Advertisement

ತಗ್ಗಿದ ಎಚ್‌ಐವಿ: ಕರ್ನಾಟಕವೇ ಮಾದರಿ 

07:00 AM Jul 21, 2018 | Team Udayavani |

ವಿಶ್ವಸಂಸ್ಥೆ: ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಎಚ್‌ಐವಿ ಪೀಡಿತರು, ಎಚ್‌ಐವಿ ಸೋಂಕಿ ಗೊಳಗಾದವರ ಸಂಖ್ಯೆಯಲ್ಲಿ
ಗಣನೀಯ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ಏಡ್ಸ್‌ ನಿಯಂತ್ರಣ ಆಯೋಗ (ಯುಎನ್‌ಎಐಡಿಎಸ್‌) ವರದಿ ಮಾಡಿದೆ.

Advertisement

ವಿಶೇಷವೆಂದರೆ, ಸೋಂಕು ನಿಯಂತ್ರಣ ವಿಚಾರದಲ್ಲಿ ಭಾರತಕ್ಕೆ ಕರ್ನಾಟಕವೇ ಮಾದರಿ ಎಂದೂ ವರದಿ ಹೇಳಿದೆ.”ಮೈಲ್ಸ್‌ ಟು ಗೋ ಕ್ಲೋಸಿಂಗ್‌ ಗ್ಯಾಪ್ಸ್‌, ಬ್ರೇಕಿಂಗ್‌ ಬ್ಯಾರಿಯರ್ಸ್‌, ರೈಟಿಂಗ್‌ ಇನ್‌ ಜಸ್ಟಿಸಸ್‌’ ಎಂಬ ವರದಿಯಲ್ಲಿ, ಭಾರತ ಸೇರಿದಂತೆ ಕಾಂಬೋಡಿಯ, ಮ್ಯಾನ್ಮಾರ್‌, ಥಾಯ್ಲೆಂಡ್‌ ವಿಯೆಟ್ನಾಂಗಳಲ್ಲಿ 2010ರಿಂದ 2017ರವರೆಗೆ ಅಲ್ಲಿನ ಸರ್ಕಾರಗಳು, ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಜಾರಿಗೊಳಿಸಲಾದ ಯೋಜನೆಗಳು ಫ‌ಲವಾಗಿ ಈ ಸೋಂಕು ಗಣನೀಯವಾಗಿ ನಿಯಂತ್ರಣಗೊಂಡಿದೆ ಎನ್ನಲಾಗಿದೆ. ಆದರೆ, ಈ ಸೋಂಕಿನ ಸಂಪೂರ್ಣ ನಿರ್ಮೂಲನೆ ಸದ್ಯಕ್ಕೆ ಸಾಧ್ಯವಿಲ್ಲ ಎಂದಿರುವ ವರದಿ, ಪಾಕಿಸ್ತಾನ ಹಾಗೂ μಲಿಪ್ಪೀನ್ಸ್‌ಗಳಲ್ಲಿ ಇದರ ತೀವ್ರತೆ ಹೆಚ್ಚಾಗಿದೆ ಎಂದಿದೆ.

ಮಾದರಿಯಾದ ಕರ್ನಾಟಕ: ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ, ಎಚ್‌ಐವಿ ಸೋಂಕು ನಿಯಂತ್ರಣ ವಿಚಾರದಲ್ಲಿ ಕರ್ನಾಟಕ ಗಣನೀಯ ಸಾಧನೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸಮಸ್ಯೆ ಯ ನಿವಾರಣೆಗಾಗಿ, ನೈರ್ಮಲಿÂàಕರಣದ ಕಾರ್ಯಾಗಾರಗಳು, ಎಚ್‌ಐವಿ ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವ ಯತ್ನಗಳಂಥ ಕ್ರಮಗಳಿಂದ ಹಾಗೂ “ಬಿಲ್‌ ಆ್ಯಂಡ್‌ ಮೆಲಿಂಡಾ ಗೇಟ್ಸ್‌ ಫೌಂಡೇಷನ್‌’ನ ಪ್ರಾಯೋಜ ಕತ್ವದಲ್ಲಿ ಜಾರಿಗೊಂಡ ಆವಾಹನೆ ಯೋಜನೆ ಯಡಿ ಕರ್ನಾಟಕದಲ್ಲಿ ಏಡ್ಸ್‌ ಮಹಾಮಾರಿಯ ಪ್ರಾಬಲ್ಯ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

18% – ಕಳೆದ ಏಳು ವರ್ಷಗಳ ಅವಧಿಯಲ್ಲಿ ವಿಶ್ವದಲ್ಲಿ ಕಡಿಮೆಯಾದ ಎಚ್‌ಐವಿ ಪೀಡಿತರ ಸಂಖ್ಯೆ
36.9 ದಶಲಕ್ಷ – 2017ರಅಂತ್ಯದ ವೇಳೆಗೆ ವಿಶ್ವದಲ್ಲಿ ಇರುವ ಎಚ್‌ಐವಿ ಪೀಡಿತರ ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next