Advertisement

ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ; ದ.ಕ. 74 ಕೋಟಿ ರೂ., ಉಡುಪಿಗೆ 6 ಕೋಟಿ ರೂ.

02:21 AM Jan 08, 2022 | Team Udayavani |

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಪ್ರಧಾನ ಮಂತ್ರಿ ಫ‌ಸಲ್‌ ವಿಮಾ ಯೋಜನೆಯಡಿ 80.77 ಕೋಟಿ ರೂ. ಬಿಡುಗಡೆಯಾಗಿದೆ.

Advertisement

ಹವಾಮಾನ ಆಧಾರಿತ ಬೆಳೆ ವಿಮೆ ಇದಾಗಿದೆ. ಉಡುಪಿಗೆ ಹೋಲಿಸಿದಲ್ಲಿ ದ.ಕ.ದಲ್ಲಿ ಅತ್ಯಧಿಕ ಅಡಿಕೆ ಬೆಳೆಗಾರರಿದ್ದು, ಬೆಳೆ ವ್ಯಾಪ್ತಿಯೂ ದೊಡ್ಡದಿರುವ ಕಾರಣ ಹೆಚ್ಚಿನ ವಿಮೆ ದೊರೆತಿದೆ. ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪ ಮರುಕಳಿಸುತ್ತಿದ್ದು, ವಿಮಾ ಮೊತ್ತ ಸರಿಯಾಗಿ ಪಾವತಿಯಾಗುತ್ತಿರುವುದರಿಂದ ರೈತರು ಆಸಕ್ತಿಯಿಂದ ನೋಂದಾಯಿಸಿಕೊಳ್ಳು ತ್ತಿದ್ದಾರೆ. ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರು ವಿಮಾ ಮೊತ್ತಕ್ಕೆ ಶೇ. 5ರಷ್ಟು ಪ್ರೀಮಿಯಂ ಪಾವತಿಸಿರುತ್ತಾರೆ. ಬೆಳೆ ನಷ್ಟಕ್ಕೊಳಗಾದವರಿಗೆ ಗರಿಷ್ಠ ಪರಿಹಾರ ದೊರೆಯುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮರು ಸಮೀಕ್ಷೆಗೆ ಬಾಕಿ
ಬೆಳೆ ಸಮೀಕ್ಷೆ ಹಾಗೂ ಫ‌ಲಾನುಭವಿಗಳ ವಿಮಾ ಘಟಕದ ಬೆಳೆ ವ್ಯತ್ಯಾಸದಿಂದ ಕೆಲವು ಸರ್ವೇ ನಂಬರ್‌ಗಳಲ್ಲಿ ಬೆಳೆ ಮರು ಸಮೀಕ್ಷೆ ಬಾಕಿ ಇದೆ. ಸಾಲದ ಖಾತೆ ಹೊಂದಿರುವ ಫ‌ಲಾನುಭವಿಗಳ ಪ್ರಕರಣವನ್ನು ಬ್ಯಾಂಕ್‌ ಶಾಖಾ ವ್ಯವಸ್ಥಾಪಕರು, ಸಾಲ ಹೊಂದಿಲ್ಲದ ಫ‌ಲಾನುಭವಿಗಳ ಪ್ರಕರಣವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಕ್ಷೇತ್ರ ಸಮೀಕ್ಷೆ ಕೈಗೊಂಡು ವಿಮೆ ಕಂಪೆನಿಗೆ ಮೊಬೈಲ್‌ ತಂತ್ರಾಂಶದ ಮೂಲಕ ವರದಿ ನೀಡಬೇಕು. ಅನಂತರ ವಿಮಾ ಮೊತ್ತ ಪಾವತಿಯಾಗುತ್ತದೆ.

95 ಲಕ್ಷ ರೂ. ಬಾಕಿ
ಅವಿಭಜಿತ ಜಿಲ್ಲೆಯಲ್ಲಿ ಬೆಳೆಗಾರರ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ ಲಿಂಕ್‌ ಸಮಸ್ಯೆಯಾಗಿರುವುದರಿಂದ 95 ಲಕ್ಷ ರೂ. ಪಾವತಿಗೆ ಬಾಕಿ ಇದೆ. ದ.ಕ. ಜಿಲ್ಲೆಯ 40,021 ಪ್ರಕರಣಗಳಲ್ಲಿ 73,08,69,389 ರೂ. ಬಂದಿದೆ. ಆಧಾರ್‌ ಕಾರ್ಡ್‌, ಬ್ಯಾಂಕ್‌ ಪ್ರೊಫೈಲ್‌ಗೆ ಲಿಂಕ್‌ ಮಿಸ್‌ ಮ್ಯಾಚ್‌ ಆಗಿರುವ ಕಾರಣ 394 ವಿಮಾ ಪ್ರಕರಣಗಳಲ್ಲಿ 82,30,375 ರೂ. ಬಾಕಿ ಮೊತ್ತವಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಉಡುಪಿಯಲ್ಲಿ 72 ಪ್ರಕರಣಗಳಲ್ಲಿ 13.85 ಲಕ್ಷ ರೂ. ಪಾವತಿಗೆ ಬಾಕಿ ಇದೆ.

