Advertisement

ಹೆಸರು ಬದಲಾವಣೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆಯಾ ರೆಡ್ ಮಿ K ಸರಣಿ

06:21 PM Mar 05, 2021 | Team Udayavani |

ನವದೆಹಲಿ: ದಿನಕ್ಕೊಂದರಂತೆ ಹೊಸ ಹೊಸ ಸೌಲಭ್ಯದ ಮೊಬೈಲ್ ಪೋನ್ ಗಳೊಂದಿಗೆ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ರೆಡ್ ಮೀ, ತನ್ನ K ಸರಣಿಯ ರೆಡ್ ಮಿ K 40 ಮತ್ತು ರೆಡ್ ಮಿ K 40 ಪ್ರೊ ಎಂಬ ಹೊಸ ಸ್ಮಾರ್ಟ್ ಪೋನ್ ಗಳನ್ನು ಬಿಡುಗಡೆ ಮಾಡಿದೆ.

Advertisement

ಸದ್ಯ ಚೀನಾದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸ್ಮಾರ್ಟ್ ಫೋನ್, ವಿಶ್ವ ಮಾರುಕಟ್ಟೆಗೆ ಯಾವಾಗ  ಬಿಡುಗಡೆಗೊಳ್ಳಲಿದೆ ಎಂಬುವುದರ ಕುರಿತಾಗಿ ಸರಿಯಾದ ಮಾಹಿತಿಯನ್ನು ಸಂಸ್ಥೆ ಈ ವರೆಗೂ ತಿಳಿಸಿಲ್ಲ. ಆದರೆ ಮೂಲಗಳ ಪ್ರಕಾರ ಈ ಸ್ಮಾರ್ಟ್ ಪೋನ್ ಭಾರತದಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಳ್ಳುವ ಮೂಲಕ  Mi 11 X, ಹಾಗೂ Mi 11 X ಪ್ರೋ ಹೆಸರಿನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ಇದನ್ನೂ ಓದಿ:ಶೀ‍ಘ್ರದಲ್ಲೇ ಕಡಿಮೆ ದರದ ‘ಜಿಯೋ’ ಲ್ಯಾಪ್ ಟಾಪ್ ಮಾರುಕಟ್ಟೆಗೆ ಲಗ್ಗೆ..!  

ಈ ಹಿಂದೆ ಈ ಮೊಬೈಲ್ ಪೋನ್ ಪೊಕೊ F3 ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದು, ಈ ನಡುವೆ ಟಿಪ್ಸ್ಟರ್ ಕ್ಯಾಕ್ಪರ್ ಸ್ಕ್ರಜಿಪೆಕ್ ಈ ಕುರಿತಾಗಿ ಮಾಹಿತಿ ನೀಡಿದ್ದು, ಈ ಮೊಬೈಲ್ ಪೋನ್ ಪೊಕೊ ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲ ಬದಲಾಗಿ ಇದು  Mi 11 X ಹೆಸರಿನಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದಿದ್ದಾರೆ.

ಇದರೊಂದಿಗೆ ಇವರು Mi 11 X ಪ್ರೊ ನ ಹೆಡ್ ಸೆಟ್ ನ ಪೋಟೋ ಒಂದನ್ನು ಹಂಚಿಕೊಂಡಿದ್ದು, ಈ ಮೂಲಕ ಮುಂಬರುವ ದಿನಗಳಲ್ಲಿ Mi 11 X ಹೆಸರಿನಲ್ಲಿ ಸ್ಮಾರ್ಟ್ ಪೋನ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದಿದ್ದಾರೆ. ಆದರೆ ಈ ಕುರಿತಾದ ಯಾವುದೇ ಅಧೀಕೃತ ಮಾಹಿತಿಗಳನ್ನು ಸಂಸ್ಥೆ ಇಲ್ಲಿಯವರೆಗೂ ತಿಳಿಸಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next