Advertisement

ಸಿದ್ದು ವಿರುದ್ಧ 153/ಎ ಸೆಕ್ಷನ್‌ ದಾಖಲಿಸಿ

06:00 AM Oct 27, 2018 | |

ಬಳ್ಳಾರಿ: ಶಾಸಕ ಬಿ.ಶ್ರೀರಾಮುಲು ಅವರಿಗೆ 420 ಪದ ಬಳಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ವೀರಶೈವ- ಲಿಂಗಾಯತ ಧರ್ಮ ಒಡೆಯಲು ಯತ್ನಿಸಿದ್ದರಿಂದ ಅವರ ವಿರುದ್ಧ 153/ಎ ಪ್ರಕಾರ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ
ಗೋ ಮಧುಸೂದನ್‌ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. 

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಸಿದ್ದರಾಮಯ್ಯ, ಶಾಸಕ ಶ್ರೀರಾಮುಲು ಅವರಿಗೆ 371(ಜೆ) ಗೊತ್ತಿಲ್ಲ. ಅವರಿಗೆ 420, 323 ಬಗ್ಗೆ ಗೊತ್ತು ಎಂದು ದೂಷಿಸಿದ್ದಾರೆ. ಇವೆಲ್ಲವೂ ವೈಯಕ್ತಿಕ ಅಪರಾಧಕ್ಕಾಗಿ ಪ್ರಕರಣ ದಾಖಲಿಸುವ ಸೆಕ್ಷನ್‌ಗಳು. ಆದರೆ, 12ನೇ ಶತಮಾನದಿಂದ ರಾಜ್ಯದ ಮಠಗಳು ಶರಣ ಸಂಸ್ಕೃತಿಯನ್ನು ಒಪ್ಪಿಕೊಂಡಿರುವಂತಹ ವೀರಶೈವ- ಲಿಂಗಾ ಯತ ಜಾತಿಯನ್ನು ಒಡೆಯಲು ಪ್ರಯತ್ನಿಸಿ ಜಾತಿಗಳ ನಡುವೆ ವೈಷಮ್ಯ, ಶತ್ರುತ್ವ ನಿರ್ಮಾಣ ಮಾಡುವ ಕೆಲಸ ಮಾಡಿರುವ ಅವರ ವಿರುದ್ಧ 153/ಎ ಸೆಕ್ಷನ್‌ ಪ್ರಕಾರ ಪ್ರಕರಣ ದಾಖಲಿಸಬೇಕು. ಇದಕ್ಕೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ಈಚೆಗೆ ತಪ್ಪು ಒಪ್ಪಿಕೊಂಡಿರುವುದೇ ಸಾಕ್ಷಿ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಆರೋಪಿಸಿದ ಗೋ ಮಧುಸೂದನ್‌, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು, ಗುಜರಾತ್‌ನಲ್ಲಿ ಪಟೇಲ್‌ ಸಮುದಾಯವನ್ನು ಒಡೆಯಲು ಪ್ರಯತ್ನಿಸಿದರು. ಅಲ್ಲಿನ ಹಿಂದುಳಿದ ವರ್ಗವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವಂತಹ ಕೆಲಸ ಮಾಡಿದರು. ಇದೀಗ ರಾಜ್ಯದಲ್ಲೂ ಪ್ರತ್ಯೇಕ ಧರ್ಮದ ಹೆಸರಲ್ಲಿ ವೀರಶೈವ-ಲಿಂಗಾಯತ ಸಮಾಜ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಚುನಾವಣಾ ರಾಜಕೀಯ ಅಭಿವೃದಿಟಛಿ ಮತ್ತು ಪಕ್ಷಗಳ ಮೇಲೆ ಚರ್ಚೆ ಆಗಬೇಕು ಹೊರತು, ಅದು ಆಗುತ್ತಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next