Advertisement

“ಪತ್ತನಾಜೆ’ಸಿನೆಮಾಗೆ “ರೆಡ್‌ಎಫ್‌ಎಂ’ವಾರ್ಷಿಕ ಆರು ಪ್ರಶಸ್ತಿ

12:32 PM May 29, 2019 | Vishnu Das |

ಮುಂಬಯಿ: ರೆಡ್‌ ಎಫ್‌ಎಂ ಫಿಲ್ಮ್ ಅವಾರ್ಡ್‌ನಲ್ಲಿ ಕಲಾಜಗತ್ತು ಕ್ರಿಯೇಶನ್ಸ್‌ ಮುಂಬಯಿ ನಿರ್ಮಾಣದ ಪತ್ತನಾಜೆ ತುಳು ಸಿನೆಮಾವು ಆರು ಪ್ರಶಸ್ತಿಗಳನ್ನು ಬಾಚಿ ವರ್ಷದ ಅತ್ಯುತ್ತಮ ತುಳು ಸಿನೆಮಾವಾಗಿ ಹೊರಹೊಮ್ಮಿದ್ದು ಇದರ ಸಂಭ್ರಮಾಚರಣೆಯು ದಹಿಸರ್‌ನ ಹೊಟೇಲ್‌ ಮಹಾರಾಜ್‌ ಸಭಾಗೃಹದಲ್ಲಿ ನಡೆಯಿತು.

Advertisement

ರೆಡ್‌ ಎಫ್‌ಎಂ ಸಂಸ್ಥೆಯ ವಾರ್ಷಿಕ ಪ್ರಶಸ್ತಿಯಲ್ಲಿ ಪತ್ತನಾಜೆ ಸಿನೆಮಾದ ಚಿತ್ರಕಥೆಗೆ ತೋನ್ಸೆ ವಿಜಯಕುಮಾರ್‌ ಶೆಟ್ಟಿ, ಸಂಭಾಷಣೆಗೆ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ಗೀತ ರಚನೆಗೆ ಡಾ| ಸುನೀತಾ ಎಂ. ಶೆಟ್ಟಿ, ಹಾಡಿಗೆ ಸಂಗೀತಾ ಬಾಲಚಂದ್ರ, ಕ್ಯಾಮರಾದಲ್ಲಿ ಸುರೇಶ್‌ ಬಾಬು, ಕೊರಿಯೋಗ್ರಾಫರ್‌ಗೆ

ಮದನ್‌ ಹರಿಣಿ ಹೀಗೆ ಒಟ್ಟು ಆರು ಪ್ರಶಸ್ತಿಗಳು ಲಭಿಸಿದ್ದು, ಇದರ ಅಂಗವಾಗಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾ ನಗರದ ಉದ್ಯಮಿ, ಸಂಘಟಕ ಎರ್ಮಾಳ್‌ ಹರೀಶ್‌ ಅವರು ಮಾತನಾಡಿ, ತುಳುನಾಡ ಕರಾವಳಿಯ ಜನಪದ, ಶ್ರೀಮಂತಿಕೆ ಯನ್ನು ಸಿನೆಮಾದ ಮೂಲಕ ಜಗತ್ತಿಗೆ ಪರಿಚಯಿ
ಸಿದ ಪತ್ತನಾಜೆ ಸಿನೆಮಾ ನಮ್ಮ ಬೆಳ್ಳಿತೆರೆಗೆ ಅಮೂಲ್ಯ ಕೊಡುಗೆಯಾಗಿದೆ. ಇಂತಹ ಸಿನೆಮಾಗಳು ವಿಜಯಕುಮಾರ್‌ ಶೆಟ್ಟಿ ಅವರಿಂದ ಇನ್ನಷ್ಟು ಹೊರಹೊಮ್ಮಲಿ ಎಂದು ಹಾರೈಸಿದರು.

ಪ್ರಶಸ್ತಿ ವಿಜೇತರೆಲ್ಲರ ಪರವಾಗಿ ಮಾತನಾಡಿದ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು, ನಾನು ಕವಿಯಾಗಿ, ಲೇಖಕಿ ಯಾಗಿ ಸಾಹಿತ್ಯ ನಿರ್ಮಿಸಿರುವುದು ಬೇರೆ, ತುಳು ಸಿನಿಮಾವೊಂದಕ್ಕೆ ಗೀತಾ ಸಾಹಿತ್ಯ ರಚಿಸಿದ ಸಂದರ್ಭ ಬೇರೆ. ಇದೊಂದು ಭಿನ್ನ ಹಾಗೂ ವಿಶಿಷ್ಟ ಅನುಭವ. ಇಲ್ಲಿ ನಾನು ಬರೆದು ದಕ್ಕಿಂತಲೂ ಗೀತೆಗಳೇ ನನ್ನನ್ನು ಬರೆಸಿದವು ಎಂದು ನುಡಿದು ಕಲಾಜಗತ್ತು ಕ್ರಿಯೇಶನ್ಸ್‌ಗೆ ಶುಭ ಹಾರೈಸಿದರು.

