Advertisement

ಬೆಳೆ ಪರಿಹಾರ ಬಿಡುಗಡೆ ಮಾಡಿ

02:37 PM Aug 18, 2020 | Suhan S |

ಕೋಲಾರ: ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಹೂ ಮತ್ತು ಟೊಮೆಟೋ ಬೆಳೆಗಳಿಗೆ ಸರ್ಕಾರವು ಘೋಷಿಸಿದ್ದ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಹೊರತುಪಡಿಸಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು ಒತ್ತಾಯಿಸಿ ರೈತ ಸಂಘದಿಂದ ತೋಟಗಾರಿಕೆ ಇಲಾಖೆ ಮುಂದೆ ಹೋರಾಟ ಮಾಡಿ ಉಪ ನಿರ್ದೇಶಕರನ್ನು ಒತ್ತಾಯಿಸಲಾಯಿತು.

Advertisement

ಹೋರಾಟದ ನೇತೃತ್ವವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಲಾಕ್‌ ಡೌನ್‌ ಸಮಯದಲ್ಲಿ ಹೂ ಮತ್ತು ಟೊಮೆಟೋ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಹೂ ಬೆಳೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ.ಗಳಂತೆ ಇನ್ನಿತರೆ ವಾಣಿಜ್ಯ ಬೆಳೆಗಳಿಗೂ ಪರಿಹಾವನ್ನು ಘೋಷಣೆ ಮಾಡಿತ್ತು. ಆದರೆ, ಬೆಳೆ ಸಮೀಕ್ಷೆ ಮಾಡಿ ಅಧಿಕಾರಿಗಳು ವರದಿ ನೀಡಿದ್ದವರಿಗೆ ಮಾತ್ರವೇ ಇದೀಗ ಪರಿಹಾರ ಬಂದಿದ್ದು, ರೈತರೇ ಹೋಗಿ ಸ್ವ ಇಚ್ಛೆಯಿಂದ ಅರ್ಜಿ ಸಲ್ಲಿಸಿದ್ದ ಬೆಳೆಗಳಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ದೂರಿದರು.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಇವತ್ತು ನಾಳೆ ಎನ್ನುತ್ತಿದ್ದು, ಅವರ ವೈಫಲ್ಯದಿಂದಲೇ ರೈತರಿಗೆ ಸಮಸ್ಯೆಯಾಗಿದ್ದು, ಕೂಡಲೇ ಸರಿಪಡಿಸಿ ಸರ್ಕಾರಕ್ಕೆ ಒತ್ತಡ ಹಾಕಿ ಬೆಳೆ ನಷ್ಟ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಉಪನಿರ್ದೇಶಕಿ ಗಾಯಿತ್ರಿ, ಅರ್ಜಿ ಸಲ್ಲಿಸಿರುವ ಹೂ ಬೆಳೆಗಾರರಿಗೆ 15-20 ದಿನಗಳಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next