Advertisement

Kannada Movie ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತೆಲುಗಿಗೆ ಡಬ್ ; ಶೀಘ್ರ ಬಿಡುಗಡೆ

10:29 PM Aug 13, 2023 | Team Udayavani |

ಬೆಂಗಳೂರು: ಟಾಲಿವುಡ್‌ನ ಪ್ರಮುಖ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ಅನ್ನಪೂರ್ಣ ಸ್ಟುಡಿಯೋಸ್ ತೆಲುಗು ಪ್ರೇಕ್ಷಕರಿಗೆ ಕನ್ನಡದ ಮನಗೆದ್ದ ‘ಹಾಸ್ಟೆಲ್ ಹುಡುಗರು’ ಚಲನಚಿತ್ರವನ್ನು ತೋರಿಸಲು ಮುಂದಾಗಿದ್ದಾರೆ.

Advertisement

ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನ ಮತ್ತು ಪ್ರಜ್ವಲ್ ಬಿ.ಪಿ. , ಮಂಜುನಾಥ್ ನಾಯ್ಕ ಮತ್ತು ಇತರರ ತಾರಾಗಣವನ್ನು ಒಳಗೊಂಡಿತ್ತು, ರಿಷಬ್ ಶೆಟ್ಟಿ, ಪವನ್ ಕುಮಾರ್ ಮತ್ತು ಶೈನ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಕಳೆದ ತಿಂಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. 20 ಕೋಟಿ ರೂ.ಗೂ ಹೆಚ್ಚು ಗಳಿಸುವ ಮೂಲಕ ಬಾಕ್ಸ್ ಆಫೀಸ್ ಗಳಿಕೆ ಕಂಡಿತ್ತು. ಈಗ ‘ಬಾಯ್ಸ್ ಹಾಸ್ಟೆಲ್’ ಎಂಬ ಶೀರ್ಷಿಕೆಯೊಂದಿಗೆ ತೆಲುಗಿಗೆ ಡಬ್ ಮಾಡಲಾಗುತ್ತಿದ್ದು, ಎರಡು ತೆಲುಗು ರಾಜ್ಯಗಳಲ್ಲಿ ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ” ಎಂದು ನಿರ್ಮಾಪಕರು ಹೇಳಿದ್ದಾರೆ

ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ತೆಲುಗು ಆವೃತ್ತಿಯ ಪ್ರಚಾರಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next