ಹೀಗಾದಾಗ ಆರ್ಥಿಕ ಅಸಮತೋಲನ ಸಾಧಿಸುವುದು ಅಸಾಧ್ಯ. ಖರ್ಚುವೆಚ್ಚಗಳ ಸರಿಯಾದ ನಿರ್ವಹಣೆಯೊಂದಿಗೆ ನಿಗದಿತ ಆದಾಯವಿದ್ದಲ್ಲಿ ಆರ್ಥಿಕ ಸಮತೋಲನ ಸಾಧಿಸುವುದು ಅಷ್ಟೇನೂ ಕಷ್ಟವಲ್ಲ. ಇರುವ ಆದಾಯದಲ್ಲೇ
ಕೊಂಚ ಹಣವನ್ನಾದರೂ ಹೇಗೆ ಉಳಿಸಬಹುದು ಎನ್ನುವುದಕ್ಕೆ ಕೆಲವು ಸಲಹೆಗಳು ಇಲ್ಲಿವೆ.
Advertisement
ವೆಚ್ಚದ ಪರಿಶೀಲನೆ ನಡೆಸಿನಿಮ್ಮ ತಿಂಗಳ ಬಜೆಟ್ ತಯಾರಿಗೂ ಮುನ್ನ ನಿಮ್ಮ ಹಣವೆಲ್ಲ ಇಲ್ಲಿಯ ತನಕ ಯಾವುದಕ್ಕೆ ವಿನಿಯೋಗವಾಗುತ್ತಿತ್ತು ಎನ್ನುವುದನ್ನು ಮೊದಲು ಗಮನಿಸಿ. ಕನಿಷ್ಠ ಆರು ವಾರಗಳ ಖರ್ಚುವೆಚ್ಚಗಳನ್ನಾದರೂ ಪರಿಶೀಲಿಸಿಯೇ ನಿಮ್ಮ ಮುಂದಿನ ಬಜೆಟ್ ನಿರ್ಣಯವಾಗಬೇಕು. ನೀವು ವೆಚ್ಚ ಮಾಡಿದ ಅಥವಾ ವಸ್ತುಗಳನ್ನು ಕೊಂಡುಕೊಂಡಿರುವ ಬಿಲ್‌ಗಳನ್ನು ಆದಷ್ಟು ಶೇಖರಿಸಲು ನೋಡಿ. ಇವೆಲ್ಲವೂ ನಿಮ್ಮ ಆದಾಯ ಮತ್ತು ಖರ್ಚಿನ ನಿಖರ ಮಾಹಿತಿ ನೀಡಲು ಸಹಕಾರಿಯಾಗುತ್ತವೆ.
ಒಮ್ಮೆ ನಿಮ್ಮ ಖರ್ಚಿನ ಲೆಕ್ಕ ಸಿಕ್ಕಿದ್ದೇ ಆದಲ್ಲಿ ನಿಮ್ಮ ಬಜೆಟ್ ತಯಾರಿ ಸ್ವಲ್ಪ ಸುಲಭವಾಗಿರುತ್ತದೆ. ಕುಟುಂಬದ ಪ್ರತೀ ಸದಸ್ಯರ ಖರ್ಚು ವೆಚ್ಚಗಳು ನಿಮ್ಮ ಬಜೆಟ್‌ನಲ್ಲಿರಲಿ. ಏಕೆಂದರೆ ಸಾಮಾನ್ಯವಾಗಿ ಕುಟುಂಬದ ಮುಖ್ಯಸ್ಥರ ಆದಾಯದ ಆಧಾರದಲ್ಲಿಯೇ ಇತರ ಸದಸ್ಯರ ಖರ್ಚು ವೆಚ್ಚಗಳಿರುತ್ತವೆ. ಆ ಕಾರಣ ಬೆಜೆಟ್ ನಿರ್ವಹಣೆ ಕುಟುಂಬದ ಪ್ರತೀ ಸದಸ್ಯರ ಜವಬ್ದಾರಿ. ಹಣ ಹೊಂದಿಸಿಕೊಳ್ಳಿ
ಒಂದು ವೇಳೆ ನಿಮ್ಮ ಬಜೆಟ್ ನಿಮ್ಮ ಆದಾಯಕ್ಕಿಂತ ಹೆಚ್ಚಿದ್ದಲ್ಲೇ ಆದಲ್ಲಿ ಕೆಲವು ಸುಧಾರಣೆಗಳನ್ನು ನೀವು ಮಾಡಿಕೊಳ್ಳಲೇಬೇಕಾಗುತ್ತದೆ. ಏಕೆಂದರೆ ಆಗ ನಮಗಿರುವ ಆಯ್ಕೆಗಳು ಎರಡೇ. ಒಂದೋ ಆದಾಯ ಹೆಚ್ಚಿಸಿಕೊಳ್ಳಬೇಕು ಇಲ್ಲವೇ ಖರ್ಚನ್ನು ಕಡಿತಗೊಳಿಸಬೇಕು.
Related Articles
ಸಾಮಾನ್ಯವಾಗಿ ನಾವು ಒಂದು ನಿರ್ದಿಷ್ಟ ಕಾರಣಕ್ಕೆ ವಿನಿಯೋಗಿಸುವ ಹಣ ನಮ್ಮ ಬಜೆಟ್‌ನಲ್ಲಿ ಕೊಂಚ ಕಡಿಮೆಯೇ ಇದ್ದರೆ ಕೊನೆಗೆ ಅದು ಪ್ರಸ್ತುತ ಇರುವ ಖರ್ಚಿನಷ್ಟಕ್ಕಾದರೂ ನಿಲ್ಲುತ್ತದೆ. ಇಲ್ಲಿದಿದ್ದಲ್ಲಿ ಮುಂದಿನ ಬಾರಿ ಅದು ನಮ್ಮ ಬಜೆಟ್ ಅನ್ನೂ ಮೀರಬಹುದು. ಉದಾಹರಣೆಗೆ ಟೆಲಿಫೋನ್ ಅಥವಾ ಮೊಬೈಲ್ ಗೆಂದು ನಾವು ವಿನಿಯೋಗಿಸುವ ಹಣ ತಿಂಗಳಿಗೆ 300 ರೂ. ಇದ್ದರೆ. ನಮ್ಮ ಬಜೆಟ್‌ನಲ್ಲಿ ಅದು 250 ರೂ. ಗೆ ಇರಲಿ. ಆಗ ಕನಿಷ್ಠ 300 ರೂ. ಗಳಿಗಾದರೂ ನಾವು ನಮ್ಮ ವೆಚ್ಚವನ್ನು ನಿಲ್ಲಿಸಬಹುದು.
Advertisement
ಪ್ರಸನ್ನ ಹೆಗಡೆ ಊರಕೇರಿ