Advertisement

“ರೆಡ್ಡಿ ಸಕ್ರಿಯವಾಗಿದ್ರೆ ರಾಮುಲು ಎಂದೋ ಡಿಸಿಎಂ ಆಗ್ತಿದ್ರು’

11:47 PM Dec 16, 2019 | Team Udayavani |

ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದ ಉಪಮುಖ್ಯಮಂತ್ರಿ ಆಗಬೇಕೆಂಬುದು ಈ ಭಾಗದ ಜನರ ಬೇಡಿಕೆ. ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕಾರಣದಲ್ಲಿ ಸಕ್ರಿಯವಾಗಿದ್ದಿದ್ದರೆ ರಾಮುಲು ಎಂದೋ ಉಪಮುಖ್ಯ ಮಂತ್ರಿ ಆಗುತ್ತಿದ್ದರು ಎಂದು ಶಾಸಕ ಜಿ. ಸೋಮಶೇಖರರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣದಲ್ಲಿದ್ದಿದ್ದರೆ ರಾಮುಲು ಅವರಿಗೆ ರಾಜಕೀಯವಾಗಿ ಮತ್ತಷ್ಟು ಬಲ ಬರುತ್ತಿತ್ತು.

Advertisement

ಅವರು ಇನ್ನೂ ಬೇಗ ರಾಜ್ಯದ ಉಪಮುಖ್ಯಮಂತ್ರಿ ಆಗುತ್ತಿದ್ದರು. ಕಾಲಚಕ್ರ ಹೀಗೆಯೇ ಇರಲ್ಲ. ಬದಲಾಗುತ್ತಲೇ ಇರುತ್ತದೆ. ಕೆಳಗಿರೋದು ಮೇಲೆ ಬರಲೇಬೇಕು. ರಾಜಕೀಯ ಅಂದರೆ ಹೀಗೇ. 2008ರಲ್ಲಿ ನಾವು ಪ್ರಬಲರಾಗಿದ್ದೆವು. ಈಗಲೂ ನಾವು ಪ್ರಬಲರಾಗಿಯೇ ಇದ್ದೇವೆ. ಭಗವಂತ ನಮ್ಮನ್ನು ವೀಕ್‌ ಮಾಡಬೇಕೇ ಹೊರತು ಬೇರೆಯವರಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next