ಕನ್ನಡದಲ್ಲಿ ಇಲ್ಲಿಯವರೆಗೆ ನಾಯಕಿಯಾಗಿ, ಬಳಿಕ ಪೋಷಕ ನಟಿಯಾಗಿ ಆದಷ್ಟು ಸಾಫ್ಟ್ ಪಾತ್ರಗಳಲ್ಲಿ ಗಮನ ಸೆಳೆದಿರುವ ನಟಿ ರೇಖಾ, ಇದೇ ಮೊದಲ ಬಾರಿಗೆ ಭಯಾನಕ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅದು ವಾಮಾಚಾರ ಮಾಡುವ ಮಾಟಗಾತಿಯ ಪಾತ್ರದಲ್ಲಿ!
ಪ್ರಥಮ್ ನಾಯಕ ನಟನಾಗಿ ಅಭಿನಯಿಸುತ್ತಿರುವ “ಕರ್ನಾಟಕದ ಅಳಿಯ’ ಚಿತ್ರದಲ್ಲಿ ನಟಿ ರೇಖಾ ಮೊದಲ ಬಾರಿಗೆ ಇಂಥದ್ದೊಂದು ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ನಿನ್ನೆ ಮದುವೆ.. ಇಂದು ಮುಂಜಾನೆ ಮದುಮಗಳು ಹೃದಯಾಘಾತದಿಂದ ನಿಧನ!
ತಮ್ಮ ಪಾತ್ರದ ಬಗ್ಗೆ ಮಾತನಾಡುವ ರೇಖಾ, “ಇದೊಂದು ವಾಮಾಚಾರ ಮಾಡುವ ಮಹಿಳೆಯ ಪಾತ್ರ. ಸಿನಿಮಾದಲ್ಲಿ ನನ್ನ ಇಡೀ ಕ್ಯಾರೆಕ್ಟರ್ ನೆಗೆಟಿವ್ ಶೇಡ್‌ನಲ್ಲಿದೆ. ಇದೊಂದು ಹೊಸತರದ ಕ್ಯಾರೆಕ್ಟರ್ ಆಗಿದ್ದರಿಂದ, ನಾನು ಕೂಡ ಇದರ ಬಗ್ಗೆ ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದೇನೆ. ಮೊದಲ ಬಾರಿಗೆ ಇಂಥದ್ದೊಂದು ಕ್ಯಾರೆಕ್ಟರ್ ಮಾಡುತ್ತಿರುವುದರಿಂದ, ಒಂದಷ್ಟು ತಯಾರಿ ಕೂಡ ಮಾಡಿಕೊಂಡಿದ್ದೇನೆ. ಈಗಾಗಲೇ ಈ ಗೆಟಪ್‌ನಲ್ಲಿ ಒಂದೆರಡು ದಿನ ಶೂಟಿಂಗ್ ಆಗಿದೆ’ ಎನ್ನುತ್ತಾರೆ.
ಇನ್ನು ಈ ಪಾತ್ರ ಮಾಡುವುದಕ್ಕಾಗಿ ರೇಖಾ ವಾಮಾಚಾರದ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕಾಯಿತಂತೆ. ಅಷ್ಟೇ ಅಲ್ಲದೆ ಇಡೀ ಸಿನಿಮಾದಲ್ಲಿ ತಮ್ಮ ಮಾಟಗಾತಿಯ ಕಾಸ್ಟೂéಮ್ ಕೂಡ ತಾವೇ ಡಿಸೈನ್ ಮಾಡಿಕೊಂಡಿದ್ದಾರಂತೆ. ಸದ್ಯ ರೇಖಾ ಅವರ ಮಾಟಗಾತಿಯ ಲುಕ್ ಔಟ್ ಆಗಿದ್ದು, ರೇಖಾ ಹೊಸ ಲುಕ್‌ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