ಹೊಸದಿಲ್ಲಿಯಲ್ಲಿ ಪ್ರಗತಿ ಮೈದಾನ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಅದೇ ಐಟಿಪಿಒ ಕಾಂಪ್ಲೆಕ್ಸ್ ಅಂದರೆ ಅದೆಲ್ಲಿ ಬರುತ್ತದೆ ಎಂದು ಜನ ಪ್ರಶ್ನಿಸುತ್ತಾರೆ. ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ ಅನ್ನೇ ಚುಟುಕಾಗಿ ಐಟಿಪಿಒ ಎನ್ನುತ್ತಾರೆ. ಇದಕ್ಕೆ ಪ್ರಗತಿ ಮೈದಾನ್ ಸಂಕೀರ್ಣ ಎಂದೂ ಹೇಳುತ್ತಾರೆ. ಇದರ ನವೀಕೃತ ಕಟ್ಟಡವನ್ನು ಜು.26ಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಉದ್ಘಾಟಿಸುವ ನಿರೀಕ್ಷೆಯಿದೆ. ವಿಶೇಷವೇನು ಗೊತ್ತಾ? ಇಲ್ಲೇ ಸೆಪ್ಟೆಂಬರ್ ತಿಂಗಳಲ್ಲಿ ಜಿ20 ಸಮಾವೇಶ ನಡೆಯಲಿದೆ.
7,000
ಸಭಾಭವನದ ಆಸನ ಸಾಮರ್ಥ್ಯ. ಆಸ್ಟ್ರೇಲಿಯದ ಸಿಡ್ನಿ ಒಪೇರಾ ಹೌಸ್‌ಗಿಂತಲೂ (5,500) ಹೆಚ್ಚು ಆಸನ ಸಾಮರ್ಥ್ಯವಿದೆ.
3,000
ಇಲ್ಲೇ ಇರುವ ಐಇಸಿಸಿ ಕೇಂದ್ರದಲ್ಲಿರುವ ಆ್ಯಂಫಿಥಿಯೇಟರ್‌ನಲ್ಲಿರುವ (ತೆರೆದ ಸಭಾಭವನ) ಆಸನ ಸಾಮರ್ಥ್ಯ.
123
ಐಟಿಪಿಒ ಸಂಕೀರ್ಣದ ಆವರಣದ ಒಟ್ಟು ವಿಸ್ತೀರ್ಣ