎಂದು ತಿಳಿಸಿದರು.

ಸಂಘ-ಸಂಸ್ಥೆಯವರು ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ತಮ್ಮ ನಿರ್ಧಿಷ್ಟ ಸ್ಥಳಗಳಲ್ಲಿ ಪಾಲ್ಗೊಂಡು ವಿಡಿಯೋ ಮುದ್ರೀಕರಿಸಿ ಅ.10ರ ರಾತ್ರಿ 8 ಗಂಟೆಯ ಒಳಗೆ ಅಪ್‌ಲೋಡ್‌ ಮಾಡಬೇಕು. ಅತ್ಯುತ್ತಮ ಐದು ವೈಯಕ್ತಿಕ ವಿಡಿಯೋಗಳಿಗೆ ತಲಾ 2 ಸಾವಿರ ರೂ. ಬಹುಮಾನ, ಸಂಘ-ಸಂಸ್ಥೆಗೆಳ ಮೊದಲೆರಡು ಅತ್ಯುತ್ತಮ ವಿಡಿಯೋಗಳಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಮಹಿಳೆಯರಿಗಾಗಿ ಮತ್ತೂಂದು ವಿಶೇಷ ಬಹುಮಾನವನ್ನು ಎರಡುಸಾವಿರ ರೂಪಾಯಿ ಇಂಡಿಯನ್‌ ರೆಡ್‌  ಕ್ರಾಸ್‌ ವತಿಯಿಂದ ನೀಡಲಾಗುವುದು. ಯುವಕರು, ವಿದ್ಯಾರ್ಥಿಗಳು ಆಸಕ್ತ ಸಂಘ-ಸಂಸ್ಥೆಗಳು ಅಭಿಯಾನದಲ್ಲಿ ಪಾಲ್ಗೊಂಡು ಕ್ಯಾನ್ಸರ್‌ ಹಿಮ್ಮೆಟ್ಟಿಸಬಹುದು, ಕೋವಿಡ್‌ ಎದುರಿಸಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಬೇಕಿದೆ ಎಂದು ತಿಳಿಸಿದರು.

ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ. ಆರ್‌. ಆರಾಧ್ಯ, ಬಿ.ಎನ್‌. ಮಲ್ಲೇಶ್‌, ಕ್ಯಾನ್ಸರ್‌ ಫೌಂಡೇಷನ್‌ ಕಾರ್ಯದರ್ಶಿ ಡಾ| ಸುನೀಲ್‌ ಬ್ಯಾಡಗಿ, ರೆಡ್‌ಕ್ರಾಸ್‌ ಡಾ|ಎ.ಎಂ. ಶಿವಕುಮಾರ್‌ ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next