Advertisement

ರಿಷಭ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್

02:03 PM Apr 28, 2022 | Team Udayavani |

ನಟ- ನಿರ್ದೇಶಕ ರಿಷಭ್ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಬಿಡುಗಡೆಗೆ ತಯಾರಾಗಿದೆ. ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ರಿಷಭ್ ಶೆಟ್ಟಿ ಹೊಸ ಸಿನಿಮಾ ಜೂನ್ 23ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

Advertisement

ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಪ್ರಮೋದ್ ಶೆಟ್ಟಿ, ರಚನಾ ಇಂದರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬಿಡಗಡೆಗೆಯ ಬಗ್ಗೆ ಟ್ವೀಟ್ ಮಾಡಿರುವ ರಿಷಭ್ ಶೆಟ್ಟಿ, “ಈ ನಗುವಿನ ಪಯಣಕ್ಕೆ ನಿಮ್ಮೆಲ್ಲರಿಗೂ ಆದರದ ಸ್ವಾಗತ. ಈ ಕಥೆ, ಹರಿಕಥೆ ಅಲ್ಲ ಗಿರಿಕಥೆ. ಜೂನ್ 23 ರಿಂದ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ. ಹರಸಿ, ಹಾರೈಸಿ, ಆಶೀರ್ವದಿಸಿ” ಎಂದಿದ್ದಾರೆ.

ಇದನ್ನೂ ಓದಿ:ಪಿಕೆ, ಟೈಗರ್ ಜಿಂದಾ ಹೈ, ಸಂಜು ದಾಖಲೆಗಳನ್ನು ಮುರಿದ ಕೆಜಿಎಫ್ 2 ಹಿಂದಿ ವರ್ಷನ್

ಕರಣ್ ಅನಂತ್ ಮತ್ತು ಅನಿರುಧ್ ಮಹೇಶ್ ನಿರ್ದೇಶನ ಮಾಡಿರುವ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಚಂದ್ರಶೇಖರನ್ ಮತ್ತು ರಂಗನಾಥ್ ಸಿಎಂ ಕ್ಯಾಮಾರ ಕೈಚಳಕವಿದೆ.­

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next