Advertisement

China: ಚೀನಾ ಜತೆಗೆ ಸಂವಹನಕ್ಕೆ ಮ್ಯಾಂಡ್ರಿಯನ್‌ ಭಾಷಾ ತಜ್ಞರ ನೇಮಕ

10:42 PM Oct 08, 2023 | Team Udayavani |

ನವದೆಹಲಿ: ಚೀನಾ ನಡೆಸುವ ಕಿಡಿಗೇಡಿತನದ ಸೂತ್ರಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಆ ದೇಶದೊಂದಿಗಿನ ಸಂವಹನವನ್ನು ಸುಲಭವಾಗಿಸಲು ದೇಶದ ಪ್ರಾದೇಶಿಕ ಸೇನೆ (ಟೆರಿಟೋರಿಯಲ್‌ ಆರ್ಮಿ) ಮ್ಯಾಂಡ್ರಿಯನ್‌ ಭಾಷಾ ಪರಿಣತರನ್ನು ತನ್ನ ಪಡೆಗೆ ಸೇರ್ಪಡೆಗೊಳಿಸಿದೆ.

Advertisement

ಐವರು ಸದಸ್ಯರ ಮ್ಯಾಂಡ್ರಿಯನ್‌ ಭಾಷಾ ತಜ್ಞರು ಭಾರತ ಮತ್ತು ಚೀನಾ ಸೇನಾಧಿಕಾರಿಗಳ ನಡುವೆ ನಡೆಯಲಿರುವ ಮಾತುಕತೆಗಳ ವೇಳೆ ಸಂಪರ್ಕ ಸೇತುವಾಗಿ ಕೆಲಸ ಮಾಡಲಿದ್ದಾರೆ. ಇವರನ್ನು ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಲಾಗುತ್ತದೆ. ಅವರ ನೆರವಿನಿಂದ ಭಾರತ ಸೇನೆ ಹೊಂದಿರುವ ನಿಲುವುಗಳನ್ನು ಸುಲಭವಾಗಿ ಚೀನಾಗೆ ದಾಟಿಸಲು ಸಾಧ್ಯವಾಗಲಿದೆ. ಅಂತೆಯೇ ಚೀನಾದ ಅಭಿಪ್ರಾಯಗಳನ್ನು ಆಲಿಸಿ, ತಿಳಿದುಕೊಳ್ಳಲೂ ಅವರು ನೆರವಾಗಲಿದ್ದಾರೆ. ದೌಲತ್‌ ಬೇಗ್‌ ಓಲ್ಡಿ, ಕಿಬಿತು, ಚುಶುಲ್‌, ತವಾಂಗ್‌ ಮತ್ತು ನಾಥುಲಾ ಪಾಸ್‌ ಎಂಬ ಐದು ಸ್ಥಳಗಳಲ್ಲಿ 2 ದೇಶಗಳ ಸೇನಾಧಿಕಾರಿಗಳ ಸಭೆ ನಡೆಯುತ್ತದೆ.

ಇದಲ್ಲದೆ ಸೈಬರ್‌ ಭದ್ರತೆಗೆ ಸಂಬಂಧಿಸಿದ ವಿಶೇಷ ತಜ್ಞರನ್ನು ನೇಮಕ ಮಾಡುವ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಲಾಗುತ್ತಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next