Advertisement
ನಗರದಲ್ಲಿ 18,000 ಜನರಿರುವುದಾಗಿ ಹೇಳಲಾಗಿದೆ. ದೇಶದಲ್ಲಿ ಯುದ್ಧ ಆರಂಭವಾದಾಗಿನಿಂದ ಒಟ್ಟು 50 ಲಕ್ಷಕ್ಕೂ ಅಧಿಕ ಮಂದಿ ದೇಶ ಬಿಟ್ಟು ತೆರಳಿದ್ದಾರೆ. ಅದರಲ್ಲಿ 2.18 ಲಕ್ಷ ಮಂದಿ ವಿದೇಶಿಗರಿದ್ದಾರೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ (ಯುಎನ್‌ಎಚ್‌ಆರ್‌ಸಿ) ಬುಧವಾರ ಮಾಹಿತಿ ಕೊಟ್ಟಿದೆ. ಮರಿಯುಪೋಲ್‌ನ 36ನೇ ಸಪರೇಟ್ ಮರೈನ್ ಬ್ರಿಗೇಡ್‌ನ ಕಮಾಂಡರ್ ಫೇಸ್‌ಬುಕ್ ವೀಡಿಯೋ ಮೂಲಕ ವಿಶ್ವದ ನಾಯಕರಲ್ಲಿ ಮನವಿ ಮಾಡಿದ್ದಾರೆ.
ರಷ್ಯಾದ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್‌ನ ತಾಯಿಯೊಬ್ಬಳು ತನ್ನ ಪುಟಾಣಿ ಮಗಳ ಬೆನ್ನ ಮೇಲೆ ಆಕೆಯ ವಿವರ ಬರೆದು, ಸಂಪರ್ಕ ಸಂಖ್ಯೆ ಬರೆದಿದ್ದ ಫೋಟೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಒಂದು ವೇಳೆ ರಷ್ಯಾ ದಾಳಿಯಲ್ಲಿ ತನ್ನ ಮಗಳು ಕಾಣೆಯಾದರೆ, ಆಕೆಯನ್ನು ಮತ್ತೆ ತನ್ನೊಂದಿಗೆ ಒಂದು ಮಾಡಲು ಸಹಾಯವಾಗಲಿ ಎಂದು ಆ ಮಾಹಿತಿಯನ್ನು ಬರೆದಿದ್ದಾಗಿ ತಾಯಿ ಹೇಳಿಕೊಂಡಿದ್ದಳು. ಇದೀಗ ಆ ತಾಯಿ-ಮಗಳು ಮತ್ತು ಪೂರ್ತಿ ಕುಟುಂಬ ಯುದ್ಧ ಪೀಡಿತ ಉಕ್ರೇನ್‌ನಿಂದ ಹೊರಬಂದಿದ್ದು, ಫ್ರಾನ್ಸ್‌ನ ಸಣ್ಣ ಹಳ್ಳಿಯೊಂದಕ್ಕೆ ಸ್ಥಳಾಂತರಗೊಂಡಿದ್ದಾರೆ.