Advertisement

ಕೆಂಪು ಅಕ್ಷರಗಳಲ್ಲಿ ಪ್ರಶ್ನೆಪತ್ರಿಕೆ ಅಧ್ಯಾಪಕ ಪರಿಷತ್‌ ಖಂಡನೆ

12:33 AM Mar 13, 2023 | Team Udayavani |

ಕುಂಬಳೆ: ಕಳೆದ ಶುಕ್ರವಾರ ನಡೆದ ಹೈಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ಮಕ್ಕಳಿಗೆ ನೀಡಿದ ಪ್ರಶ್ನೆಪತ್ರಿಕೆಯನ್ನು ಕೆಂಪು ಅಕ್ಷರಗಳಲ್ಲಿ ಮುದ್ರಿಸಲಾಗಿದ್ದು, ಶಿಕ್ಷಣ ಇಲಾಖೆಯ ಕಮ್ಯುನಿಸ್ಟೀಕರಣದ ಸಂಕೇತ ಎಂಬ ಆರೋಪ ವ್ಯಕ್ತವಾಗಿದೆ.

Advertisement

ಪ್ರಶ್ನೆಪತ್ರಿಕೆಗಳನ್ನು ಕಪ್ಪು ಶಾಯಿಯಲ್ಲಿ ಮುದ್ರಿಸಲಾಗುತ್ತದೆ. ಆದರೆ ಈ ಬಾರಿ ಪ್ರಥಮ ವರ್ಷದ ಹೈಯರ್‌ ಸೆಕೆಂಡರಿಯ ದ್ವಿತೀಯ ಭಾಷೆ ಹಿಂದಿ, ಮಲಯಾಳಂ ಮತ್ತು ಸಂಸ್ಕೃತ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಆಡಳಿತ ಪಕ್ಷದ ಧ್ವಜದ ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿದೆ. ಪ್ರಶ್ನೆಪತ್ರಿಕೆಗಳ ಬಂಡಲ್‌ ತೆರೆದಾಗ ಬಣ್ಣ ಬದಲಾದ ವಿಷಯ ಶಿಕ್ಷಕರಿಗೆ ತಿಳಿಯಿತು. ಇದರಿಂದ ವಿದ್ಯಾರ್ಥಿಗಳು ಕೂಡ ಅಚ್ಚರಿಗೊಂಡರು. ಶಿಕ್ಷಣ ಇಲಾಖೆಯ ಈ ಕ್ರಮವನ್ನು ದೇಶೀಯ ಅಧ್ಯಾಪಕ ಪರಿಷತ್‌ ಬಲವಾಗಿ ಖಂಡಿಸಿದೆ. ಶಿಕ್ಷಣವನ್ನು ರಾಜಕೀಯ ಗೊಳಿಸಿ ರುವುದನ್ನು ಪರಿಷತ್‌ ರಾಜ್ಯಾಧ್ಯಕ್ಷ ಪಿ.ಎಸ್‌. ಗೋಪಕುಮಾರ್‌ ಖಂಡಿಸಿ ತಪ್ಪಿತಸ್ಥರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕೆಂಬುದಾಗಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next