Advertisement

ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಪೆರೋಲ್ ಮೇಲೆ 50 ಖೈದಿಗಳ ಬಿಡುಗಡೆ

09:05 AM Apr 05, 2020 | keerthan |

ವಿಜಯಪುರ: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೋವಿಡ್-19 ರೋಗ ನಿಯಂತ್ರಣಕ್ಕಾಗಿ ವಿಜಯಪುರ ಕೇಂದ್ರ ಕಾರಾಗೃಹದಿಂದ 7 ವರ್ಷ ಶಿಕ್ಷಾರ್ಹ ಅಪರಾಧದ ವಿಚಾರಣಾಧೀನ 50 ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಅನುಪಮ ಅಗರವಾಲ, ವಿಜಯಪುರ ಕೇಂದ್ರ ಕಾರಾಗೃಹದಲ್ಲಿ 300 ಖೈದಿಗಳ ಸಾಮರ್ಥ್ಯ ಇದ್ದರೂ ಪ್ರಸ್ತುತ 600 ಖೈದಿಗಳಿದ್ದಾರೆ ಎಂದರು.

ಹೀಗಾಗಿ ಕೋವಿಡ್-19 ರೋಗದ ಸೋಂಕು ಹರಡದಂತೆ ಖೈದಿಗಳ ಮಧ್ಯೆ ಅಂತರ ಕಾಯ್ದುಕೊಳ್ಳಬೇಕಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಖೈದಿಗಳಿಗೆ ಪೆರೋಲ್ ಹಾಗೂ ಸ್ಥಳಾಂತರ ಮಾಡಲಾಗುತ್ತಿದೆ. ಪೆರೋಲ್ ಮೇಲೆ ಬಿಡುಗಡೆ ಮಾಡುತ್ತಿರುವ ಖೈದಿಗಳನ್ನು ಛಾಪಾ ಕಾಗದ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಇದಲ್ಲದೇ ವಿಜಯಪುರ ಕೇಂದ್ರ ಕಾರಾಗ್ರಹದಿಂದ 100 ಖೈದಿಗಳನ್ನು ಹಿಂಡಲಗಾ ಜೈಲಿಗೆ, 50 ಖೈದಿಗಳನ್ನು ಬಾಗಲಕೋಟೆ ಜಿಲ್ಲಾ ಕಾರಾಗೃಹಕ್ಕೆ ಹಾಗೂ 25 ಖೈದಿಗಳನ್ನು ಜಮಖಂಡಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಿದ್ದು, ವಿಜಯಪುರ ಕಾರಾಗೃಹದಿಂದ ಒಟ್ಟು 175 ಖೈದಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next