Advertisement

ಚೇತರಿಸಿಕೊಳ್ಳುತ್ತಿರುವ ಸಿದ್ಧಗಂಗಾಶ್ರೀ

03:00 PM Dec 21, 2018 | Team Udayavani |

ತುಮಕೂರು: ನಮ್ಮನ್ನು ಸದಾ ಆಶೀರ್ವದಿಸುವ ನಡೆದಾಡುವ ದೇವರು ಪವಾಡ ರೀತಿಯಲ್ಲಿ ಅರೋಗ್ಯದಲ್ಲಿ ಚೇತರಿಕೊಂಡು ಮಠಕ್ಕೆ ಬಂದಿದ್ದಾರೆ, ಶ್ರೀಗಳನ್ನು ಕಣ್ಣುತುಂಬಾ ನೋಡಿ ಅವರ ಆಶೀರ್ವಾದ ಪಡೆಯುವ ದಿನವೂ ನಮಗೆ ಬೇಗ ಬರಲಿ ಎನ್ನುವುದೇ ಸಿದ್ಧಗಂಗಾ ಮಠದ ಭಕ್ತರ ಆಶಯ.

Advertisement

ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಹಳೆಯ ಮಠದಲ್ಲಿಯೇ
ವಿಶ್ರಾಂತಿ ಪಡೆ‌ಯುತ್ತಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಭಕ್ತರು ಹಳೆ ಮಠದ ಕಡೆ ಸುಳಿಯದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ಭಾರೀ ಪೊಲೀಸ್‌ ಭದ್ರತೆ ಒದಗಿಸಿದ್ದಾರೆ. 

ಚೆನ್ನೆçನ ರೇಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಪಡೆದು ಇದೇ ಮೊದಲ ಬಾರಿಗೆ 13 ದಿನಗಳ ಕಾಲ ಮಠಬಿಟ್ಟು ಹೊರ ರಾಜ್ಯದಲ್ಲಿ ಚಿಕಿತ್ಸೆ ಪಡೆದು ಚೇತರಿಸಿ ಕೊಂಡು ಮಠಕ್ಕೆ ಬಂದಿರುವ ಶ್ರೀಗಳು ಗುರುವಾರ ಬೆಳಗ್ಗೆ ತಮ್ಮ ನಿತ್ಯದ ಕಾರ್ಯದಲ್ಲಿ ತಲ್ಲೀನರಾಗಿ ನಂತರ ಇಷ್ಟಲಿಂಗಪೂಜೆ ಮಾಡಿ ಪ್ರಸಾದ ಸೇವಿಸಿದರು ಎಂದು ತಿಳಿದು ಬಂದಿದೆ. 

ಬೆಳಗ್ಗೆ ಇಡ್ಲಿ, ಜೊತೆಗೆ ಒಂದೊಂದು ಪೀಸು ಪರಂಗಿ, ಸೇಬು ಇತರೆ ಹಣ್ಣುಗಳನ್ನು ಸೇವಿಸಿದ್ದಾರೆ, ಶ್ರೀಗಳ ಆರೋಗ್ಯವನ್ನು ಶ್ರೀಗಳ ಆಪ್ತ ವೈದ್ಯರಾದ ಡಾ.ಪರಮೇಶ್‌ ತಪಾಸಣೆ ಮಾಡಿದ್ದು ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಇರುವ ಬಗ್ಗೆ
ದೃಢಪಡಿಸಿದ್ದಾರೆ ಎಂದು ಗೊತ್ತಾಗಿದೆ. ಶ್ರೀಗಳಿಗೆ ದೈಹಿಕ ಸಾಮರ್ಥ್ಯ ಕಡಿಮೆಯಿರುವ ಕಾರಣ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ಮುಂದುವರೆದಿದೆ. ಹೀಗಾಗಿ ಶ್ರೀಗಳು ಇನ್ನೂ ಎರಡು ವಾರಗಳ ವಿಶ್ರಾಂತಿ ಪಡೆಯಬೇಕಾಗಿದೆ ಭಕ್ತರಾಗಲಿ ಬೇರೆ ಯಾರೂ ಶ್ರೀಗಳ ದರ್ಶನ ಮಾಡಬಾರದು ಎರಡು ವಾರಗಳ ನಂತರ ಶ್ರೀಗಳು ಎಲ್ಲರಿಗೂ ದರ್ಶನ ನೀಡಿ ಆಶೀರ್ವದಿಸುವರು ಭಕ್ತರು ಸಹಕರಿಸಬೇಕು ಎಂದು ಕಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗಸ್ವಾಮಿಯವರು ಮಠದ ಆವರಣ
ದಲ್ಲಿ ಫ‌ಲಕ ಹಾಕಿದ್ದಾರೆ. 

