ಉಳ್ಳಾಲ: ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅಂತರಾಜ್ಯಗಳಿಂದ ಆಗಮಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬೆಳ್ಮ ನೋಡಲ್ ಕೇಂದ್ರಕ್ಕೆ ಒಳಪಟ್ಟ ಸರಕಾರಿ ವಿದ್ಯಾರ್ಥಿ ನಿಲಯ ಮತ್ತು ಖಾಸಗಿ ಹೋಟೆಲ್ ಗಳಲ್ಲಿ ಕ್ವಾರಂಟೈನ್ ನಲ್ಲಿದ್ದವರನ್ನು ಹೋಮ್ ಕ್ವಾರಂಟೈನ್ ಗೆ ತೆರಳಲು ಅನುಮತಿ ನೀಡಿ ಅವರನ್ನು ಬೀಳ್ಕೊಡಲಾಯಿತು.
ಕ್ಷೇತ್ರದ ಮಂಗಳೂರು ತಾಲೂಕಿಗೆ ಒಳಪಟ್ಟ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯತ್ ಸೇರಿದಂತೆ 10 ಗ್ರಾಮಗಳ ಒಟ್ಟು 40ಕ್ಕೂ ಹೆಚ್ಚು ಜನರು ಕೇರಳ, ಗುಜರಾತ್, ತಮಿಳುನಾಡು ರಾಜ್ಯಗಳಿಂದ ಆಗಮಿಸಿ ಸರಕಾರಿ ಮತ್ತು ಖಾಸಗಿ ಕ್ವಾರಂಟೈನ್ ಗೆಒಳಪಟ್ಟಿದ್ದರು. ಇದೀಗ ಸರಕಾರಿ ಕ್ವಾರಂಟೈನ್ ಪೂರೈಸಿದವರನ್ಬು ಹೋಮ್ ಕ್ವಾರಂಟೈನ್ ಗೆ ಅನುಮತಿ ನೀಡಿ ಬೀಳ್ಕೊಡಲಾಯಿತು. ಆಶಾ ಕಾರ್ಯಕರ್ತೆಯರು ಹೋಮ್ ಕ್ವಾರಂಟೈನ್ ಮೊಹರು ಹಾಕಿ ನಿಯಮಗಳನ್ನು ತಿಳಿಸಿ ಬೀಳ್ಕೊಟ್ಟರು.
ನೋಡೆಲ್ ಅಧಿಕಾರಿ ನವೀನ್ ಹೆಗ್ಡೆ ಮಾತನಾಡಿ ಜಿಲ್ಲಾ ಆರೋಗ್ಯ ಇಲಾಖೆಯ ಆದೇಶದಂತೆ ಕ್ವಾರಂಟೈನ್ ಪೂರ್ಣಗೊಳಿಸಿದವರನ್ಬು ಬಿಡುಗಡೆ ಮಾಡಲಾಗಿದೆ. ಸರಕಾರಿ ಮತ್ತುಖಾಸಗಿ ಕ್ವಾರಂಟೈನ್ ನಲ್ಲಿದ್ದ ಎಲ್ಲರನ್ಬೂ ಬಿಡುಗಡೆ ಮಾಡಲಾಗಿದೆ ಎಂದರು.
ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಝರ್ ಷಾ ಪಟ್ಟೋರಿ ಮಾತನಾಡಿ ಕ್ವಾರಂಟೈನ್ ನಲ್ಲಿದ್ದ ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ಮುಂದಿನ ಹೋಮ್ ಕ್ವಾರಂಟೈನ್ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಯತ್ನಿಸಬೇಕು ಎಂದರು.
ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಮಹಮ್ಮದ್ ಮಮ್ಮುಂಜಿ ಕಾಟುಕೋಡಿ, ಸಿದ್ದಿಖ್ ನಡುಪದವು, ಅಬೂಬಕ್ಕಾರ್ ನಡುಪದವು, ಹಂಝ ದೇರಳಕಟ್ಟೆ ಆಶಾ ಕಾರ್ಯಕರ್ತೆಯರಾದ ಪವಿತ್ರ, ವೀಣಾ, ಪೂರ್ಣಿಮ ಶೆಟ್ಟಿ, ಶ್ರೀಮತಿ ಅಸೈಗೋಳಿ ಮತ್ತಿತರರು ಉಪಸ್ಥಿತರಿದ್ದರು.