Advertisement

ಗ್ರಾಮದೇವತೆ ಜಾತ್ರಾ ಮಹೋತ್ಸವ ಪ್ರಚಾರ ಸಾಮಗ್ರಿ ಬಿಡುಗಡೆ

04:30 PM May 06, 2022 | Team Udayavani |

ಅಮೀನಗಡ: ಪಟ್ಟಣದ ಬನಶಂಕರಿದೇವಿ ದೇವಾಲಯದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವದ ಪ್ರಚಾರ ಸಾಮಗ್ರಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.

Advertisement

ಈ ವೇಳೆ ಗ್ರಾಮದೇವತೆ ಜಾತ್ರಾ ಸೇವಾ ಸಮಿತಿ ಅಧ್ಯಕ್ಷ ಜಗದೀಶ ಬಿಸಲದಿನ್ನಿ ಮಾತನಾಡಿ, ಪಟ್ಟಣದಲ್ಲಿ 5 ವರ್ಷಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರೆ ಮೇ 10ರಿಂದ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಪೂಜ್ಯರು ಹಾಗೂ ಗಣ್ಯ ಮಹನಿಯರಿಂದ ಗ್ರಾಮದೇವತೆ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರೆಯಲಿದೆ ಎಂದರು.

ಮೇ 10ರಂದು ವಿವಿಧ ವಾಧ್ಯಮೇಳಗಳೊಂದಿಗೆ ಸುಮಂಗಲಿಯರಿಂದ ಆರತಿ ಸೇವೆ ಹಾಗೂ ಕುಂಭ ಮೇಳದೊಂದಿಗೆ ದೇವಿಯ ಮೆರವಣಿಗೆಯು ಹಾಲುಮತ ಸಮಾಜದ ಭಾವಿಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಹಾಯ್ದು ಅಗಸಿಯ ಮುಖಾಂತರ ಸಂಜೆ 5ಗಂಟೆಗೆ ಪಾದಗಟ್ಟೆಯ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.

ಮೇ 14ರಂದು ಸಕಲ ವಾದ್ಯವೈಭವಗಳೊಂದಿಗೆ ಪಾದಗಟ್ಟಿಯಿಂದ ಶ್ರೀ ದೇವಿ ಮೆರವಣಿಗೆ ಪ್ರಾರಂಭವಾಗಿ ಹೋಮ-ಹವನಗಳ ಯಜ್ಞದ ನಂತರ ಅನೃತಗಳಿಗೆಯಲ್ಲಿ ಮಧ್ಯಾಹ್ನ 12.30ಕ್ಕೆ ಗರ್ಭ ಗುಡಿಯಲ್ಲಿ ಪ್ರವೇಶ ಪ್ರತಿಷ್ಠಾಪಣೆ ಭಕ್ತಾಧಿಗಳ ಜಯ ಘೋಷಣೆಯ ಭಕ್ತಿ ಗೀತೆಯೊಂದಿಗೆ ಕಾಯಿ ಕರ್ಪೂರಗಳ ಆರತಿಯಿಂದ ಮಂಗಲೋತ್ಸವ ಸಮಾರಂಭ ನಡೆಯಲಿದೆ ಎಂದರು.

ಜಾತ್ರೆಯ ಅಂಗವಾಗಿ ದಿ| ಪುಷ್ಪಾಬಾಯಿ ಮಾಂಗಿಲಾಲಜೀ ಬೋರಾ ಅವರ ರಂಗ ವೇದಿಕೆಯಲ್ಲಿ ವಿವಿಧ ನಾಟಕಗಳ ಪ್ರದರ್ಶನ, ಸಂಗೀತ ಸಂಜೆ, ಹಾಸ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಮತ್ತು ವಿಶೇಷ ಗ್ರಾಮೀಣ ಕ್ರೀಡೆಗಳು, ಕ್ರಿಕೆಟ್‌ ಪಂದ್ಯಾವಳಿ, ಕುಸ್ತಿಗಳು, ರಾಜ್ಯ ಮಟ್ಟದ ಟಗರಿನ ಕಾಳಗ, ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ, ಕಣ್ಣು ಕಟ್ಟಿ ಮೊಸರು ಗಡಿಗೆ ಒಡೆಯುವುದು, ಮ್ಯೂಸಿಕಲ್‌ ಚೇರ್‌, ಸ್ಲೋಮೋಶನ್‌ ಬೈಕ್‌ ರ್ಯಾಲಿ, ಡಬಲ್ಸ್‌ ಕೇರಂ ಸ್ಪರ್ಧೆ, ಪುಟ್ಟಿ ಬಂಡಿ ರೇಸ್‌, ಕುದುರಿ ರೇಶ್‌, ಹಗ್ಗ ಜಗ್ಗಾಟ ಸೇರಿದಂತೆ ಇನ್ನು ಹಲವಾರು ವಿಶೇಷ ಕಾರ್ಯಕ್ರಮಗಳು 11 ದಿನಗಳವರೆಗೆ ನಡೆಯಲಿವೆ ಎಂದರು.

Advertisement

ಗ್ರಾಮದೇವತೆ ಸೇವಾ ಜಾತ್ರಾ ಸಮಿತಿಯ ಉಪಾಧ್ಯಕ್ಷ ಅಜಮಿರ್‌ ಮುಲ್ಲಾ, ವಿಜಯಕುಮಾರ ಕನ್ನೂರ,ಪ್ರಧಾನ ಕಾರ್ಯದರ್ಶಿ ನಾಗಪ್ಪ ತುಂಬಗಿ,ಸಹಕಾರ್ಯದರ್ಶಿ ಗುರುನಾಥ ಚಳ್ಳಮರದ,ಸದಸ್ಯರಾದ ಬಸವರಾಜ ನಿಡಗುಂದಿ, ಶಿವಪುತ್ರಪ್ಪ ಹುಲ್ಲಿಕೇರಿ, ಮಲ್ಲೇಶಪ್ಪ ಹೊದ್ಲುರ , ಪ್ರಭು ನಾಗರಾಳ, ಶಿವಾನಂದ ಶೆಟ್ಟರ್‌, ವೈ.ಎಸ್‌. ಬಂಡಿವಡ್ಡರ, ವಿಷ್ಣು ಗೌಡರ, ಶಂಕ್ರಯ್ಯ ಹಿರೇಮಠ, ಸಂಗಣ್ಣ ಕಂಬಾರ, ತುಕಾರಾಮ ಲಮಾಣಿ, ಉಮರಸಾಬ ಬೇಪಾರಿ, ಈರಣ್ಣ ಬಡಿಗೇರ, ಶ್ರೀಕಾಂತ ಸಜ್ಜನ, ಶರಣಪ್ಪ ಹಗ್ಗೆನ್ನವರ, ಸುರೇಶ ಬಡಿಗೇರ, ಪಪಂ ಸದಸ್ಯ ರಮೇಶ ಮುರಾಳ, ಪಪಂ ಮುಖ್ಯಾಧಿಕಾರಿ ಮಹೇಶ ನೀಡಶೇಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next