Advertisement

ಜನವಿಕಾಸ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ

11:29 AM Jan 10, 2018 | Team Udayavani |

ಪುನರೂರು: ಯುವ ಮನಸ್ಸಿನಲ್ಲಿ ಸಮಾಜಮುಖಿ ಚಿಂತನೆ ಅರಳಲು, ಪುನರೂರು ಪ್ರತಿಷ್ಠಾನವು ಸಮಾಜ ಸೇವಾ ಕಾರ್ಯದ ಮೂಲಕ ಕಳೆದ ಒಂದು ವರ್ಷದಿಂದ ಯುವಜನರನ್ನು ಸಂಘಟಿಸಿಕೊಂಡು ಗ್ರಾಮೀಣ ಭಾಗದಲ್ಲಿನ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಸಜ್ಜನರನ್ನು ಜನವಿಕಾಸದತ್ತ ಸಾಗಲು ಪ್ರೇರಣೆ ನೀಡುವ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯಬೇಕು ಎಂದು ಪುನರೂರು ಪ್ರತಿಷ್ಠಾನದ
ಅಧ್ಯಕ್ಷರಾದ ದೇವಪ್ರಸಾದ್‌ ಪುನರೂರು ಹೇಳಿದರು.

Advertisement

ಅವರು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ಪುನರೂರು ಪ್ರತಿಷ್ಠಾನದ ಸಹೋದರ ಸಂಸ್ಥೆಯಾದ ಮೂಲ್ಕಿ ಜನವಿಕಾಸ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ
ವಹಿಸಿ, ಮಾತನಾಡಿದರು. ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ದೇಶದ ಭವಿಷ್ಯವನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಯುವಜನರಲ್ಲಿದೆ. ಅವರಿಗೆ ಸೂಕ್ತವಾದ ಸಮಯದಲ್ಲಿ ಉಪಯುಕ್ತ ಮಾರ್ಗದರ್ಶನ ನೀಡಿದಲ್ಲಿ ಮಾತ್ರ ಅವರು ಸಹ ಸನ್ಮಾರ್ಗದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು.

ಪಟೇಲ್‌ ವಾಸುದೇವ ರಾವ್‌ ಪುನರೂರು ಶುಭಹಾರೈಸಿದರು. ನೂತನ ಅಧ್ಯಕ್ಷರಾದ ಗೀತಾ ಶೆಟ್ಟಿಯವರ ತಂಡಕ್ಕೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಪುನರೂರು ಪ್ರತಿಷ್ಠಾನದ ಪ್ರ.ಕಾ. ಶ್ರೇಯಾ ಪುನರೂರು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಭಾಗ್ಯ ರಾಜೇಶ್‌, ಜತೆ ಕಾರ್ಯದರ್ಶಿ ಪ್ರಶಾಂತಿ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ
ಪಿ. ಎಸ್‌. ಸುರೇಶ್‌ ರಾವ್‌, ಆನಂದ ಮೇಲಾಂಟ, ಶೋಭಾ ರಾವ್‌, ದಾಮೋದರ ಶೆಟ್ಟಿ, ಜೀವನ್‌ ಶೆಟ್ಟಿ, ಶಶಿಕರ ಕೆರೆಕಾಡು ಉಪಸ್ಥಿತರಿದ್ದರು. ಪ್ರಾಣೇಶ್‌ ಭಟ್‌ ದೇಂದಡ್ಕ ಸ್ವಾಗತಿಸಿ, ನಿರೂಪಿಸಿದರು. ಪ್ರ.ಕಾ. ಕೆ. ರಾಘವೇಂದ್ರ ಭಟ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next