ಕಾಪು ಪುರಸಭೆ ವ್ಯಾಪ್ತಿಯ ಕಾಪು, ಉಳಿಯಾರಗೋಳಿ, ಮಲ್ಲಾರು, ಮಜೂರು, ಬೆಳಪು, ಎಲ್ಲೂರು, ಬಡಾ, ತೆಂಕ, ಇನ್ನಂಜೆ, ಕುತ್ಯಾರು, ಕಟಪಾಡಿ, ಕೋಟೆ, ಮಣಿಪುರ, ಉದ್ಯಾವರ, ಕುರ್ಕಾಲು, ಶಿರ್ವ, ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವೆಲ್ಲ ಜಲಾವೃತಗೊಂಡು ಕೃಷಿ ಭೂಮಿಗೆ ಅಪಾರ ಹಾನಿಯುಂಟಾಗಿದೆ.
Advertisement
2 ದಿನ;18 ಲಕ್ಷ ರೂ. ಹಾನಿಎರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಕಾಪು ತಾಲೂಕಿನ ನೂರಾರು ಮನೆಗಳು ಜಲಾವೃತ ಗೊಂಡು, 400ಕ್ಕೂ ಅಧಿಕ ಮಂದಿ ಯನ್ನು ರಕ್ಷಿಸಲಾಗಿತ್ತು. ರಸ್ತೆ, ಸೇತುವೆ, ಮನೆಗೆ ಹಾನಿ, ಕಟ್ಟಡ, ಕಾಂಪೌಂಡು ಕುಸಿತ ಸಹಿತ ಸುಮಾರು 18 ಲಕ್ಷ ರೂ. ಮೊತ್ತದ ಸೊತ್ತು ನಷ್ಟ ಉಂಟಾಗಿದೆ. ಇದಕ್ಕಿಂತಲೂ ಹೆಚ್ಚಿನ ಹಾನಿ ಸಂಭವಿಸಿರುವ ಸಾಧ್ಯತೆಗಳಿವೆ.
ಪಡು, ಕೈಪುಂಜಾಲು, ಮಟ್ಟು ಹಾಗೂ ಹೊಳೆ ತೀರದ ಪ್ರದೇಶ ಗಳಾದ ಪಾಂಗಾಳ, ಮಡುಂಬು, ಇನ್ನಂಜೆ, ಬಂಟಕಲ್ಲು, ಮಣಿಪುರ, ದೆಂದೂರು ಕಟ್ಟೆ, ಮಲ್ಲಾರು, ಮಜೂರು, ಕರಂದಾಡಿ, ಜಲಂಚಾರು, ಕಳತ್ತೂರು, ಕುತ್ಯಾರು, ಬೆಳಪು, ಪಣಿಯೂರು, ಕುಂಜೂರು, ಅದಮಾರು, ಉಚ್ಚಿಲ, ಎರ್ಮಾಳು ಸಹಿತ ಹಲವೆಡೆ ನೆರೆ ಇಳಿದಿದೆ. ಆದರೆ ಈ ಪ್ರದೇಶಗಳಲ್ಲಿ ನಾಟಿ ಮಾಡಲಾದ ನೇಜಿ ಮಾತ್ರ ಮುಳುಗಿದ ಸ್ಥಿತಿಯಲ್ಲಿಯೇ ಇದೆ.