ಬೆಂಗಳೂರು: ಬಹುನಿರೀಕ್ಷಿತ, ವಿವಾದಿತ ಪದ್ಮಾವತಿ ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದ್ದು, ಚಿತ್ರದ ವಿರುದ್ಧ ಹೋರಾಟ ನಡೆಸುತ್ತಿರುವ ರಜಪೂತ್ ಕರ್ನಿ ಸೇನೆ ಭಾರತ್ ಬಂದ್‌ಗೆ ಕರೆ ನೀಡಿದೆ.
ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ರಜಪೂತ್ ಕರ್ನಿ ಸೇನೆಯ ನೂರಾರು ಸದಸ್ಯರು ಚಿತ್ರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
‘ಏನೇ ಆಗಲಿ ಚಿತ್ರ ಬಿಡುಗಡೆ ಮಾಡಿದರೆ ಪರಿಸ್ಥಿತಿ ಕಠೊರವಾಗಲಿದೆ,ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ’ ಎಂದು ಕರ್ನಿ ಸೇನೆಯ ಲೋಕೇಂದ್ರ ಸಿಂಗ್ ಕಲ್ವಿ ಎಚ್ಚರಿಕೆ ನೀಡಿದ್ದಾರೆ.
ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಾವತಿಯ ಕಥೆ ತಿರುಚಿ ರಜಪೂತರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.
ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಪ್ರತಿಕ್ರಿಯೆ ನೀಡಿ ‘ಕೇವಲ ಗಾಳಿ ಸುದ್ದಿಯಿಂದಲಾಗಿ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮ ಚಿತ್ರದಲ್ಲಿರುವುದು ಅಲ್ಲಾವುದ್ದೀನ್ ಖಿಲ್ಜಿ ಕನಸಿನ ದೃಶ್ಯ.ಯಾರ ಭಾವನೆಗೂ ಧಕ್ಕೆಯಾಗುವಂತಹ ದೃಶ್ಯ ಇಲ್ಲ. ಚಿತ್ರ ರಾಣಿ ಪದ್ಮಾವತಿ ಧೈರ್ಯಕ್ಕೆ ಸಂದ ಗೌರವ’ ಎಂದಿದ್ದಾರೆ.