Advertisement

ಮಿಂಚಿನ ನೋಂದಣಿ ಅಭಿಯಾನ: 4,601 ಅರ್ಜಿ ಸ್ವೀಕಾರ

07:50 AM Apr 10, 2018 | Team Udayavani |

ಕುಂದಾಪುರ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಚುನಾವಣಾ ಆಯೋಗ ರವಿವಾರ ಕೈಗೊಂಡ “ಮಿಂಚಿನ ನೋಂದಣಿ’ ಅಭಿಯಾನದಲ್ಲಿ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,601 ಅರ್ಜಿ ಸಲ್ಲಿಸಿದ್ದಾರೆ. 

Advertisement

ಕುಂದಾಪುರ : 2,092 ಮಂದಿ
ಕುಂದಾಪುರ ವಿಧಾನಸಭಾ ಕ್ಷೇತ್ರದ 215 ಮತಗಟ್ಟೆಗಳಲ್ಲಿಯೂ ಈ ಅಭಿಯಾನವನ್ನು ಕೈಗೊಂಡಿದ್ದು, ಒಟ್ಟು 2,092 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಹೆಸರು ಸೇರ್ಪಡೆಗೆ ಫಾರಂ-6ಗೆ 1,368 ಮಂದಿ, ಮರಣ ಹೊಂದಿದ ವ್ಯಕ್ತಿಯ ಹೆಸರು ತೆಗೆಸಲು ಫಾರಂ-7 ಗೆ 391 ಮಂದಿ, ಮತದಾರರ ಪಟ್ಟಿಯ ತಪ್ಪುಗಳನ್ನು ಸರಿಪಡಿಸಲು ಫಾರಂ-8 ಗೆ 322 ಮಂದಿ, ಹೆಸರು ಮತ್ತೂಂದು ಮತಗಟ್ಟೆಗೆ ಸ್ಥಳಾಂತರಕ್ಕೆ ಫಾರಂ -8 ಎ ಯಲ್ಲಿ 11 ಮಂದಿ ಅರ್ಜಿ ಸಲ್ಲಿಸಿದರು. 

ಬೈಂದೂರು : 2,509 ಮಂದಿ 
ಬೈಂದೂರು ವಿಧಾನಸಭಾ ಕ್ಷೇತ್ರದ 243 ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿಯಲ್ಲಿ ಒಟ್ಟು 2,509 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಹೆಸರು ಸೇರ್ಪಡೆಗೆ ಫಾರಂ-6ಗೆ 1,715 ಮಂದಿ, ಮರಣ ಹೊಂದಿದ ವ್ಯಕ್ತಿಯ ಹೆಸರು ತೆಗೆಸಲು ಫಾರಂ-7 ಗೆ 388 ಮಂದಿ, ಮತದಾರರ ಪಟ್ಟಿಯ ತಪ್ಪುಗಳನ್ನು ಸರಿಪಡಿಸಲು ಫಾರಂ-8 ಗೆ 395 ಮಂದಿ, ಹೆಸರು ಮತ್ತೂಂದು ಮತಗಟ್ಟೆಗೆ ಸ್ಥಳಾಂತರಕ್ಕೆ ಫಾರಂ -8 ಎ ಯಲ್ಲಿ 6 ಮಂದಿ ಅರ್ಜಿ ಸಲ್ಲಿಸಿದರು. 

ಗರಿಷ್ಠ: ರಟ್ಟಾಡ್ಡಿ – 28, ಕೊಲ್ಲೂರು- 20 ಅರ್ಜಿ
ರಟ್ಟಾಡಿ ಮತಗಟ್ಟೆಯಲ್ಲಿ ಗರಿಷ್ಠ 28 ಅರ್ಜಿಗಳು ಬಂದಿದ್ದು, ಇನ್ನೂ 2-3 ಮತಗಟ್ಟೆಗಳಲ್ಲಿ 3 ಅರ್ಜಿಗಳು ಮಾತ್ರ ಸ್ವೀಕಾರಗೊಂಡಿದ್ದವು. ಕೊಲ್ಲೂರು ಮತಗಟ್ಟೆಯಲ್ಲಿ ಗರಿಷ್ಠ 20 ಅರ್ಜಿಗಳು ಸ್ವೀಕಾರಗೊಂರೆ, ಶಿರೂರಿನಲ್ಲಿ ಕೇವಲ 4 ಅರ್ಜಿಗಳು ಮಾತ್ರ ಸ್ವೀಕಾರಗೊಂಡಿವೆ.

ಉತ್ತಮ ಸ್ಪಂದನೆ
ಎಲ್ಲ ಕಡೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದೇ ದಿನದಲ್ಲಿ ಇಷ್ಟೊಂದು ಅರ್ಜಿಗಳು ಸ್ವೀಕಾರಗೊಂಡಿರುವುದು ಒಳ್ಳೆಯ ಬೆಳವಣಿಗೆ. ಎ. 14 ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದ್ದು, ದಯವಿಟ್ಟು ಹೆಸರು ಇನ್ನೂ ಸೇರ್ಪಡೆಯಾಗದವರು ಸೇರಿಸಿ.
– ಟಿ. ಭೂಬಾಲನ್‌, 
ಚುನಾವಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next