Advertisement
ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ನಿಯಮ 68ರ ಅನ್ವಯ, ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹ, ಅತೀವೃಷ್ಠಿಯಿಂದ ರೈತರ ಬೆಳೆನಾಶ ಕುರಿತು ಮಾತನಾಡಿದ ಅವರು, ಬಸವನಾಡಿನಲ್ಲಿ 31 ಸಾವಿರ ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ನಾಶವಾಗಿದೆ.
Related Articles
Advertisement
ಕೇವಲ ಎನ್ ಡಿ ಆರ್‌ಎಫ್ ನೆಪ ಹೇಳಿಕೊಂಡು ಕಾಲ ಕಳೆಯಬೇಡಿ, ರಾಜ್ಯ ಸರ್ಕಾರ ಯುದ್ದೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸರ್ಕಾರದ ಕಿವಿ ಹಿಂಡಿದರು. ಅಲ್ಲದೆ 2 ಹೆಕ್ಟರ್‌ಗಿಂತ ಹೆಚ್ಚು ಜಮೀನು ನಾಶವಾಗಿರುವವರಿಗೂ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಈ ವರ್ಷ 35,335 ಮನೆಗಳು ಪ್ರವಾಹಕ್ಕೆ ನಾಶವಾಗಿವೆ. ಅವುಗಳಿಗೂ ಇನ್ನೂ ಕೂಡಾ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ವಿವಿಗಳು ದೇವಸ್ಥಾನವಿದ್ದಂತೆ, ವಿಜ್ಞಾನಿಗಳು ದೇವರಿದ್ದಂತೆ ಆದರೆ ಇವ್ರು ಕಲ್ಲಿನ ದೇವರ ಹಾಗೆ, ರೈತರು ಸಂಕಷ್ಟದಲ್ಲಿದ್ದರೂ ನೆರವಿಗೆ ಬರಲಿಲ್ಲ. ಜನರ ನೆರವಿಗೆ ವಿಜ್ಞಾನಿಗಳು ಬಂದಿದ್ದರೆ, ದ್ಯಾಮವ್ವ, ದುರುಗವ್ವ ಬಿಟ್ಟು ನಿಮಗೆ ಕೈ ಮುಗಿಯುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಕೊರಟಗೆರೆ: ಕರಡಿ ಕೊಂದು ತಿಂದ 6 ಮಂದಿ ಆರೋಪಿಗಳ ಬಂಧನ
ರಾಜ್ಯವನ್ನು ಪ್ರತಿನಿಧಿಸುವ 25 ಜನ ಸಂಸತ್ ಸದಸ್ಯರಿದ್ದಾರೆ. ಅವರ್ಯಾರೂ ಪ್ರಧಾನಿ ಎದುರಿಗೆ ಮಾತನಾಡುವ ಧೈರ್ಯವಿಲ್ಲ, ಈ ಕಾರಣದಿಂದ ಕೇಂದ್ರ ನಮ್ಮ ರಾಜ್ಯದ ವಿಷಯದಲ್ಲಿ ಆಡಿದ್ದೆ ಆಟ ಎನ್ನುವಂತಾಗಿದೆ.ಜನಾಶೀರ್ವಾದ ಯಾತ್ರೆ ಮಾಡಿದ್ದೀರಿ. ಆದರೆ ಯಾರೊಬ್ಬರೂ ರೈತರ ಜಮೀನಿಗೆ ತೆರಳಿ ಪರಿಶೀಲಿಸುವ ಕೆಲಸ ಮಾಡಲಿಲ್ಲ. ಕೊನೆ ಪಕ್ಷ ರೈತಣಿಕೆ ಸಾಂತ್ವಾನವನ್ನೂ ಹೇಳಲಿಲ್ಲ. ಬೆಂಗಳೂರಿನ ರಸ್ತೆಗಳೂ ಹಾನಿಯಾಗಿದ್ದು ಅವುಗಳ ರಿಪೇರಿಗೆ 5 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಕಳೆದ ವರ್ಷ ನಮ್ಮ ರಾಜ್ಯದಿಂದ ವಿವಿಧ ರೀತಿಯ ತೆರಿಗೆಯ ಮೂಲಕ 35 ಸಾವಿರ ಕೋಟಿ ರೂ. ಆದಾಯ ಹೋಗಿದೆ,ಈ ವರ್ಷ 40 ಸಾವಿರ ಕೋಟಿ ಹೋಗುತ್ತದೆ. ಆದರೂ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾಧಾನದಿಂದ ಕೆಲಸ ಆಗೋಲ್ಲ, ನಾನು ಸಮಾಧಾನ ಇದ್ದೆ ಈ ಸಾಲಿಗೆ ಬಂದಿದ್ದೇನೆ ಎಂದು ಟಿಕೆಟ್ ತಪ್ಪಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿಯ ರವಿಕುಮಾರ್ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ಆದರೆ ಕಾಂಗ್ರೆಸ್ ಪಕ್ಷದವರೆ ನಿಮಗೆ ಬೆಂಬಲ ನೀಡುತ್ತಿಲ್ಲ ಎಂದು ಛೇಡಿಸಿದರು. ಆಗ ಮದ್ಯೆ ಪ್ರವೇಶಿಸಿದ ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ನಾವೆಂದು ಅವರನ್ನು ಮಾರ್ಗದರ್ಶಕ ಮಂಡಳಿಗೆ ಕಳಿಸಿಲ್ಲ ಎಂದು ಬಿಜೆಪಿಗೆ ತೀರುಗೆಟು ನೀಡಿದರು.