Advertisement

ರೆಡ್‌ಕ್ರಾಸ್‌ ಸಂಸ್ಥೆ ವಿಶ್ವಮಾನ್ಯ: ಉಮೇಶ್‌

07:53 AM May 09, 2019 | mahesh |

ಬಂಟ್ವಾಳ: ಮಾನವೀಯತೆಯಿಂದ ಶಾಂತಿಯ ಕಡೆಗೆ ಆದರ್ಶ ಸಾರುತ್ತಿರುವ ರೆಡ್‌ ಕ್ರಾಸ್‌ ಸಂಸ್ಥೆ ವಿಶ್ವ ಮಾನ್ಯವಾಗಿದೆ ಎಂದು ರೋಟರಿ ಕ್ಲಬ್‌ ಬಂಟ್ವಾಳ ಟೌನ್‌ ಅಧ್ಯಕ್ಷ ಉಮೇಶ್‌ ನಿರ್ಮಲ್ ಹೇಳಿದರು.

Advertisement

ಅವರು ಮೇ 7ರಂದು ರೋಟರಿ ಕ್ಲಬ್‌ ಬಂಟ್ವಾಳ ಟೌನ್‌ ಆಶ್ರಯದಲ್ಲಿ ವಿಶ್ವ ರೆಡ್‌ಕ್ರಾಸ್‌ ದಿನಾಚರಣೆ ಅಂಗವಾಗಿ ರೋಟರಿ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ನೊಂದವರ, ದುರ್ಬಲರ, ರೋಗಿಗಳ, ಶೋಷಿತರ, ಪ್ರಾಕೃತಿಕ ವಿಕೋಪಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರ ಸೇವೆಗೆ ಸಮರ್ಪಣೆ ಮಾಡಿದ ಮೇ 8 ಮಹತ್ವ ಪಡೆದಿದೆ ಎಂದರು.

ವಿಶ್ವದಲ್ಲಿ ಅತೀ ಹೆಚ್ಚು ಜೀವಹಾನಿ ಮಾಡುವಲ್ಲಿ ಯುದ್ಧಗಳು ಕಾರಣವಾಗಿವೆ. 1863ರಿಂದ ಸ್ಥಾಪಕ ಹೆನ್ರಿ ಡ್ಯುನಾಂಟ್ ಆಶಯವನ್ನು ರಕ್ತ ಸಂಗ್ರಹಣ ಸೇವೆ ಮೂಲಕ ಆರಂಭಿಸಿ ಜನಮನ್ನಣೆ ಗಳಿಸಿದೆ. ರೆಡ್‌ಕ್ರಾಸ್‌ ಸಂಸ್ಥೆ ವಿಶ್ವಾದ್ಯಂತ ನಿಷ್ಪಕ್ಷಪಾತ ಮತ್ತು ಏಕತೆಯಿಂದ ಸ್ವಯಂಸೇವಕರ ಮಾನವೀಯತೆಯ ತಳಹದಿಯ ಆಧಾರದ ಮೇಲೆ ಕೆಲಸ ಮಾಡುತ್ತದೆ. ರೋಟರಿ ಸಹಭಾಗಿತ್ವದಲ್ಲಿ ಇಂತಹ ಭಾವನೆಗಳಿಗೆ ಧ್ವನಿ ನೀಡುವ ಕೆಲಸ ನಿರಂತರವಾಗಿರಲಿ ಎಂದರು.

ಸಮಾರಂಭದಲ್ಲಿ ದಿನದ ಅದೃಷ್ಟವಂತ ಸದಸ್ಯ ಸುರೇಶ್‌ ಸಾಲ್ಯಾನ್‌ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಜಯರಾಜ್‌ ಬಂಗೇರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next