Advertisement
ಆನ್‌ಲೈನ್‌ನಲ್ಲಿ ನವೆಂಬರ್ 21ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸಬೇ ಕಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ವೃತ್ತಿಪರ ಜ್ಞಾನದ ಪರೀಕ್ಷೆ ಇರುತ್ತದೆ. ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬಹುದು. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತೀ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.
Related Articles
ವಯೋಮಿತಿ: 01-11-2022ಕ್ಕೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷಗಳು. ಅಂದರೆ ಅಭ್ಯರ್ಥಿಗಳು 02-11-1992 ಕ್ಕಿಂತ ಮುಂಚಿತವಾಗಿ ಮತ್ತು 01-11-2002ರ ಅನಂತರ ಜನಿಸಿರಬಾರದು. ಪ.ಜಾ, ಪ.ಪಂ. ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ: 3 ವರ್ಷ, ಅಂಗವಿಕಲರಿಗೆ 10 ವರ್ಷ ಸಡಿಲಿಕೆ ಇದೆ.
Advertisement
ಪರೀಕ್ಷಾ ಪ್ರಕ್ರಿಯೆ: ಮೊದಲ ಹಂತ: ಆನ್‌ಲೈನ್ ಪೂರ್ವಭಾವಿ ಪರೀಕ್ಷೆ – ಡಿಸೆಂಬರ್ 24 / 31,2022 ರಂದು.2ನೇ ಹಂತ: ಆನ್‌ಲೈನ್ ಮುಖ್ಯ ಪರೀಕ್ಷೆ- ಜನವರಿ 29, 2023.
3ನೇ ಹಂತ: ಸಂದರ್ಶನ – ಪೆಬ್ರವರಿ- ಮಾರ್ಚ್ 2023.
ನೇಮಕಾತಿ ಮೂರು ಹಂತಗಳಲ್ಲಿ ನಡೆಯಲಿದೆ. ಪೂರ್ವ ಭಾವಿ ಮತ್ತು ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಇರಲಿದೆ. ಶೈಕ್ಷಣಿಕ ಅರ್ಹತೆಗಳೇನು?
ಸರಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾನಿಲಯ/ ಸಂಸ್ಥೆಯಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು.
1) ಐಟಿ ಆಫೀಸರ್ 44 ಹುದ್ದೆ(ಸ್ಕೇಲ್-1): ಅರ್ಜಿ ಸಲ್ಲಿಸುವವರು ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಆ್ಯಪ್ಲಿಕೇಶನ್/ ಇನಾ#ರ್ಮೇಶನ್ ಟೆಕ್ನಾಲಜಿ/ ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯು ನಿ ಕೇಶನ್/ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರೆಮೆಂಟೇಶನ್‌ನಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿ ಪದವಿ ಅಥವಾ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಶನ್ / ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟುಮೆಂಟೇಶನ್/ಕಂಪ್ಯೂಟರ್ ಸೈನ್ಸ್/ ಇನಾ# ರ್ಮೇ ಶನ್ ಟೆಕ್ನಾಲಜಿ/ಕಂಪ್ಯೂಟರ್ ಆ್ಯಪ್ಲಿಕೇಶನ್‌ನಲ್ಲಿ ಸ್ನಾತ ಕೋತ್ತರ ಪದವಿ ಪಡೆದಿರಬೇಕು. 2)ಅಗ್ರಿಕಲ್ಚರ್ ಫೀಲ್ಡ… ಆಫೀಸರ್ 516 ಹುದ್ದೆ (ಸ್ಕೇಲ್-1): ಕೃಷಿತೋಟಗಾರಿಕೆ / ಪಶುಸಂಗೋಪನೆ/ ಪಶು ವಿಜ್ಞಾನ/ ಡೇರಿ ಸೈನ್ಸ್ / ಅಗ್ರಿ ಎಂಜಿನಿಯರಿಂಗ್ ಮೀನುಗಾರಿಕೆ ವಿಜ್ಞಾನ/ ಮೀನು ಸಾಕಣೆ, ಅಗ್ರಿ ಮಾರ್ಕೆಟಿಂಗ್ ಆ್ಯಂಡ್ ಕೋ ಆಪರೇಷನ್ ಕೋ ಆಪ ರೇಷನ್ ಆ್ಯಂಡ್ ಬ್ಯಾಂಕಿಂಗ್ / ಅಗ್ರೊ ಫಾರೆಸ್ಟ್ರಿಯಲ್ಲಿ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು. 