Advertisement

ಗಂಗಾವತಿಯಲ್ಲಿ ರೆಡ್ಡಿ ಸ್ಪರ್ಧೆ ಕಾಂಗ್ರೆಸ್ ಮೇಲೆ ಪರಿಣಾಮ ಬೀರದು: ಎಚ್.ಆರ್.ಶ್ರೀನಾಥ್

04:39 PM Dec 10, 2022 | Team Udayavani |

ಗಂಗಾವತಿ :ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಗಣಿಧಣಿ ಮತ್ತು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ಪರ್ಧೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್.ಶ್ರೀನಾಥ್ ಹೇಳಿದರು.

Advertisement

ಶ್ರೀನಾಥ್ ಅವರು ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ”ತಾವು ಹಾಗೂ ಗಾಲಿ ಜನಾರ್ದನ್ ರೆಡ್ಡಿ ಒಂದೇ ಅವಧಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ಕೆಲಸ ಕಾರ್ಯಗಳಿಗೆ ಗಾಲಿ ಜನಾರ್ದನ ರೆಡ್ಡಿ ಸಹಕಾರ ನೀಡಿದ್ದಾರೆ . ಆಲಮಟ್ಟಿ ,ಬಾಗಲಕೋಟೆ ,ಬಳ್ಳಾರಿ ಮಧ್ಯೆ ರೈಲ್ವೆ ಮಾರ್ಗ ಆರಂಭಿಸುವ ಕುರಿತು ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಮನವಿಯನ್ನ ಪುರಸ್ಕರಿಸಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು.ಗಾಲಿಯವರು ಮತ್ತು ತಾವು ಒಳ್ಳೆಯ ಸ್ನೇಹಿತರಾಗಿದ್ದು ಸುಪ್ರೀಂ ಕೋರ್ಟ್ ನಿರ್ಬಂಧದ ಹಿನ್ನೆಲೆಯಲ್ಲಿ ಗಂಗಾವತಿಯಲ್ಲಿ ಮನೆ ಮಾಡಿಕೊಂಡು ಇಲ್ಲಿಯೇ ರಾಜಕೀಯ, ಸಾಮಾಜಿಕ ಜನಸೇವೆ ಮಾಡುವ ಅವರ ಇಚ್ಛೆ ಗೆ ಒಳ್ಳೆಯದಾಗಲಿ. ತಾವು ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಒಂದು ವೇಳೆ ಗಾಲಿ ಜನನ ರೆಡ್ಡಿ ಚುನಾವಣೆಗೆ ಸ್ಪರ್ಧಿಸಿದರೆ ಯಾವುದೇ ಪರಿಣಾಮ ಪರಿಣಾಮ ಆಗೋದಿಲ್ಲ”ಎಂದರು.

”ಕಾಂಗ್ರೆಸ್ ಪಕ್ಷ ಸರ್ವ ಜನರ ಅಶೋತ್ತರಗಳನ್ನ ಈಡೇರಿಸುವ ಪಕ್ಷವಾಗಿದೆ. ಗಣಿ ಹಗರಣದ ಕುರಿತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಕೈಗೊಂಡು ರೆಡ್ಡಿ ವಿರುದ್ಧ ಸವಾಲು ಎಸೆದು ಯಶಸ್ವಿಯಾಗಿತ್ತು. ಆದ್ದರಿಂದ ಚುನಾವಣೆಯ ಸ್ಪರ್ಧೆಯಲ್ಲಿ ರೆಡ್ಡಿ ತಮ್ಮ ಪ್ರತಿಸ್ಪರ್ಧಿಯಾಗಿದ್ದು, ಜೀವನದಲ್ಲಿ ಸ್ನೇಹಿತರಾಗಿದ್ದೇವೆ ಎಂದು ಶ್ರೀನಾಥ್ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next