Advertisement

ಓಡಾಟದಿಂದ ಶೀಘ್ರ ಸಾವಿನ ಅಪಾಯ ಕಡಿಮೆ

07:48 AM Jan 22, 2019 | |

ಅರ್ಧಗಂಟೆಗೊಮ್ಮೆ ಕುಳಿತಲ್ಲಿಂದ ಎದ್ದು ಓಡಾಟ ನಡೆಸಿದರೇ ಹಿರಿಯ ವಯಸ್ಕರಲ್ಲಿ ಶೀಘ್ರ ಸಾವಿನ ಅಪಾಯವನ್ನು 35 ಪ್ರತಿಶತ ಕಡಿಮೆಗೊಳಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ವಾಗೆಲಸ್‌ ಕಾಲೇಜಿನ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರ ತಂಡ ಮಾಡಿರುವ ಸಂಶೋಧನೆಯಲ್ಲಿ ನಾಲ್ಕರಲ್ಲಿ ಒಬ್ಬ ವಯಸ್ಕ ದಿನದಲ್ಲಿ 8 ಗಂಟೆಗಿಂತಲೂ ಹೆಚ್ಚು ಕುಳಿತುಕೊಳ್ಳುತ್ತಾರೆ ಎಂದು ಕಂಡು ಹಿಡಿಯಲಾಗಿದೆ. ಇದರಲ್ಲಿ 30 ನಿಮಿಷಕ್ಕಿಂತ ಕಡಿಮೆ ಹೊತ್ತು ಕುಳಿತುಕೊಳ್ಳುವರಲ್ಲಿ ಶೀಘ್ರ ಸಾವಿನ ಅಪಾಯ ಕಡಿಮೆ ಎಂದು ತಿಳಿದುಬಂದಿದೆ. ಹೀಗಾಗಿ ಅರ್ಧ ಗಂಟೆಗೊಮ್ಮೆ ವಿರಾಮ ತೆಗೆದುಕೊಂಡು ಚಲನೆಯಲ್ಲಿ ತೊಡಗಿಕೊಂಡರೆ ಶೀಘ್ರ ಸಾವು ಉಂಟಾಗುವುದಿಲ್ಲ ಎಂದು ಸಲಹೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next