Advertisement
ಜಾತಿ ಗಣತಿ ವರದಿ ಲೋಪದಿಂದ ಕೂಡಿದೆ ಎಂಬ ಕಾರಣಕ್ಕಾಗಿಯೇ ನಾವು ವಿರೋಧ ಮಾಡುತ್ತಿದ್ದೇವೆ. ವರದಿಯಲ್ಲಿ ಏನಿದೆ ಎಂಬುದು ಈಗಾಗಲೇ ಸೋರಿಕೆಯಾಗಿದೆ. ಬಹುತೇಕರು ಲಿಂಗಾಯತ- ವೀರಶೈವ ಅಂತ ಬರೆದುಕೊಂಡಿಲ್ಲ. ಇಂತಹ ಅನೇಕ ಲೋಪದೋಷಗಳು ಎದ್ದು ಕಾಣುತ್ತಿವೆ. ಹಾಗಾಗಿ, ಸಮೀಕ್ಷೆಯ ವರದಿಗೆ ಎಲ್ಲರ ವಿರೋಧವಿದೆ. ವಿರೋಧದ ನಡುವೆಯೂ ಮುಂದುವರಿದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವುದು ಖಚಿತ ಎಂದು ಹೇಳಿದರು.
ಅಷ್ಟಕ್ಕೂ ಜಾತಿ ಜನಗಣತಿ ವರದಿ ಸರಿ ಇಲ್ಲ. ವೈಜ್ಞಾನಿಕವಾಗಿ ಸಮೀಕ್ಷೆ ಆಗಬೇಕು ಎಂದು ಆಗ್ರಹಿಸಿದ ಶಾಮನೂರು, ಮೂಲ ವರದಿ ನಾಪತ್ತೆ ಆಗಿದೆ. ನಾನು ಕೊಟ್ಟಿದ್ದೇನೆ ಅಂತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಹೇಳುತ್ತಿದ್ದಾರೆ. ಈ ನಡುವೆ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಆಗಿದೆ. ಇದು ನೋಡೋಕೆ ಮಜಾ ಇದೆ. ಇಷ್ಟೆಲ್ಲ ಗೊಂದಲಗಳ ನಡುವೆ ಸರಕಾರ ಏನು ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಅವರು ತೆಗೆದುಕೊಂಡ ಬಳಿಕ ಏನು ಮಾಡುವುದು ಅಂತ ತೀರ್ಮಾನ ಮಾಡುತ್ತೇವೆ’ ಎಂದರು.
Related Articles
Advertisement
ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಸಂಪುಟದಿಂದ ಹೊರಗಿರುವ ಕಾರಣಕ್ಕೆ ಏನೇನೊ ಮಾತನಾಡುತ್ತಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಹೋದವರೆಲ್ಲ ಸೋತರು. ಬರೀ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಮುಕ್ಕಿದರು ಎಂದು ತರಾಟೆಗೆ ತೆಗೆದುಕೊಂಡರು.