Advertisement
ಬಾಕಿ2019ರಲ್ಲಿ ಅರ್ಜಿ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ 134 ಜನರಿಗೆ ಮತ್ತು ಈ ಮಾರ್ಚ್ ಬಳಿಕ ಉಡುಪಿ ಜಿಲ್ಲೆಯವರಿಗೆ ಹಣ ಬಂದಿರಲಿಲ್ಲ. ನೋಂದಾಯಿತ ಕಟ್ಟಡ ಕಾರ್ಮಿಕ ಅಥವಾ ಕಾರ್ಮಿಕನ ಅವಲಂಬಿತ ಮಕ್ಕಳ ವಿವಾಹಕ್ಕಾಗಿ 50 ಸಾವಿರ ರೂ. ನೀಡಲಾಗುತ್ತದೆ. ಇದೇ ಜುಲೈಯಿಂದ ಈ ಮೊತ್ತವನ್ನು 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಒಬ್ಬರಿಗೆ ದೊರೆಯುತ್ತಿದ್ದ ಮೊತ್ತವನ್ನು 2021ರ ಮಾರ್ಚ್‌ನಿಂದ ಪತಿ-ಪತ್ನಿಗೆ ವಿಂಗಡಿಸಿ ನೀಡಲಾಗುತ್ತಿದೆ. 25 ಸಾವಿರ ರೂ.ಗಳ ಬಾಂಡ್ ಹಾಗೂ 25 ಸಾವಿರ ರೂ.ಗಳ ನಗದು. ಬಾಂಡ್ 3 ವರ್ಷಗಳ ಅನಂತರ ಬಡ್ಡಿ ಸಹಿತ ದೊರೆಯುತ್ತದೆ.
2019ರಲ್ಲಿ ಬಾಕಿಯಾಗಿದ್ದ ದ.ಕ. ಜಿಲ್ಲೆಯ 134 ಮಂದಿಗೆ ಏಕಗಂಟಿ ನಲ್ಲಿ ಹಣ ಬಿಡುಗಡೆಯಾಗಿ ಅವರ ಖಾತೆಗಳಿಗೆ ಜಮೆಯಾಗಿದೆ. ಅಲ್ಲದೆ ದ.ಕ.ಮತ್ತು ಉಡುಪಿಯಲ್ಲಿ 2021ರಲ್ಲಿ ಸಲ್ಲಿಕೆಯಾದ ಅರ್ಜಿಗಳಿಗೂ ಪ್ರೋತ್ಸಾಹ ಧನ ಬಿಡುಗಡೆಯಾಗಿದೆ. ದ.ಕ. ಜಿಲ್ಲೆಯಲ್ಲಿ 2019ರ 134 ಜನ ಸೇರಿ ಒಟ್ಟು 425 ಮಂದಿಗೆ ಈ ತಿಂಗಳಲ್ಲಿ ಹಣ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ 590 ಮಂದಿಗೆ ಕಳೆದ ವರ್ಷ ಪ್ರೋತ್ಸಾಹಧನ ದೊರೆತಿತ್ತು. ಉಡುಪಿ ಜಿಲ್ಲೆಯಲ್ಲಿ ನವೆಂಬರ್ ಅಂತ್ಯದವರೆಗಿನ ಅರ್ಜಿಗಳು ಇತ್ಯರ್ಥಗೊಂಡು ಹಣ ಬಿಡುಗಡೆಯಾಗಿದೆ. ಅದರ ಅನಂತರದ ಬಾಬ್ತು ಬರಬೇಕಾದ 75 ಮಂದಿಗಷ್ಟೇ ಬಾಕಿಯಿದೆ. ಇದನ್ನೂ ಓದಿ:ಪಾಸ್‌ಪೋರ್ಟ್ ಶ್ರೇಯಾಂಕ: ದೇಶಕ್ಕೆ 83ನೇ ರ್‍ಯಾಂಕ್ ಪ್ರಾಪ್ತಿ
Related Articles
ಕಟ್ಟಡ ಕಾರ್ಮಿಕರಿಗೆ ಅಥವಾ ಅವರ ಅವಲಂಬಿತ ಮಕ್ಕಳ ವಿವಾಹಕ್ಕೆ ದೊರೆಯುವ ಹಣ ಬಿಡುಗಡೆಯಾಗದ ಕುರಿತು “ಉದಯವಾಣಿ’ ಡಿ. 6ರಂದು “ಕಾರ್ಮಿಕರ ಕಲ್ಯಾಣಕ್ಕೆ ಇನ್ನೂ ಬಂದಿಲ್ಲ ಪ್ರೋತ್ಸಾಹಧನ!’ ಎಂದು ವರದಿ ಪ್ರಕಟಿಸಿತ್ತು. ಹಣ ಬಿಡುಗಡೆಯೊಂದಿಗೆ ಕಾರ್ಮಿಕರ ಮುಖದಲ್ಲಿ ನಗು ಕಾಣಿಸಿದೆ.
Advertisement