3) ಲಾ ಆಫೀಸರ್ 10 ಹುದ್ದೆ (ಸ್ಕೇಲ್-1): ಎಲ್‌ಎಲ್‌ಬಿ ಪದವಿ ಮತ್ತು ಬಾರ್ ಕೌನ್ಸಿಲ್‌ನ ಸದಸ್ಯತ್ವ ಪಡೆದಿರಬೇಕು. 4) ರಾಜ್ಯ ಭಾಷಾ ಅಧಿಕಾರಿ 25 ಹುದ್ದೆ(ಸ್ಕೇಲ್-1): ಹಿಂದಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜತೆಗೆ – ಪದವಿ ಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರ ಬೇಕು ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರ ಬೇಕು. ಜತೆಗೆ ಪದವಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ವಿಷಯವಾಗಿ ಅಭ್ಯಾಸ ಮಾಡಿರಬೇಕು. 5) ಎಚ್‌ಆರ್/ಪರ್ಸನಲ್ ಆಫೀಸರ್ 15 ಹುದ್ದೆ (ಸ್ಕೇಲ್-1): ಪದವೀಧರರಾಗಿರಬೇಕು ಮತ್ತು ಪರ್ಸನಲ್ ಮ್ಯಾನೇಜ್‌ಮೆಂಟ್/ಇಂಡಸ್ಟ್ರಿಯಲ್ ರಿಲೇಶನ್ಸ್ ಎಚ್‌ಆರ್/ ಎಚ್‌ಆರ್‌ಡಿ/ ಸೋಶಿಯಲ್ ವರ್ಕ್/ ಕಾರ್ಮಿಕ ಕಾನೂನು ಇದ್ಯಾವುದಾದರೂ ವಿಷಯದಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿ ಅಥವಾ ಪೂರ್ಣಾವಧಿಯ ಸ್ನಾತಕೋತ್ತರ ಡಿಪ್ಲೊಮಾ ಮಾಡಿರಬೇಕು. 6) ಮಾರ್ಕೆಟಿಂಗ್ ಆಫೀಸರ್ 100 ಹುದ್ದೆ (ಸ್ಕೇಲ್-1): ಪದವೀಧರರಾಗಿರಬೇಕು ಮತ್ತು ಪೂರ್ಣಾವಧಿ ಎಂಎಂಎಸ್ (ಮಾರ್ಕೆಟಿಂಗ್) ಎಂಬಿಎ (ಮಾರ್ಕೆಟಿಂಗ್) /ಪಿಜಿಡಿಬಿಎ ಮಾಡಿರಬೇಕು. ನೇಮಕ ಹೇಗೆ?
ಪೂರ್ವಭಾವಿ ಪರೀಕ್ಷೆ ಒಂದು ಗಂಟೆ ಕಾಲ ನಡೆಯಲಿದ್ದು, (ಪ್ರತೀ ಪತ್ರಿಕೆಗೂ 40 ನಿಮಿಷಗಳಂತೆ ಒಟ್ಟಾರೆ 120 ನಿಮಿಷಗಳು) 125 ಅಂಕಗಳಿಗೆ 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಇಂಗ್ಲಿಷ್ ಭಾಷೆಗೆ 50, ಕ್ವಾಂಟಿಟೇಟಿವ್ ಆ್ಯಪ್ಟಿಟ್ಯೂಡ್‌ಗೆ 50 ಹಾಗೂ ರೀಸನಿಂಗ್ ಎಬಿಲಿಟಿಯ 50 ಪ್ರಶ್ನೆಗಳಿರಲಿವೆ (ಇದು ರಾಜ್‌ಭಾಷಾ ಅಧಿಕಾರಿ ಹಾಗೂ ಲಾ ಆಫೀಸರ್ ಹುದ್ದೆ ಗಳಿಗೆ ಹೊರತಾಗಿ). ಇವೆರಡೂ ಹುದ್ದೆಗಳಿಗೆ ಕ್ವಾಂಟಿಟೇಟಿವ್ ಆ್ಯಪ್ಟಿಟ್ಯೂಡ್ ಪರೀಕ್ಷೆ ಬದಲಾಗಿ General Awareness with Special Reference to Banking Industry 50 ಪ್ರಶ್ನೆಗಳಿರಲಿವೆ). ಪ್ರತೀ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಗಳಿಸ ಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸು ವುದು ಮುಖ್ಯ. (ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ). ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ವೃತ್ತಿಪರ ಜ್ಞಾನಕ್ಕೆ ಸಂಬಂಧಿಸಿದ್ದು 45 ನಿಮಿಷಗಳ ಕಾಲ ನಡೆಯಲಿದ್ದು, 60 ಪ್ರಶ್ನೆಗಳನ್ನು 60 ಅಂಕಗಳಿಗೆ ಕೇಳಲಾಗುತ್ತದೆ. ಪರೀಕ್ಷೆಗೆ 30 ನಿಮಿ ಷ ಗಳಂತೆ ಒಟ್ಟಾರೆ ಒಂದು ಗಂಟೆಯ ಅವಧಿ ನೀಡ ಲಾಗಿದ್ದು, ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿಯೇ ಉತ್ತರ ಬರೆಯಬೇಕು. ಆಯ್ಕೆ ಪಟ್ಟಿ: ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳು (ಹಂತ-2), ವಸ್ತುನಿಷ್ಠ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಹಾಗೂ ಹಂತ-3ರಲ್ಲಿ ಪಡೆದ ಅಂಕಗಳಿಗೆ ಸೇರಿಸಲಾಗುತ್ತದೆ. ಅರ್ಹತೆ ಪಟ್ಟಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ (ಹಂತ -1) ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ. ಹಂತ-2ರಲ್ಲಿ ಅಭ್ಯರ್ಥಿಗಳು ಪಡೆದಿ ರುವ ಅಂಕಗಳನ್ನು (60 ಅಂಕಗಳನ್ನು 100ಕ್ಕೆ ಪರಿವರ್ತನೆ ಮಾಡಿ) ಅದರ ಶೇ.80 ಅಂಕಗಳು ಮತ್ತು ಅಭ್ಯರ್ಥಿಗಳು ಹಂತ-3ರಲ್ಲಿ ಪಡೆದ ಅಂಕಗಳನ್ನು (100 ಅಂಕಗಳಲ್ಲಿ) ಅದರ ಶೇ.20 ಅಂಕಗಳನ್ನು ಸೇರಿಸಿ(100 ರಲ್ಲಿ) ಪರಿವರ್ತಿತ ಅಂಕಗಳನ್ನು ಒಟ್ಟು ಸೇರಿಸಿ ಅನಂತರ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಂತ- 2 ಮತ್ತು ಹಂತ- 3 ರಲ್ಲಿ ಉನ್ನತ ಶ್ರೇಣಿ ಪಡೆದ ಪ್ರತೀ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ವೆಬ್ ಲಿಂಕ್
//www.ibps.in
ಗಮನಿಸಿ: ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂ ರ್ಣ ವಾಗಿ ಅಧಿಸೂಚನೆಯನ್ನು ಓದಿಕೊಳ್ಳಬೇಕು. ನೇಮಕ ಸಂಬಂಧ ಎಲ್ಲ ಮಾಹಿತಿಯನ್ನು ಐಆಕಖ ತನ್ನ ವೆಬ್‌ಸೈಟ್‌ನಲ್ಲೇ ಪ್ರಕಟಿಸುತ್ತದೆ. ಅರ್ಹತೆಯ ಮಾನದಂಡ
ಮುಖ್ಯ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ. ಇವುಗಳಿಗೆ ಬೇಕಾಗುವ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ಮೂರನೇ ಹಂತಕ್ಕೆ ಸಂಬಂಧಿಸಿದಂತೆ (100 ಅಂಕಗಳು) ಬ್ಯಾಂಕ್ ನಡೆಸಲಿದೆ. ಸಂದಶìನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ ಅಡಿಯಲ್ಲಿ ಹಂತ-3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು “ಕೆನೆರಹಿತ ಪದರ’ ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. ಒಬಿಸಿ ಎಂದು ನೋಂದಾಯಿಸಿಕೊಂಡಿರುವ ಆದರೆ ಕೆನೆರಹಿತ ಪದರ’ ಪ್ರಮಾಣಪತ್ರ ಸಲ್ಲಿಸದಿದ್ದಲ್ಲಿ ಅವರಿಗೆ ಸಾಮಾನ್ಯ ವರ್ಗದ ಅಡಿಯಲ್ಲಿ ಸಂದರ್ಶನಕ್ಕೆ ಅವಕಾಶ ಇಲ್ಲ. ಉಗಖ ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಆದಾಯದ ಆಧಾರದ ಮೇಲೆ ಉಗಖ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಯಾವ್ಯಾವ ಬ್ಯಾಂಕ್‌ಗಳಲ್ಲಿ?
ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಮಹಾರಾಷ್ಟ್ರ
ಬ್ಯಾಂಕ್ ಆಫ್ ಇಂಡಿಯಾ
ಕೆನರಾ ಬ್ಯಾಂಕ್
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಇಂಡಿಯನ್ ಬ್ಯಾಂಕ್
ಇಂಡಿಯನ್ ಓವರ್‌ಸೀಸ್ ಬ್ಯಾಂಕ್
ಪಂಜಾಬ್ ನ್ಯಾಶನಲ್ ಬ್ಯಾಂಕ್
ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್
ಯುಕೋ ಬ್ಯಾಂಕ್
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ – ಆರ್.ಕೆ.ಬಾಲಚಂದ್ರ