ಮುಂಬಯಿ, ಜ. 13: ಪಡುಬಿದ್ರಿ ಉಭಯ ಶಾಲೆಗಳ ಶತಮಾನ ಶತಖಂಡ ಸಂಭ್ರಮ 2020ರ ಸ್ಮರಣ ಸಂಚಿಕೆ “ಹೇಮಾದ್ರಿ’ಯನ್ನು ಜ. 9ರಂದು ಸಂಜೆ ಉಪನಗರದ ಇರ್ಲಾದ ಅದಮಾರು ಮಠದಲ್ಲಿ ಉಡುಪಿ ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥರು ತಮ್ಮ ಅಮƒತ ಹಸ್ತದಿಂದ ಬಿಡುಗಡೆ ಮಾಡಿದರು.
ಶ್ರೀಪಾದರು ಈ ಸಂದರ್ಭದಲ್ಲಿ ಆಶೀರ್ವಚನಗೈದು, ಪಡುಬಿದ್ರಿ ಉಭಯ ವಿದ್ಯಾಲಯಗಳಿಗೆ ಮುಂಬಯಿಯಲ್ಲಿ ನೆಲೆಸಿ ರುವ ಹಳೆ ವಿದ್ಯಾರ್ಥಿಗಳ ಕೊಡುಗೆ ಅನುಪಮ ವಾಗಿದೆ. ವಿದ್ಯಾಭಿಮಾನಿಗಳ ಇಂತಹ ಉಸ್ತುಕತೆ ಪ್ರಶಂಸನೀಯ. ಹಳೆ ವಿದ್ಯಾರ್ಥಿಗಳೇ ವಿದ್ಯಾಲಯ ಗಳ ಅಭಿವೃದ್ಧಿಯ ಬೇರುಗಳಾಗಿದ್ದಾರೆ ಎಂದು ಶುಭ ಹಾರೈಸಿದರು.
ಶ್ರೀ ಅದಮಾರು ಮಠದ ಶ್ರೀಪಾದರ ಅಧೀನದಲ್ಲಿನ ಶಿಕ್ಷಣ ಸಮೂಹ ಸಂಸ್ಥೆಗಳಲ್ಲಿನ ಒಂದಾದ ಶ್ರೀ ಬ್ರಹ್ಮಾವಿದ್ಯಾ ಪ್ರಕಾಶಿನಿ ಶಾಲೆ ಶತಮಾನ ಸಂಭ್ರಮವನ್ನು ಆಚರಿಸಿದರೆ, ಪಡುಬಿದ್ರಿ ಗಣಪತಿ ಹೈಸ್ಕೂಲ್ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದ್ದು, ಶ್ರೀ ವಿಶ್ವಪ್ರಿಯ ತೀರ್ಥರ ಅರ್ವತ್ತರ ಸಂಭ್ರಮದ ಅಂಗವಾಗಿ ಶ್ರೀ ಗಣಪತಿ ದೇವಸ್ಥಾನ ಪಡುಬಿದ್ರಿ ಇದರ ವಠಾದಲ್ಲಿ ಆಚರಿಸಿದ ಶತಮಾನ ಶತಖಂಡ ಕಾರ್ಯಕ್ರಮದ ಸ್ಮರಣಾರ್ಥ ರಚಿತ “ಹೇಮಾದ್ರಿ’ ಸ್ಮರಣ ಸಂಚಿಕೆ ಒಂದು ದಾಖಲೆಯಂತಿದೆ ಎಂದು ನಟರಾಜ ಪಿ. ಎಸ್. ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ:ಮುನಿರತ್ನ, ವಿಶ್ವನಾಥ್ ಇಬ್ಬರಿಗೂ ಉನ್ನತ ಸ್ಥಾನಮಾನ ಸಿಗಲಿದೆ: ನಾರಾಯಣಗೌಡ
ಬಳಂಬ ನಾಗರಾಜ ರಾವ್ ಮತ್ತು ಲೋವಿತಾ ನಾಗರಾಜ್ ದಂಪತಿ ಹಾಗೂ ಲತಾ ಕಾಮತ್ ಅವರು ಸ್ವಾಮೀಜಿಗೆ ಗೌರವಾರ್ಪಣೆಗೈದರು. ಅದಮಾರು ಮಠದ ಪ್ರಬಂಧಕ ಪಡುಬಿದ್ರಿ ರಾಜೇಶ ವಿ. ರಾವ್, ವಾಣಿ ರಾಜೇಶ್ ಭಟ್, ಮಾ| ಶ್ರೀಶ ಆರ್. ಭಟ್, ವಿಜಯ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮುರುಡಿ ಗಣೇಶ್ ರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಮುಂಬಯಿ ಸಮಿತಿಯ ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಪ್ರಸ್ತಾವಿಸಿದರು. ನಟರಾಜ ಪಿ. ಎಸ್. ವಂದಿಸಿದರು. ಭಕ್ತರು ಉಪಸ್ಥಿತರಿದ್ದರು.