Advertisement

ಕರಾವಳಿಯಾದ್ಯಂತ ‘ಪಮ್ಮಣ್ಣೆ  ದಿ ಗ್ರೇಟ್‌’ಸಿನೆಮಾ ಬಿಡುಗಡೆ 

12:23 PM Aug 25, 2018 | Team Udayavani |

ಮಹಾನಗರ: ಕುಡ್ಲ ಸಿನೆಮಾಸ್‌ನಲ್ಲಿ ಮುತ್ತುರಾಮ್‌ ಕ್ರಿಯೇಷನ್‌ ನಿರ್ಮಾಣದ ಇಸ್ಮಾಯಿಲ್‌ ಮೂಡುಶೆಡ್ಡೆ ನಿರ್ದೇಶನದ ‘ಪಮ್ಮಣ್ಣೆ ದಿ ಗ್ರೇಟ್‌’ ತುಳು ಸಿನೆಮಾ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡಿತು. ಚಿತ್ರ ಬಿಡುಗಡೆ ಸಮಾರಂಭ ನಗರದ ಬಿಗ್‌ ಸಿನೆಮಾಸ್‌ನಲ್ಲಿ ನಡೆಯಿತು. ಸಿನೆಮಾವು ಮಂಗಳೂರಿನ ಭಾರತ್‌ ಮಾಲ್‌, ಪಿವಿಆರ್‌, ಸಿನೆಪೊಲೀಸ್‌, ಉಡುಪಿಯಲ್ಲಿ ಕಲ್ಪನಾ, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್‌ನಲ್ಲಿ ನಟರಾಜ್‌, ಬೆಳ್ತಂಗಡಿಯಲ್ಲಿ ಭಾರತ್‌, ಸುಳ್ಯದಲ್ಲಿ ಸಂತೋಷ್‌, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್‌, ಮೂಡಬಿದಿರೆಯಲ್ಲಿ ಅಮರಶ್ರೀ, ಕಾಸರಗೋಡಿನಲ್ಲಿ ಶ್ರೀ ಕೃಷ್ಣ ಟಾಕೀಸ್‌ನಲ್ಲಿ ತೆರೆಕಂಡಿದೆ.

Advertisement

ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್‌.ಗಣೇಶ್‌ ರಾವ್‌ ಸಿನೆಮಾ ಬಿಡುಗಡೆ ಮಾಡಿ, ತುಳುಭಾಷಾ ಬೆಳವಣಿಗೆಯಲ್ಲಿ ತುಳು ನಾಟಕದಂತೆ ತುಳು ಸಿನೆಮಾಗಳು ಕೂಡಾ ಪ್ರಮುಖ ಪಾತ್ರ ವಹಿಸಿದೆ. ಸಮಾಜಕ್ಕೆ ಸಂದೇಶ ಭರಿತ ಸಿನೆಮಾಗಳ ಅಗತ್ಯವಿದೆ ಎಂದರು. 

ಶಾಸಕ ಉಮಾನಾಥ ಕೋಟ್ಯಾನ್‌, ತುಳು ಸಿನೆಮಾ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ, ಕ್ಯಾಟ್ಕಾದ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲು, ನಿರ್ಮಾಪಕರಾದ ಪ್ರಕಾಶ್‌ ಪಾಂಡೇಶ್ವರ್‌, ವಿಜಯ ಕುಮಾರ್‌ ಕೊಡಿಯಾಲಬೈಲ್‌, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜಪ್ಪು, ವಸಂತ ಕುಮಾರ್‌, ಭೋಜರಾಜ್‌ ವಾಮಂಜೂರ್‌, ಸ್ಟಾನಿ, ನಿರ್ಮಾಪಕ ಕೃಷ್ಣ ನಾಯಕ್‌ ಕಾರ್ಕಳ, ವೀರೇಂದ್ರ ಸುವರ್ಣ ಕಟೀಲು, ನಿರ್ದೇಶಕ ಇಸ್ಮಾಯಿಲ್‌ ಮೂಡುಶೆಡ್ಡೆ, ನಟ ಪೃಥ್ವಿ ಅಂಬರ್‌, ನಟಿ ಶಿಲ್ಪಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next