ಬೆಂಗಳೂರು: ಕೋವಿಡಡ್ 19 ಸೋಂಕಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಬೊಧಕೇತರ ಸಿಬ್ಬಂದಿಗಳಿಗೆ ತಲಾ ಐದು ಸಾವಿರ ರೂ.ನಂತೆ ಪರಿಹಾರ ಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ರಾಜ್ಯದ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ 1,72,945 ಮಂದಿ ಶಿಕ್ಷಕರು ಮತ್ತು 34,000 ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು 2,06,945 ಸಿಬ್ಬಂದಿಗೆ ತಲಾ ಐದು ಸಾವಿರ ರೂಪಾಯಿಯಂತೆ ಒಟ್ಟು 10347.25 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಇದನ್ನೂ ಓದಿ:ಇಂದು ಅನ್‌ಲಾಕ್ 3.0 ಕುರಿತು ಸಭೆ: ಮತ್ತಷ್ಟು ನಿರ್ಬಂಧ ಸಡಿಲಿಕೆ ಸಾಧ್ಯತೆ
ಈ ಅನುದಾನವನ್ನು 2020-21ನೇ ಸಾಲಿಗೆ ತಂತ್ರಾಂಶದಲ್ಲಿ ಈಗಾಗಲೇ ನೋಂದಾಯಿಸಲಾದ ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಬೇಕು ಎಂದು ಸೂಚಿಸಲಾಗಿದೆ.
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿಗೆ ಸಹಾಯಧನ ವಿತರಣೆ, ವಿದ್ಯಾಗಮ ಯೋಜನೆಯಡಿ ಬರುವ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಪರಿಹಾರ ನೀಡಬೇಕೆಂದು ಹಲವು ಜಿಲ್ಲೆಗಳಲ್ಲಿ ಒತ್ತಾಯಿಸಲಾಗಿತ್ತು.