Advertisement

Indian Railways; ಸುರಕ್ಷಾ ಕ್ರಮದಿಂದಾಗಿ ರೈಲು ಅಪಘಾತದಲ್ಲಿ ಇಳಿಕೆ!

01:52 PM Jun 19, 2024 | Team Udayavani |

ಹೊಸದಿಲ್ಲಿ: 2004ರಿಂದ 2014ರವರೆ ಗಿನ ಅವಧಿಗೆ ಹೋಲಿಸಿದರೆ ಸುರಕ್ಷಾ ಕ್ರಮಗಳಿಂದಾಗಿ ರೈಲು ಅಪಘಾತಗಳ ಪ್ರಮಾಣ ವರ್ಷಕ್ಕೆ ಶೇ.68ಕ್ಕೆ ಇಳಿಕೆಯಾ ಗಿದೆ. 2014ರಿಂದ 2024ರ ಅವಧಿಯಲ್ಲಿ ವಾರ್ಷಿಕ 171 ಸತತ ಅಪಘಾತಗಳು ಘಟಿಸುತ್ತಿದ್ದವು. ಅನಂತರದ ಹತ್ತು ವರ್ಷದಲ್ಲಿ ಈ ಅಪಘಾತಗಳ ಸಂಖ್ಯೆ ಯು ಇಳಿಕೆಯಾಗುತ್ತ ಬಂದಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Advertisement

2000-01ರಲ್ಲಿ 473 ರೈಲು ಅಪ ಘಾತಗಳ ಸಂಖ್ಯೆಯು ಈಗ 2023- 24ರ ಹೊತ್ತಿಗೆ 40ಕ್ಕೆ ಇಳಿಕೆಯಾಗಿದೆ. ಕಳೆದ ಹತ್ತು ವರ್ಷದಲ್ಲಿ ಕೈಗೊಂಡ ಸುರಕ್ಷಾ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ ಎಂಬುದು ರೈಲ್ವೇ ದತ್ತಾಂಶಗಳಿಂದ ತಿಳಿದು ಬಂದಿದೆ. ಸಂಭಾವ್ಯ ರೈಲು ಅಪಘಾತಗಳನ್ನು ತಡೆಯುವ ಕವಚ್‌ನಂಥ ಕ್ರಮಗಳಿಂದ ಸುರಕ್ಷತೆ ಇನ್ನಷ್ಟು ಹೆಚ್ಚಾಗಲಿದೆ.

ಸಾವಿನ ಸಂಖ್ಯೆ 10ಕ್ಕೆ ಏರಿಕೆ:  ಸೋಮ ವಾರ ಪಶ್ಚಿಮ ಬಂಗಾಲದಲ್ಲಿ ಸಂಭವಿ ಸಿದ ಕಾಂಚನಗಂಗಾ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾ ಗಿದೆ. ಈ ಮೊದಲು 9 ಜನರು ಮೃತ ಪಟ್ಟಿದ್ದರು. ಮಂಗಳವಾರ ಗಾಯಾಳು ಒಬ್ಬರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಎಂದಿನಂತೆ ರೈಲು ಸಂಚಾರ ಆರಂಭ

ರೈಲು ಅಪಘಾತ ಸಂಭವಿಸಿದ ಪಶ್ಚಿಮ ಬಂಗಾಲದ ಮಾರ್ಗದಲ್ಲಿ ರೈಲ್ವೇ ಸೇವೆ ಎಂದಿನಂತೆ ಶುರುವಾಗಿದೆ. ಅಪಘಾತದ ಸ್ಥಳದಲ್ಲಿ ವಿದ್ಯುತ್‌ ಪೂರೈಕೆ ಯನ್ನು ಮರು ಸ್ಥಾಪಿಸಲಾಗಿದ್ದು, ವಿದ್ಯುತ್‌ ಚಾಲಿತ ರೈಲು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಾಗಿಲಲ್ಲಿ ನಿಂತು ಪಾರಾದ ವ್ಯಕ್ತಿ!

ರೈಲು ಪ್ರಯಾಣದ ವೇಳೆ ಬೋಗಿ ಯ ಬಾಗಿಲಲ್ಲಿ ನಿಂತುಕೊಳ್ಳುವುದು ಅಪಾಯಕಾರಿ ಮಾತ್ರವಲ್ಲದೇ ಜೀವಕ್ಕೆ ಕುತ್ತು ಬರುತ್ತದೆ. ಈ ವ್ಯಕ್ತಿ ಬೋಗಿ ಬಾಗಿಲಲ್ಲೇ ನಿಂತಿದ್ದಕ್ಕೆ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೋಗಿಯಲ್ಲಿ ಕುಳಿತು ಕೊಳ್ಳಲು ಜಾಗ ಸಿಗದೆ ಬಾಗಿಲಲ್ಲಿ ನಿಂತಿದ್ದ 35 ವರ್ಷ ಆಶಿಶ್‌ ದಾಸ್‌, ಕಾಂಚನ್‌ಗಂಗಾ ರೈಲಿಗೆ ಗೂಡ್ಸ್‌ ರೈಲು ಹಿಂದಿನಿಂದ ಡಿಕ್ಕಿ ಹೊಡೆ ಯುತ್ತಿದ್ದಂತೆ ಹೊರಗೆ ನೆಗೆದು ಪ್ರಾಣ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಅಪಘಾತದಲ್ಲಿ ಅವರು ಸಾವಿಗೀಡಾಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next