ಗುರುವಾರ ಎಂದಿನಂತೆ ಮಠದ ಮಕ್ಕಳು ತಮ್ಮ ಶಿಕ್ಷಣಕ್ಕೆ ಒತ್ತು ನೀಡಿದ್ದರು ಮಠಕ್ಕೆ ಶ್ರೀಗಳು ಬಂದರಲ್ಲ ಎನ್ನುವ ಸಮಾಧಾನದಿಂದ ಮಕ್ಕಳು ಇದ್ದಾರೆ, ಶ್ರೀಗಳು ನಮಗೆ ದರ್ಶನವನ್ನು ಶ್ರೀಘ್ರವಾಗಿ ಕೊಡುತ್ತಾರೆ ಎನ್ನುವ ಆಶಾಭಾವನೆ ಅವರದ್ದು, ಭಕ್ತರು ಶ್ರೀಗಳನ್ನು ನೋಡುವ ತವಕದಲ್ಲಿ ಇದ್ದಾರೆ ನಡೆದಾಡುವ ದೇವರನ್ನು ಕಣ್ಣುತುಂಬಾ ನೋಡುವ ಅವಕಾಶ ಬೇಗನೆ ಬರಲಿ ಎಂದು ಭಕ್ತರು ಹೇಳುತ್ತಿದ್ದಾರೆ. 

Advertisement

ಆದರೆ ಮಠದ ಆವರಣದಲ್ಲಿ ಪೊಲೀಸ್‌ ಭದ್ರತೆ ಇರುವುದರಿಂದ ಯಾರೂ ಹಳೆಯ ಮಠದ ಕಡೆ ಸುಳಿಯುತ್ತಿಲ್ಲ ಗುರುವಾರ ಮಠಕ್ಕೆ ಬರುವ ಭಕ್ತರ ಸಂಖೆಯೂ ಕಡಿಮೆಯೇ ಇತ್ತು. ಕೆಲವು ಭಕ್ತರು ಶ್ರೀಶಿವಕುಮಾರ ಸ್ವಾಮಿಗಳು
ಸಾಮಾನ್ಯವಾಗಿ ಕೂರುವ ಸ್ಥಳಕ್ಕೆ ನಮಸ್ಕರಿಸಿ ತೆರಳುತ್ತಿದ್ದದ್ದು ಕಂಡು ಬಂತು. 

ಭಾರೀ ಬಂದೋಬಸ್ತ್ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದ ಆವರಣದಲ್ಲಿರುವ ಹಳೆಯ ಮಠದ ಸುತ್ತಾ ಈ ಹಿಂದೆ ಎಂದೂ
ನೀಡಿರದಷ್ಟು ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ನಡೆದಾಡುವ ದೇವರನ್ನು ನೋಡಲು ಬರುವ ಭಕ್ತರು ಇಲ್ಲಿ ಒದಗಿಸಿರುವ ಭದ್ರತೆ ನೋಡಿ ಹೌರಾರುತ್ತಿದ್ದಾರೆ. ಆ ಮಟ್ಟಿಗೆ ಮಠದಲ್ಲಿ ಭದ್ರತೆ ಒದಗಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯ ಭದ್ರತೆ ಸಿದ್ಧಗಂಗಾ ಮಠದಲ್ಲಿ ವಿಧಿಸಿರುವುದು. ನಾವು ಎಂದೂ ಇಂತಹ ಭದ್ರತೆ ನೋಡಿರಲಿಲ್ಲ ಎನ್ನುವ ಮಾತು ಮಠಕ್ಕೆ ಬಂದಿದ್ದ ಭಕ್ತರಿಂದ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next