ಕಲಬುರಗಿ: ಹೈದ್ರಾಬಾದ ಕರ್ನಾಟಕ ವಿಮೋಚನೆಗಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಿದ್ದ ಕೆ.ಚನ್ನಬಸಪ್ಪ ಕುಳಗೇರಿ ಅವರ ಕುರಿತು ಕೃತಿ ಹೊರತರುತ್ತಿರುವುದು ಸಂತೋ ಷದ ವಿಷಯವಾಗಿದೆ ಎಂದು ಜೇವರ್ಗಿ ಶಾಸಕ ಡಾ|ಅಜಯಸಿಂಗ್ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಚನ್ನಬಸಪ್ಪ ಕುಳಗೇರಿ ಅವರ ಹೈದ್ರಾಬಾದ ಸಂಸ್ಥಾನದ ವಿಮೋಚನಾ ಚಳವಳಿಯನ್ನು ಒಳಗೊಂಡ ಚಾರಿತ್ರಿಕ ಕೃತಿ ಹೊರತರುವ ನಿಟ್ಟಿನಲ್ಲಿ ರಚಿಸಿರುವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.
ಇದೊಂದು ಅರ್ಥಪೂರ್ಣ ನಿರ್ಧಾರವಾಗಿದೆ. ಇದರಿಂದ ನಾಡಿನಲ್ಲಿ ನಡೆದು ಹೋಗಿರುವ ಕೆಲವು ಸಂಘರ್ಷಗಳು, ಅದರ ನೈಜತೆ ಕುರಿತು ಮುಂದಿನ ಯುವ ಪೀಳಿಗೆಗೆ ತಿಳಿಯುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕುಳಗೇರಿ ಅವರ ಹೋರಾಟ ಹಾದಿ ಕುರಿತು ಅಕ್ಷರಗಳಲ್ಲಿ ಮೂಡಿಸುತ್ತಿರುವುದು ಚಾರಿತ್ರಿಕವಾಗಿದೆ ಎಂದು ಬಣ್ಣಿಸಿದರು. ಸಮ್ಮುಖ ವಹಿಸಿದ್ದ ಸೊನ್ನ ಮಠದ ಶ್ರೀ ಡಾ|ಶಿವಾನಂದ ಮಹಾ ಸ್ವಾಮೀಜಿ ಮಾತನಾಡಿ, ಸ್ವಾಗತ ಸಮಿತಿಗೆ ಶಾಸಕ ಡಾ|ಅಜಯಸಿಂಗ್ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿದೆ. ಅಲ್ಲದೆ, ಕುಳಗೇರಿ ಅವರ ಕುರಿತು ಪುಸ್ತಕ ಹೊರ ತರು ತ್ತಿರುವುದು ಒಳ್ಳೆಯ ನಿರ್ಧಾರ ಎಂದರು.
ಹಿರಿಯ ಸಾಹಿತಿಗಳಾದ ಎ.ಕೆ. ರಾಮೇಶ್ವರ, ಶಿವನಗೌಡ ಪಾಟೀಲ ಹಂಗರಗಿ, ಷಣ್ಮುಖಪ್ಪಗೌಡ ಹಿರೇಗೌಡ, ಸಿರಾಜುದ್ದೀನ್ ಜಮಾದಾರ ಆಂದೋಲಾ, ಶ್ಯಾಮರಾಯ ಪಾಟೀಲ ವಡಗೇರಾ, ಲಿಂಗಣ್ಣಗೌಡ ಪೊಲೀಸ್ ಪಾಟೀಲ, ವಿಜಯಕುಮಾರ ಸಾಹು ಮಳ್ಳಿ, ಶಂಸುದ್ದಿನ ಗುಂಡುಗುರ್ತಿ, ಈರಣ್ಣ ಸಾಹು ಯಡ್ರಾಮಿ, ಸಿ.ಎಸ್.ಮಾಲಿಪಾಟೀಲ, ಶ್ರೀನಿವಾಸ ವಿ.ಕುಷ್ಟಗಿ, ಮಲ್ಲಾರಾವ್ ಕುಲಕರ್ಣಿ, ಭೀಮಾಶಂಕರ ಪಾಟೀಲ, ಅಮರನಾಥ ಸಿ. ಕುಳಗೇರಿ ಇದ್ದರು.