Advertisement
ರಾತ್ರೋರಾತ್ರಿ ಆರಂಭವಾದ ಮಳೆಯು ಶನಿವಾರವಿಡೀ ನಿರಂತರವಾಗಿ ಸುರಿಯುತ್ತಿದ್ದು, ಹಲವು ತಗ್ಗುಪ್ರದೇಶಗಳು ಜಲಾವೃತವಾಗಿವೆ. ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಅಳಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ನ.25ರವರೆಗೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.
ನಿರಂತರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಅಲ್ಪಪ್ರಮಾಣದ ಭೂಕುಸಿತ, ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಮಳೆಯ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ತಮಿಳುನಾಡು, ಆಂಧ್ರದಲ್ಲಿ ಮುನ್ನೆಚ್ಚರಿಕೆ
ತಮಿಳುನಾಡಿನ ಕನ್ಯಾಕುಮಾರಿ, ತಿರುನ್ವೇಲಿ ಜಿಲ್ಲೆಗಳಲ್ಲಿ ನ. 14, 15ರಂದು ಭಾರೀ ಮಳೆ ಸುರಿಯಲಿದೆ ಎಂದು ಪ್ರಾಂತೀಯ ಹವಾಮಾನ ಇಲಾಖೆ (ಆರ್‌ಎಂಸಿ) ಮುನ್ನಚ್ಚರಿಕೆ ನೀಡಿದೆ. ತಮಿಳುನಾಡಿನ ಡೆಲ್ಟಾ ಜಿಲ್ಲೆಗಲಾದ ಅರಿಯಲೂರ್, ಕರೈಕಲ್, ನಾಗಪಟ್ಟಿಣಂ, ಪೆರಂಬದೂರ್, ಪುದುಕೊಟ್ಟೈ, ತಂಜಾವೂರು, ತಿರುಚನಾಪಲ್ಲಿ, ತಿರುವಾವೂರ್ ಹಾಗೂ ಸೇಲಂ ಜಿಲ್ಲೆಗಳಲ್ಲೂ ಅಪಾರ ಮಳೆ ಸುರಿಯಲಿದೆ ಎಂದು ಆರ್‌ಎಂಸಿ ಹೇಳಿದೆ.
Related Articles
ಚೆನ್ನೈನ ಹಲವಾರು ಪ್ರದೇಶಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ಚೆನ್ನೈ ಮಹಾನಗರ ಪಾಲಿಗೆ, ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದಕ್ಕಾಗಿ, 287 ಪೋರ್ಟಬಲ್ ಫಾಗಿಂಗ್ ಮೆಷೀನ್‌ಗಳನ್ನು ಬಳಸಲಾಗುತ್ತಿದೆ. ಜೊತೆಗೆ, 479 ಬ್ಯಾಟರಿ ಚಾಲಿತ ಸ್ಪ್ರೆàಯರ್‌ಗಳನ್ನು ಬಳಸಲಾರಂಭಿಸಲಾಗಿದೆ.
Advertisement
ಇದನ್ನೂ ಓದಿ : ಕಾರ್ಯಶೈಲಿ ಬದಲಿಸಿಕೊಳ್ಳಿ; ಹೆಚ್ ಡಿಕೆಯಿಂದ ಮುಖಂಡರಿಗೆ ಒಗ್ಗಟ್ಟು ಮತ್ತು ಸಂಘಟನೆ ಪಾಠ
ಮಳೆಬಾಧಿತ ಪ್ರದೇಶಗಳಿಗೆ ಸ್ಟಾಲಿನ್ ಭೇಟಿ ಅಗಾಧ ಮಳೆಯಿಂದ ತೀವ್ರವಾಗಿ ಹಾನಿಗೀಡಾಗಿರುವ ತಮಿಳುನಾಡಿನ ಪ್ರಾಂತ್ಯಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಶನಿವಾರ ಭೇಟಿ ನೀಡಿದ್ದಾರೆ. ಕಡಲೂರ್ ಜಿಲ್ಲೆಯ ಕುರುಂಜಿಪಾಡಿ ಪಂಚಾಯ್ತಿಯಿಂದ ಪ್ರವಾಸ ಆರಂಭಿಸಿದ ಅವರು, ಆನಂತರ ಅಡೂರು ಅಗಾರಂ, ತರಂಗಂಪಾಡಿ, ಕೇಶವನ್‌ಪಾಳಯಂಗಳಿಗೆ ಭೇಟಿ ನೀಡಿ, ಅಲ್ಲಿ ಮಳೆಯ ನಿರಾಶ್ರಿತರಿಗೆ ಅಕ್ಕಿ, ಹೊದಿಕೆ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಿದರು. ಈ ಪ್ರಾಂತ್ಯಗಳ ಆದಿ ದ್ರಾವಿಡರ್ ಸಮುದಾಯಕ್ಕೆ ಸೇರಿದ 18 ಕುಟುಂಬಗಳಿಗೆ 5.22 ಲಕ್ಷ ಮೌಲ್ಯದ ಮನೆ ನಿವೇಶನಗಳ ದಾಖಲೆಗಳನ್ನು (ಪಟ್ಟಾ) ಹಸ್ತಾಂತರಿಸಿದರು.