ನಾಟಕ ಕ್ಷೇತ್ರ ಹಾಗೂ ಸಿನಿಮಾ ಎರಡನ್ನೂ ಶ್ರೀಮಂತಗೊಳಿಸಿದ ಕಲಾಜಗತತ್ತು ನಮ್ಮ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಕಲಾಜಗತ್ತಿನ ವಿಶೇಷ ಸಮ್ಮಾನ ಸ್ವೀಕರಿಸಿದ ಪುಣೆಯ ಉದ್ಯಮಿ, ಸಮಾಜ ಸೇವಕ ಪ್ರವೀಣ್‌ ಶೆಟ್ಟಿ ಪುತ್ತೂರು ನುಡಿದರು.

Advertisement

ಅತಿಥಿಯಾಗಿ ಆಗಮಿಸಿದ ಪಯ್ಯಡೆ ಸಮೂಹದ ಮುಂಡಪ್ಪ ಪಯ್ಯಡೆ ಅವರು ಮಾತನಾಡಿ, ಪತ್ತನಾಜೆ ಎಂಬ ಹೆಸರೇ ಒಂದು ಜಾನಪದದ ಮಹತ್ವವನ್ನು ಹೊಂದಿದೆ. ಆ ಹೆಸರು ಹೊತ್ತ ಸಿನಿಮಾ ಇವತ್ತು ತುಳುವರ ಬದುಕಿನ ವೈಶಿಷ್ಟÂವನ್ನು ಜಗತøಸಿದ್ಧಗೊಳಿಸಿದೆ ಎಂದರು. ಪತ್ತನಾಜೆ ನಿರ್ಮಾಣ ನೀಡಿದ ವ್ಯಾಪಕ ಅನುಭವ, ಅಡಚಣೆಗಳೆಲ್ಲವನ್ನೂ ಈ ಸಂದರ್ಭದಲ್ಲಿ ನಿರ್ದೇಶಕ, ನಿರ್ಮಾಪಕ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರು ಹಂಚಿಕೊಂಡು, ಒಟ್ಟಿನಲ್ಲಿ ಇದು ತನ್ನನ್ನು ರಂಗದ ಅನುಭವದ ಹೊರತಾಗಿ ಚಿತ್ರ ನಿರ್ಮಾಣದ ನಿರ್ದೇಶನದ ಕಾರ್ಯದಲ್ಲೂ ಸಿದ್ಧಗೊಳಿಸಿತು ಎಂದರು. ಶೀಘ್ರದಲ್ಲೇ ಸಂಸ್ಥೆಯ ಎರಡನೇ ತುಳುಚಿತ್ರ ಸೆಟ್ಟೇರಲಿದ್ದು, ಸಿದ್ಧತೆಗಳು ನಡೆಯುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ಪತ್ತನಾಜೆಯ ನಟ-ನಟಿಯರಾದ ಕಾಜಲ್‌ ಕುಂದರ್‌, ಜೂಲಿಯೆಟ್‌, ದೃಶ್ಯಾ ಶೆಟ್ಟಿ, ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಪೃಥ್ವಿರಾಜ್‌ ಮುಂಡ್ಕೂರ್‌, ನಿರ್ಮಾಪಕ, ನಿರ್ದೇಶಕ ವಿಜಯಕುಮಾರ್‌ ಶೆಟ್ಟಿ ಇವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಉದ್ಯಮಿಗಳಾದ ರವೀಂದ್ರ ಶೆಟ್ಟಿ, ಅಮರ್‌ನಾಥ್‌ ಶೆಟ್ಟಿ ಉಪಸ್ಥಿತರಿದ್ದರು. ಕಲಾಜಗತ್ತಿನ ಕಾರ್ಯದರ್ಶಿ ಕಳ್ಳಿಗೆ ದಯಾಸಾಗರ್‌ ಚೌಟ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಲಾಜಗತ್ತು ಸರಿಗಮ ಬಳಗದ ಸಂಗೀತ ಕಾರ್ಯಕ್ರಮದೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next