Advertisement

ತಾಯಿ-ಮಗು ಮರಣ ಪ್ರಮಾಣ ತಗ್ಗಿಸಿ- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚನೆ

12:28 AM Dec 08, 2023 | Team Udayavani |

ಮಂಗಳೂರು, ಡಿ. 7: ಜಿಲ್ಲೆಯಲ್ಲಿ ಪ್ರಸವ, ಅನಂತರದಲ್ಲಿ ಆರೋಗ್ಯ ಏರುಪೇರಿನಿಂದ ತಾಯಿ ಮತ್ತು ಮಗು ಸಾವಿಗೀಡಾಗುವ ಪ್ರಮಾಣವನ್ನು ತಗ್ಗಿಸುವಂತೆ ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ ಎಂ.ಪಿ. ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ತಾಯಿ ಮತ್ತು ಶಿಶು ಮರಣ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ವೈದ್ಯಕೀಯ ಮಾನವ ಸಂಪನ್ಮೂಲವಿದೆ. ಆದರೂ ಪ್ರಸವಾ ನಂತರ ತಾಯಿ, ಶಿಶು ಮರಣ ಪ್ರಕರಣ ವರದಿಯಾಗುತ್ತಿರುವುದು ಕಳವಳಕಾರಿ ಎಂದರು.

ಅವಧಿ ಪೂರ್ವ ಹೆರಿಗೆ, ರಕ್ತದೊತ್ತಡ, ಅಧಿಕ ರಕ್ತಸ್ರಾವ, ಸೋಂಕು ಮತ್ತು ಅಧಿಕ ರಕ್ತದೊತ್ತಡದ, ಛಿದ್ರಗೊಂಡ ಗರ್ಭಾಶಯ, ಹೆಪಟೈಟಿಸ್‌ ಮತ್ತು ರಕ್ತಹೀನತೆಯಿಂದ ತಾಯಿ ಸಾವು ಹೆಚ್ಚಾ ಗುತ್ತಿದೆ. ತಾಯಂದಿರ ಸಾವನ್ನು ಸೂಕ್ತ ನಿರ್ವಹಣೆ ಯಿಂದ ತಡೆಯಬಹುದು. ಗರ್ಭಧಾರಣೆ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ತಾಯಿ ಕಾರ್ಡ್‌
ಮೂಲಕ ಗರ್ಭಿಣಿ, ಕುಟುಂಬದ ಮಾಹಿತಿ ಕಲೆ ಹಾಕಬೇಕು. ಅವರ ಸಂಪೂರ್ಣ ಮಾಹಿತಿ ತಿಳಿದುಕೊಂಡಿ ರಬೇಕು ಎಂದು ಸೂಚಿಸಿದರು.

ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡಿ
ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯ ಕರ್ತೆಯರು ಮತ್ತು ಅಂಗನ ವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಮತ್ತು ಆರೈಕೆ ಮತ್ತು ಆರೋಗ್ಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು. ಹೆರಿಗೆ ಸಂದರ್ಭ ಅಥವಾ ಪೂರ್ವ ಯಾವುದೇ ಸಮಸ್ಯೆ ಆದರೆ ಮೂಢನಂಬಿಕೆಗೆ ಒಳಗಾಗದೆ ವೈದ್ಯರನ್ನು ಸಂಪರ್ಕಿಸಲು ಮಾಹಿತಿ ನೀಡುವಂತೆ ಪ್ರಚಾರ ಮಾಡಬೇಕು ಎಂದರು.

ಆಶಾ/ಅಂಗನವಾಡಿ ಕಾರ್ಯಕರ್ತೆ ಯರಿಗೆ ತಾಯಿ ಮರಣ ಮತ್ತು ಶಿಶು ಮರಣದ ಬಗ್ಗೆ ತರಬೇತಿ ನೀಡಬೇಕು. ಗರ್ಭಾವಸ್ಥೆಯಲ್ಲಿ ವೈದ್ಯರ ಸಲಹೆ ಪಡೆಯಲು ಆಶಾ ಕಾರ್ಯಕರ್ತರು ನಿಗಾ ವಹಿಸಬೇಕು ಎಂದರು.

Advertisement

ಪ್ರಸವಾನಂತರ ತಾಯಿ ಸಾವನ್ನಪ್ಪಿದ ಕುಟುಂಬ ಸದಸ್ಯರ ಅಹವಾಲುಗಳನ್ನು ಜಿಲ್ಲಾಧಿಕಾರಿ ಆಲಿಸಿದರು.

ಶಿಶು ಮರಣ ಪ್ರಮಾಣ 1,000ಕ್ಕೆ 39
ದ.ಕ. ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣವು 1,000ಕ್ಕೆ 39 ಇದ್ದು, ಉಳಿದ ಜಿಲ್ಲೆಗಳಿಗಿಂತ ಕಡಿಮೆಯಿದೆ. ಕೇರಳದಲ್ಲಿ ಇದು 19 ಇದೆ. ಪ್ರಸಕ್ತ ವರ್ಷಎಪ್ರಿಲ್‌ನಿಂದ ನವೆಂಬರ್‌ ವರೆಗೆ ಜಿಲ್ಲೆಯಲ್ಲಿ ಪ್ರಸವಾನಂತರ ತಾಯಿ ಸಾವನ್ನಪ್ಪಿರುವ 7 ಪ್ರಕರಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಮತ್ತು ಆಸ್ಪತ್ರೆಗಳು, ವೈದ್ಯರು ಸಮನ್ವಯತೆಯಿಂದ ತಾಯಿ ಶಿಶು ಮರಣ ಪ್ರಮಾಣ ತಗ್ಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next