ಮೈಸೂರು: ಖಾಲಿ ಪತ್ರಕ್ಕೆ ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಮುದ್ರೆಯನ್ನು ಆಕೆಯ ಸಂಬಂಧಿಕರೇ ಒತ್ತಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಇದರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ ಎನ್ನಲಾಗಿದೆ. ಇಲ್ಲಿ ವೃದ್ದೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಸಂಬಂಧಿಕರು ಖಾಲಿ ಪತ್ರಗಳಿಗೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೈಸೂರು: ಪಾನಮತ್ತನಾಗಿ ಸ್ವಂತ ತಂಗಿಯ ಮೇಲೆ ಅತ್ಯಾಚಾರವೆಸಗಿದ ಸಹೋದರ!
ಆದರೆ ಈ ಸನ್ನಿವೇಶವನ್ನು ಮಹಿಳೆಯೊಬ್ಬರು ಪ್ರಶ್ನಿಸುತ್ತಾ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಹೆಬ್ಬೆಟ್ಟಿನ ಗುರುತಿರುವ ಪತ್ರಗಳನ್ನ ಪಡೆಯಲು ಮಹಿಳೆ ಯತ್ನಿಸಿದ್ದಾರೆ. ಆದರೆ ಇದಕ್ಕೆ ಸ್ಪಂದಿಸದ ಸಂಬಂಧಿಕರು ಖಾಲಿ ಪತ್ರಗಳನ್ನು ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ. ಅಲ್ಲದೆ ಇದು ತಪ್ಪು ಎಂದು ವಿರೋಧಿಸಿದ ಮಹಿಳೆಯ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತು ಪಡೆಯುವುದು ಕಾನೂನಿಗೆ ವಿರೋಧವಾಗಿದ್ದು, ಕೂಡಲೇ ಪೊಲೀಸರು ಎಚ್ಚೆತ್ತು ತೆನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.