Advertisement

ಪ್ರಾದೇಶಿಕ ಸಾರಿಗೆ ಕಚೇರಿ: ಗುರಿಮೀರಿದ ಕಾರ್ಯಸಾಧನೆ

08:44 PM Sep 06, 2021 | Team Udayavani |

ಉಡುಪಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ರಾಜಸ್ವ ಸಂಗ್ರಹ ಹಾಗೂ ವಾಹನ ನೋಂದಣಿಯಲ್ಲಿ ಕಂಡಿದ್ದ ಇಳಿಕೆ ಪ್ರಮಾಣ ಈಗ ಮತ್ತೆ ಪ್ರಗತಿಯ ಹಾದಿಯತ್ತ ಮುಖಮಾಡಿದೆ.

Advertisement

ಆಗಸ್ಟ್‌ ತಿಂಗಳೊಂದರಲ್ಲಿಯೇ ಉಡುಪಿಯಲ್ಲಿ ವಿಶೇಷ ತಪಾಸಣೆ ಮಾಡಿ 171 ಪ್ರಕರಣಗಳನ್ನು ದಾಖಲಿಸಿ 9,61,308 ರೂ.ಗಳನ್ನು ತೆರಿಗೆ ರೂಪದಲ್ಲಿ ಹಾಗೂ 8,23,800 ರೂ.ಗಳನ್ನು ದಂಡ ರೂಪದ ಮೂಲಕ ಒಟ್ಟು 17,85,108 ರೂ. ವಸೂಲು ಮಾಡಲಾಗಿದೆ.

ಸರೆಂಡರ್‌ನಿಂದ ವಾಹನಗಳಿಗೆ ಮುಕ್ತಿ:

ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ವಿವಿಧ ವಾಹನಗಳು ತೆರಿಗೆ ಕಟ್ಟಲಾಗದ ಕಾರಣ ಸರಂಡರ್‌ ಮಾಡಿದ್ದವು. ಈಗ ಹೆಚ್ಚಿನ ವಾಹನಗಳು ತೆರಿಗೆ ಪಾವತಿಸಿ ಸಂಚಾರ ನಡೆಸುತ್ತಿವೆ. ಆದರೂ 674 ವಾಹನಗಳು ಇನ್ನೂ ಸರಂಡರ್‌ನಲ್ಲಿಯೇ ಇವೆ.

ಸರಕು ವಾಹನದಲ್ಲಿ ಪ್ರಯಾಣಿಕರನ್ನು ಹಾಕುವಂತಿಲ್ಲ ಸರಕು ವಾಹನದಲ್ಲಿ ಪ್ರಯಾಣಿಕ ರನ್ನು ಹಾಗೂ ಪ್ರಯಾಣಿಕರ ವಾಹನ ದಲ್ಲಿ ಸರಕುಗಳನ್ನು ತುಂಬಿಕೊಂಡು ಹೋಗುವ ವಾಹನಗಳನ್ನು ಮುಟ್ಟು ಗೋಲು ಹಾಕಲಾಗುತ್ತಿದೆ. ಬಸ್‌ಗಳಲ್ಲಿಯೂ ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗಲಾಗುತ್ತಿದೆ. ಈ ಬಗ್ಗೆ ದೂರುಗಳು ಬಂದರೆ ಸೂಕ್ತ ಕ್ರಮ ತೆಗೆದು ಕೊಳ್ಳಲಾಗುವುದು ಎನ್ನುತ್ತಾರೆ ಆರ್‌ಟಿಒ ಅಧಿಕಾರಿಗಳು.

Advertisement

ಸೆ.14ಕ್ಕೆ ಜನಸ್ಪಂದನ:

ಸಾರ್ವಜನಿಕ ವಾಹನಗಳು, ಬಸ್‌ ಟೈಮಿಂಗ್ಸ್‌ ವಿಚಾರದಲ್ಲಿ ಬಗ್ಗೆ ಸಾರ್ವಜನಿಕರಿಗೆ ದೂರುಗಳಿದ್ದರೆ ಹಾಗೂ ಮನವಿಗಳನ್ನು ನೀಡಲು ಸೆ.14ರಂದು ಮಣಿಪಾಲ ರಜತಾದ್ರಿಯ ಸಾರಿಗೆ ಸೌಧ ದಲ್ಲಿ ನಡೆಯಲಿದೆ.

ನೋಂದಾಯಿಸಿರುವ  ಒಟ್ಟು ವಾಹನಗಳು  :

ಮೋಟಾರ್‌ ಸೈಕಲ್‌ಗ‌ಳು               3,56,753

ಮೋಟಾರ್‌ ಕಾರುಗಳು   67,754

ಸ್ಕೂಲ್‌ ಬಸ್‌ಗಳು             947

ಆಟೋ ರಿಕ್ಷಾಗಳು           21,819

ಲಕ್ಸು$Âರಿ ಟ್ಯಾಕ್ಸಿಗಳು   6,860

ಸರಕು ವಾಹನಗಳು         20,427

ಮ್ಯಾಕ್ಸಿ ಕ್ಯಾಬ್‌ಗಳು         1,303

ಬಸ್‌ಗಳು             1,120

ಒಟ್ಟು ನೋಂದಾಯಿತ ವಾಹನಗಳು       4,81,798

ಲಾಕ್‌ಡೌನ್‌ ಬಳಿಕ ರಾಜಸ್ವ ಸಂಗ್ರಹ ಹಾಗೂ ವಾಹನ ನೋಂದಣಿಯಲ್ಲಿ ಹೆಚ್ಚಳವಾಗುತ್ತಿದೆ. ಸರಂಡರ್‌ ಮಾಡಿರುವ ಹೆಚ್ಚಿನ ವಾಹನಗಳು ತೆರಿಗೆ ಪಾವತಿಸಿ ಓಡಾಟ ಮಾಡುತ್ತಿವೆ. ಕೆಲವೊಂದು ವಾಹನಗಳು ತೆರಿಗೆ ಪಾವತಿಸಿ ಓಡಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಮುಟ್ಟುಗೋಲು ಹಾಕಲಾಗಿದೆ. ಈ ಬಗ್ಗೆ ದೂರುಗಳು ಬಂದರೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು.ಗಂಗಾಧರ್‌ ಜೆ.ಪಿ.,ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next