ಹೊಸದಿಲ್ಲಿ: ಸಮರ್ಪಕ ತ್ಯಾಜ್ಯ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಮೂರು ‘ಆರ್’ಗಳನ್ನು ಬಳಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಇಂದೋರ್‌ನಲ್ಲಿ ಸೋಮವಾರ ಆರಂಭವಾಗಿ 12ರಂದು ಮುಕ್ತಾಯವಾಗಲಿರುವ ಎಂಟನೇ ಪ್ರಾದೇಶಿಕ ತ್ರಿ ಆರ್ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಈ ಸಂದೇಶ ನೀಡಿದ್ದಾರೆ. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.ತಗ್ಗಿಸು (ರೆಡ್ಯೂಸ್), ಪುನರ್‌ಬಳಕೆ (ರೀ ಯೂಸ್), ಮತ್ತೂಮ್ಮೆ ಬಳಕೆ (ರಿಸೈಕಲ್) ಈ ಮೂರು ಅಂಶಗಳು ಸಹ್ಯ ಅಭಿವೃದ್ಧಿ ಸಾಧಿಸಲು ನೆರವಾಗಲಿವೆ ಎಂದಿದ್ದಾರೆ ಪ್ರಧಾನಿ.
Advertisement