ರೈತ ವರ್ಗಕ್ಕೆ ವರ
ದೊಡ್ಡ – ಸಣ್ಣ ಭೇದವಿಲ್ಲದೆ ಎಲ್ಲ ವರ್ಗದ ರೈತರಿಗೂ ಈ ಯೋಜನೆ ವರವಾಗಿದೆ. ಒಂದು ಸೆಂಟ್ಸ್‌ನಿಂದ ನೂರಾರು ಎಕ್ರೆ ಜಾಗದವರೆಗೂ ವಿಮೆ ಮಾಡಿಸಬಹುದು. ಉದಾ: ಅಡಿಕೆ ಬೆಳೆ ಇದ್ದಲ್ಲಿ ಒಂದು ಸೆಂಟ್ಸ್‌ಗೆ ವಿಮಾ ಮೊತ್ತ 524.80 ರೂ. ಇದ್ದು ಪಾವತಿಸಬೇಕಾದ ಕಂತು 209.92 ರೂ. ಆಗಿರುತ್ತದೆ. ಇದರಲ್ಲಿ ರೈತರು ಅಗ್ರಿಕಲ್ಚರ್‌ ಇನ್ಶೂರೆನ್ಸ್‌ ಕಂಪೆನಿಗೆ 26.24 ರೂ. ಪಾವತಿಸಬೇಕು. ಕೇಂದ್ರ ಸರಕಾರ 65.60 ರೂ., ರಾಜ್ಯ ಸರಕಾರ 118.08 ರೂ. ಪಾವತಿಸುತ್ತದೆ. ಕಾಳು ಮೆಣಸು ಸೆಂಟ್ಸ್‌ಗೆ 192.70 ರೂ. ವಿಮೆ ಇದ್ದು, 141 ರೂ. ಕಂತು ಪಾವತಿಸಬೇಕು. ರೈತರು 9.64 ರೂ. ಪಾವತಿಸಿದಲ್ಲಿ ರಾಜ್ಯ ಸರಕಾರ 107.28 ರೂ., ಕೇಂದ್ರ ಸರಕಾರ 107.28 ರೂ. ಪಾವತಿಸುತ್ತವೆ.

Advertisement

ಇದನ್ನೂ ಓದಿ:ವಿದೇಶದಿಂದ ಬರುವವರಿಗೆ 7 ದಿನ ಕ್ವಾರಂಟೈನ್‌ ಕಡ್ಡಾಯ

ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿ ಸಂಭವಿಸಿದಲ್ಲಿ ಪ್ರಧಾನ ಮಂತ್ರಿ ಫ‌ಸಲ್‌ ವಿಮಾ ಯೋಜನೆಯಡಿ ಪರಿಹಾರ ಪಡೆಯಬಹುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು. ತಾಂತ್ರಿಕ ಸಮಸ್ಯೆ ಇರುವ ಪ್ರಕರಣಗಳನ್ನು ಶೀಘ್ರ ಪರಿಹರಿಸುವಂತೆ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ.
– ಭುವನೇಶ್ವರಿ, ಉಪ ನಿರ್ದೇಶಕಿ,
ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ

ನೋಂದಾಯಿತ ಎಲ್ಲ ಬೆಳೆಗಾರರಿಗೆ ಪರಿಹಾರ ದೊರೆತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಯತ್ತ ಆಸಕ್ತಿ ತೋರಿದ್ದಾರೆ. ತಾಂತ್ರಿಕ ದೋಷದಿಂದ ಕೆಲವು ಪ್ರಕರಣಗಳಿಗೆ ಮೊತ್ತ ಪಾವತಿಯಾಗಿಲ್ಲ,; ಸರಿಪಡಿಸುವ ಕೆಲಸ ನಡೆಯುತ್ತಿದೆ.
– ದರ್ಶನ್‌, ಸಹಾಯಕ
ತೋಟಗಾರಿಕೆ ಅಧಿಕಾರಿ (ಪ್ರಭಾರ),
ತೋಟಗಾರಿಕೆ ಇಲಾಖೆ, ದ.ಕ. ಜಿಲೆೆÉ

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next